ಮೂಡುಬಿದಿರೆ : ಧ್ವೇಷ ಮತ್ತು ಆವೇಶದೊಂದಿಗೆ ವಾಹನಗಳನ್ನು ಚಾಲನೆ ಮಾಡಿದರೆ ಅಪಘಾತಗಳು ಸಂಭವಿಸಲು ಕಾರಣವಾಗಿರುತ್ತದೆ. ವಾಹನ ಚಾಲನೆ ಮಾಡುವಾಗ ರಸ್ತೆಯ ಪಥಗಳನ್ನು ಗಮನಿಸಬೇಕು ಮತ್ತು ಓವರ್ಟೇಕ್ ಮಾಡಬಾರದು. ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಿದರೆ ಅಪಘಾತಗಳನ್ನು ತಡೆಯಲು ಸಾಧ್ಯವಿದೆ ಎಂದು ಮೂಡುಬಿದಿರೆ ಕೊಪರ್ುಸ್ ಕ್ರಿಸ್ತಿ ಚರ್ಚ್ ಧರ್ಮಗುರು ರೆ/ಫಾ/ ಆಸ್ಟೀನ್ ಪೇರಿಸ್ ಹೇಳಿದರು.
ಅವರು ಲಯನ್ಸ್ ಕ್ಲಬ್ ಮೂಡುಬಿದಿರೆ, ಕೆಥೋಲಿಕ್ ಸಭಾ ಮೂಡುಬಿದಿರೆ ವಲಯ, ಮಂಜುಶ್ರೀ ಡ್ರೈವಿಂಗ್ ಸ್ಕೂಲ್ ಹಾಗೂ ಎ.ಜೆ.ಸೋನ್ಸ್ ಐಟಿಐ ಇವುಗಳ ಸಂಯುಕ್ತ ಆಶ್ರಯದಲ್ಲಿ ಸಮಾಜ ಮಂದಿರದ ಮೀಟಿಂಗ್ ಹಾಲ್ನಲ್ಲಿ ಗುರುವಾರ ನಡೆದ “ರಸ್ತೆ ಸುರಕ್ಷತೆ ಹಾಗೂ ಅಪಘಾತ ತಡೆ ಮಾಹಿತಿ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಲಯನ್ಸ್ನ ಮಾಜಿ ಪ್ರಾಂತೀಯ ಅಧ್ಯಕ್ಷ ಶಿವಪ್ರಸಾದ ಹೆಗ್ಡೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ ವಾಹನ ಚಾಲನೆ ಮಾಡುವಾಗ ತಾನು ಪರಿಣತ ಎಂಬ ಅತಿಯಾದ ಆತ್ಮ ವಿಶ್ವಾಸ ಬೇಡ ಆದರೆ ಜಾಗೃತಿ ಬೇಡ. ಕೆಲವೊಂದು ಸಲ ಅತಿಯಾದ ಆತ್ಮವಿಶ್ವಾಸವೂ ಉಪಯೋಗಕ್ಕೆ ಬಾರದು ಆದ್ದರಿಂದ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವ ಮೂಲಕ ಅಪಘಾತಗಳನ್ನು ತಡೆಯಬಹುದು ಎಂದು ಹೇಳಿದರು.
ಲಯನ್ಸ್ ಅಧ್ಯಕ್ಷ ಆಲ್ವೀನ್ ಮಿನೇಜಸ್ ಅಧ್ಯಕ್ಷತೆಯನ್ನು ವಹಿಸಿದ್ದರು. ಲಯನ್ಸ್ ಕಾರ್ಯದರ್ಶಿ ವಾಸು ಉಪಸ್ಥಿತರಿದ್ದರು. ಲಯನ್ ಮುನ್ನಾರಾವ್ ಕಾರ್ಯಕ್ರಮ ನಿರೂಪಿಸಿದರು. ಕೆಥೋಲಿಕ್ ಸಭಾದ ಅಧ್ಯಕ್ಷ ಮೆಲ್ವೀನ್ ಡಿ”ಕೋಸ್ತಾ, ವಂದಿಸಿದರು.


