ಬಂಟ್ವಾಳ ತಾಲ್ಲೂಕಿನ ಬಹುತೇಕ ಕಡೆಗಳಲ್ಲಿ ಸುಮಾರು ನೂರಕ್ಕೂ ಮಿಕ್ಕಿ ಮಂದಿ ಶಂಕಿತ ಡೆಂಗೆ ಜ್ವರಬಾಧೆಯಿಂದ ಬಳಲುತ್ತಿದ್ದು, ಇಲ್ಲಿನ ಒಟ್ಟು ಒಂಭತ್ತು ಫಾಗಿಂಗ್ ಯಂತ್ರಗಳ ಪೈಕಿ ಒಂದು ಮಾತ್ರ ಕಾರ್ಯಚರಿಸುತ್ತಿರುವ ಮೂಲಕ ಇಲ್ಲಿನ ಆರೋಗ್ಯ ಇಲಾಖೆಗೆ ಹಿಡಿದ ಅನಾರೋಗ್ಯವನ್ನು ಬಹಿರಂಗಪಡಿಸುತ್ತಿರುವುದು ಕಂಡು ಬಂದಿದೆ.
ಕಳೆದ 2013ರಲ್ಲಿ ತಾಲ್ಲೂಕಿನ ಕೆಲವೆಡೆ ಕಾಣಿಸಿಕೊಂಡಿದ್ದ ಡೆಂಗೆ ಮತ್ತು ಇಲಿಜ್ವರ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ತಾಲ್ಲೂಕಿಗೆ ಒಟ್ಟು ಒಂಭತ್ತು ಫಾಗಿಂಗ್ ಯಂತ್ರ ದೊರೆತಿದ್ದು, ಇದೀಗ ಅವೆಲ್ಲವೂ ಕೆಟ್ಟು ಹೋಗಿದೆ ಎನ್ನುತ್ತಿದ್ದಾರೆ. ‘ಬ್ಲ್ಯಾಕ್ ಸ್ಟೋನ್’ ಹೆಸರಿನ ಫಾಂಗಿಂಗ್ ಯಂತ್ರ ಕಳಪೆ ಗುಣಮಟ್ಟದಿಂದ ಕೂಡಿದ್ದು, ಫಾಗಿಂಗ್ ವೇಳೆ ಉಪಯೋಗಿಸುವ ಔಷಧಿಗೆ ಬದಲಾಗಿ ಪರಿಸರವಿಡೀ ಸೀಮೆ ಎಣ್ಣೆ ವಾಸನೆ ಬರುತ್ತಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.

17btl-faging-trining

17btl-faging

17btl-faging-1
ಇದೀಗ ಏಕೈಕ ಫಾಗಿಂಗ್ ಯಂತ್ರವನ್ನು ಪುಂಜಾಲಕಟ್ಟೆ ಆರೋಗ್ಯ ಕೇಂದ್ರ ಸಹಾಯಕ ಆರೋಗ್ಯಾಧಿಕಾರಿ ಅನ್ವರ್ ಅವರೊಬ್ಬರೇ ಹಿಡಿದುಕೊಂಡು ಗ್ರಾಮೀಣ ಪ್ರದೇಶಗಳಿಗೆ ಅಲೆದಾಡುತ್ತಾ ಅಲ್ಲಿನ ಗ್ರಾಮಸ್ಥರನ್ನೇ ಬಳಸಿಕೊಂಡು ಫಾಗಿಂಗ್ ತರಬೇತಿ ನೀಡುತ್ತಿದ್ದಾರೆ. ಈ ಫಾಗಿಂಗ್ ಯಂತ್ರ ಕೂಡಾ ಪದೇ ಪದೇ ಕೈಕೊಡುತ್ತಿದ್ದು, ಇದನ್ನು ದುರಸ್ತಿಗೊಳಿಸಲು ಯಾರಿಗೂ ತಿಳಿಯದಿರುವುದೇ ನಮಗೆ ದೊಡ್ಡ ಸಮಸ್ಯೆಯಾಗಿದೆ ಎನ್ನುತ್ತಿದ್ದಾರೆ. ಇದೇ ಫಾಗಿಂಗ್ ತಂತ್ರ ಬಳಸಿಕೊಂಡು ಸಂಗಬೆಟ್ಟು, ಸಿದ್ಧಕಟ್ಟೆ, ರಾಯಿ, ಕೈತ್ರೋಡಿ, ಅರಳ, ಪಂಜಿಕಲ್ಲು ಮತ್ತಿತರ ಕಡೆಗಳಲ್ಲಿ ಸಾಧ್ಯವಾದಷ್ಟು ಫಾಗಿಂಗ್ ಮಾಡಲಾಗುತ್ತಿದೆ ಎಂದು ಅನ್ವರ್ ಪ್ರತಿಕ್ರಿಯಿಸಿದ್ದಾರೆ. ರಾಯಿ ಸಮೀಪದ ಕೈತ್ರೋಡಿ ಪರಿಸರದಲ್ಲಿ ಇಲ್ಲಿನ ಆರೋಗ್ಯ ಕೇಂದ್ರದ ಶುಶ್ರೂಷಕಿ ಸುನೀತಾ ಮತ್ತು ಸ್ಥಳೀಯ ಕಂಬಳದಡ್ಡ ನಿವಾಸಿ ಉಮೇಶ ಶೆಟ್ಟಿ ಎಂಬವರ ಮೂಲಕ ಫಾಗಿಂಗ್ ನಡೆಸಿರುವುದಾಗಿ ತಿಳಿಸಿದ್ದಾರೆ.
ತಾಲ್ಲೂಕಿನಲ್ಲಿ ಬಂಟ್ವಾಳ, ವಾಮದಪದವು, ವಿಟ್ಲ ಸಮುದಾಯ ಆರೋಗ್ಯ ಕೇಂದ್ರ ಮಾತ್ರವಲ್ಲದೆ ಒಟ್ಟು 17 ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಇದಕ್ಕೆ ಪುಣಚ ಸರ್ಕಾರಿ ಆರೋಗ್ಯ ಕೇಂದ್ರವೊಂದು ಹೊಸದಾಗಿ ಸೇರ್ಪಡೆಗೊಂಡಿದ್ದು, ತಾಲ್ಲೂಕಿನಲ್ಲಿ ಒಟ್ಟು 92 ಆರೋಗ್ಯ ಉಪಕೇಂದ್ರವೂ ಇದೆ. ಈಗಾಗಲೇ ಬಹುತೇಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು, ಶುಶ್ರೂಷಕಿಯರು, ಪ್ರಯೋಗಾಲಯ ತಜ್ಞರು ಮತ್ತು ಔಷಧಿ ವಿತರಿಸುವ ಫಾರ್ಮರೆಸಿಸ್ಟ್ ಕೊರತೆಯೂ ಕಾಡುತ್ತಿದೆ.
ಕಳೆದ ಐದು ವರ್ಷಗಳ ಹಿಂದೆ ಚಿಕುನ್ಗುನ್ಯಾ ಜ್ವರಬಾಧೆಯಿಂದ ತತ್ತರಿಸಿ ಹೋಗಿರುವ ಇಲ್ಲಿನ ಜನತೆಗೆ ಈ ಬಾರಿ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಗ್ರಾಮೀಣ ಪ್ರದೇಶದಲ್ಲಿ ದಿನೇ ದಿನೇ ‘ಡೆಂಗೆ ಜ್ವರಬಾಧೆ’ ವಿಪರೀತವಾಗಿ ಕಾಡತೊಡಗಿದೆ.
ತಾಲ್ಲೂಕಿನ ರಾಯಿ, ವಾಮದಪದವು, ಪಂಜಿಕಲ್ಲು, ವಿಟ್ಲ, ಪುದು, ಸಜಿಪನಡು, ನಾವೂರ, ಮಾಣಿ ಮತ್ತಿತರ ಕಡೆಗಳಲ್ಲಿ ಡೆಂಗೆ ಜ್ವರಬಾಧೆ

By Suddi9

Leave a Reply

Your email address will not be published. Required fields are marked *