ಬಂಟ್ವಾಳ: ಬಂಟ್ವಾಳ ತಾಲ್ಲೂಕಿಗೆ ಸಮೀಪದ ಕುಕ್ಕಳ ಗ್ರಾಮದ ಮಂಜಲ್ಪಲ್ಕೆ ನಿವಾಸಿ ಅಬ್ದುಲ್ ಹಮೀದ್(52) ಇವರು ಹೃದಯಾಘಾತದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು.

ಮೃತರಿಗೆ ಪತ್ನಿ , ಮೂವರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಇವರು ಉತ್ತಮ ವಾಲಿಬಾಲ್ ಆಟಗಾರರಾಗಿದ್ದು, ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಕ್ಲಬ್ನ ಸದಸ್ಯರಾಗಿ, ಪುಂಜಾಲಕಟ್ಟೆ ಕೇಂದ್ರ ಜುಮ್ಮಾ ಮಸೀದಿ ಕೋಶಾಧಿಕಾರಿಯಾಗಿದ್ದರು.
