ಬಂಟ್ವಾಳ: ಬಂಟ್ವಾಳ ಪುರಸಭೆಯ ವಾಪ್ತಿಯಲ್ಲಿ ಎಲ್ಲಿ ನೋಡಿದರೂ ಕಸ ಕಸ ಕಸ, ಕಸ ವಿಲೇವಾರಿಯಾಗದೇ ವಾರಗಟ್ಟಲೇ ಕಳೆದಿದೆ, ವಾಸನೆಯಿಂದ ಜನ ವಾಸ ಮಾಡಲು ಸಾಧ್ಯವಾಗದ ಪರಿಸ್ಥಿತಿ, ದುರ್ವಾಸನೆಯುಕ್ತ ಮಲಿನ ನೀರು ಕಸದ ರಾಶಿಯಿಂದ ಹರಿದು ಹೋಗುತ್ತಿದ್ದು ಸುತ್ತಮುತ್ತಲ ಮನೆಯ ಬಾವಿಗೆ ಇಂಗುತ್ತಿದೆ. ಈ ಎಲ್ಲದರ ಕಾರಣದಿಂದಾಗಿ ಮಾರಕ ಸಾಂಕ್ರಮಿಕ ರೋಗದ ಭೀತಿ ಯಲ್ಲಿ ಜನ ನಲುಗಿ ಹೋಗಿದ್ದಾರೆ. ಇದು ಪುರಸಭೆಯ ವ್ಯಾಪ್ತಿಯಲ್ಲಿ ಕಸ ಸಮರ್ಪಕ ವಿಲೇವಾರಿಯಾಗದ ಪರಿಣಾಮವಾಗಿ ಆಗುತ್ತಿರುವ ಅವಾಂತರ. ಡೆಂಗ್ಯೂ ಜ್ವರ ಬಂಟ್ವಾಳದ ಸುತ್ತ ಮುತ್ತ ಕಾಣಿಸಿಕೊಂಡಿದ್ದು, ಕಂಟ್ರೋಲ್ ಮಾಡುವಲ್ಲಿ ಆರೋಗ್ಯ ಇಲಾಖೆ ವಿಫಲವಾಗಿದೆ. ದಿನೇ ದಿನೇ ಜ್ವರ ಹೆಚ್ಚುತ್ತಿದ್ದು ಸರಿಯಾದ ಮಾಹಿತಿಯನ್ನು ಆರೋಗ್ಯ ಇಲಾಖೆ ನೀಡುತ್ತಿಲ್ಲ. ಆದರೂ ಆರೋಗ್ಯ ಕೆಡುತ್ತಿರುವುದಕ್ಕೆ ಕಾರಣವಾಗುತ್ತಿರುವ ತ್ಯಾಜ್ಯ ಸಮಸ್ಯೆಗೆ ಪೂರ್ಣವಾದ ಪರಿಹಾರ ಕಂಡುಕೊಳ್ಳುವಲ್ಲಿ ಆರೋಗ್ಯ ಇಲಾಖೆ ಮತ್ತು ಪುರಸಭೆ ಎಡವಿದೆ ಎಂದು ಆರೋಪ ವ್ಯಕ್ತವಾಗಿದೆ.

1 (1)

2

3 (1)

4 (1)

5

6
ಬಂಟ್ವಾಳ ಪೇಟೆಗೆ ಹೋಗುವ ಸರ್ಕಲ್ ಬಳಿಯಲ್ಲಿ ಕಸದ ರಾಶಿ ಪ್ರಯಾಣಿಕರನ್ನು ಸ್ವಾಗತಿಸುವುದು, ಮುಂದೆ ಹೋದರೆ ಬಡ್ಡಕಟ್ಟೆ, ಕೊಟ್ರಮಣಗುಂಡಿ, ಕೈಕಂ¨, ಬಿ.ಸಿ.ರೋಡ್ ಬಸ್ಸ್ ನಿಲ್ದಾಣದ ಬಳಿ ರಾಶಿ ಹಾಕಿರುವ ಕಸ, ಕೈಕುಂಜೆ, ಗೂಡಿನಬಳಿ, ಪಾಣೆಮಂಗಳೂರು ಪೇಟೆ, ಮಸೀದಿ, ನಂದಾವರ ದೇವಸ್ಥಾನ, ಶಾರದಾ ಹೈಸೂಲ್ ಎದುರು, ಬೋಗೋಡಿ, ಮೆಲ್ಕಾರ್ ಪೇಟೆ ಹೀಗೆ ಪುರಸಭಾ ವ್ಯಾಪ್ತಿಯ ಉದ್ದಗಲಕ್ಕೂ ಕಸವನ್ನು ಎಸೆಯಲಾಗುತ್ತಿದೆ. ಕಸವನ್ನು ಹಾಕಲೂ ತೊಟ್ಟಿ ಕೂಡಾ ಇಲ್ಲ. ರಸ್ತೆಯ ಬದಿಯಲ್ಲಿ ಎಸದು ಹೋಗುವ ಸಾರ್ವಜನಿಕರು ಅದರಿಂದ ಇತರರಿಗೆ ಹಿಂಸೆ, ಅನ್ಯಾಯವಾಗುತ್ತದೆುನ್ನುವ ಯೋಚನೆಯನ್ನು ಕೂಡಾ ಮಾಡದೇ ಇರವುದು ದುರಂತವೇ ಸರಿ.
ಕಸದ ಸಮಸ್ಯೆಯನ್ನು ಶಾಶ್ವತವಾಗಿ ನಿವಾರಣೆ ಮಾಡುವ ನಿಟ್ಟಿನಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ಮಾಡಲು ಪುರಸಭೆಯ ಆಡಳಿತ ಮಾಡಿತ್ತು. sಪುರಸಭೆಯ ವ್ಯಾಪ್ತಿಯಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ಮಾಡಲು ಸಾಕಷ್ಟು ಜಮೀನಿನ ಕೊರತೆಯ ಕಾರಣ ಕಂಚಿನಡ್ಕ ಪದವು ಎಂಬಲ್ಲಿ ಕಸ ವಿಲೇವಾರಿ ಘಟಕವನ್ನು ಸ್ಥಾಪನೆ ಪುರಸಭೆ ಉದ್ದೇಶಿಸಿದ್ದು , ಸರಕಾರದ ಅನುಮತಿ ಸಿಕ್ಕಿ ಮುಕ್ಕಾಲು ಭಾಗ ಕಾಮಗಾರಿ ಕೂಡಾ ಮುಗಿದಿದೆ. ಪ್ರಸ್ತುತ ಇಲ್ಲಿ ಘಟಕ ಮಾಡಬಾರದು ಸ್ಥಳೀಯವಾಗಿ ಮನೆ ಮತ್ತು ಶಾಲೆ ಹಾಗೂ ಅಂಗನವಾಡಿ ಇದೆ ಎಮದು ಸ್ಥಳಿಯಯರು ಗ್ರಾಮ ಪಂಚಾಯತ್ ಮತ್ತು ಪುರಸಭೆಗೆ ಮನವಿ ನೀಡಿದರು. ಸ್ಥಳಿಯರಿಗೆ ಬದಲಿ ವ್ಯವಸ್ಥೆ ಕಲ್ಪಿಸಿ ಮತ್ತೆ ಮುಂದಿನ ಕಾಮಗಾರಿ ನಡೆಸಿ ಎಂದು ಸ್ಥಳಿಯರ ವಿರೋದದ ಹಿನ್ನಲೆಯಲ್ಲಿ ಕಾಮಗಾರಿಯನ್ನು ಪುರಸಭೆ ಅರ್ದಕ್ಕೆ ನಿಲ್ಲಿಸಿದೆ.
ಆರೋಗ್ಯ ಸಚಿವರ ವಿರೋಧ: ಕಂಚಿನಡ್ಕ ಪದವು ತ್ಯಾಜ್ಯ ಸಂಸ್ಕರಣಾ ಘಟಕವನ್ನು ಮರು ಟೆಂಡರ್ ಕರೆಯಲಾಗಿದೆ,ಆದರೆ ಅಲ್ಲಿನ ಸಮಸ್ಯೆಯ ಬಗ್ಗೆ ಯಾವ ನಿರ್ದಾರ ತೆಗೆದುಕೊಂಡಿದ್ದಿರಿ ಎಂದು ಉಸ್ತುವಾರಿ ಸಚಿವರು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರಲ್ಲಿ ಮಂಗಳವಾರ ಸಚಿವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕೇಳಿದಾಗ ಸ್ಥಳಿಯರಿಗೆ ನಿವೇಶನದ ವ್ಯವಸ್ಥೆ ಕಲ್ಪಸುವ ಬಗ್ಗೆ ಯೋಚನೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಬಳಿಕ ನೆಡದ ಸಾಂಕ್ರಮಿಕ ರೋಗದ ಹಿನ್ನಲೆಯಲ್ಲಿ ತಾ.ಪಂ.ನಲ್ಲಿ ನಡೆಸಿದ ಸಭೆಯಲ್ಲಿ ತ್ಯಾಜ್ಯ ದ ಬಗ್ಗೆ ಪ್ರಸ್ತಾಪವಾಗಿ ಕಂಚಿನಡ್ಕ ಪದವು ಸಂಸ್ಕರಣಾ ಘಟಕಕ್ಕೆ ಕಸವನ್ನು ಕೊಂಡು ಹೋಗುವ ಬಗ್ಗೆ ಕೇಳಿದಾಗ ಸಚಿವರು ಕಂಚಿನಡ್ಕ ವಿಷಯ ಬಿಟ್ಟು ಬಿಡಿ ಕಸವನ್ನು ಮಂಗಳೂರಿಗೆ ಕಳುಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಉಸ್ತುವಾರಿ ಸಚಿವರು ಕಂಚಿನಡ್ಕ ಪದವು ತ್ಯಾಜ್ಯ ಸಂಸ್ಕರಣಾ ಘಟಕ ಶೀಘ್ರವಾಗಿ ಆದರೆ ಇಲ್ಲಿನ ನಿರ್ಮಲ ಬಂಟ್ವಾಳದ ಕನಸು ನನಸಾಗುತ್ತದೆ ಎಮದು ಕನಸು ಕಂಡರೆ , ಆರೋಗ್ಯ ಸಚಿವರು ಮಾತ್ರ ಕಂಚಿನಡ್ಕ ಪದವು ತ್ಯಾಜ್ಯ ವಿಲೇವಾರಿ ಘಟಕದ ನಿರ್ಮಾಣಕ್ಕೆ ಬಿಡೆನು ಎಂದಿದ್ದಾರೆ. ಒಟ್ಟಿನಲ್ಲಿ ಬಂಟ್ವಾಳದ ತ್ಯಾಜ್ಯ ರಸ್ತೆಯ ಬದಿಯಲ್ಲಿ ಬಿದ್ದು ಕೊಳೆತು ನಾರುತ್ತಿರುವ ದೃಶ್ಯ ಇವರಿಗೆ ಶೋಭೆ ಎನಿಸುತ್ತದೋ ಏನೊ?. ಆರೋಗ್ಯ ಸಚಿವರ ಊರಲ್ಲಿ ತ್ಯಾಜ್ಯ ದ ಸಮಸ್ಯೆ ನಿವಾರಣಗೆ ಯಾಕೆ ಹೆಚ್ಚು ಕೊಡುತ್ತಿಲ್ಲ ಎನ್ನುವುದು ಕೂಡಾ ಕಗ್ಗಂಟ್ಟಾಗಿ ಉಳಿದಿದೆ. ಈ ನಡುವೆ ಪುರಸಭೆಗೆ ಧರ್ಮಸಂಕಟ ವಾಗುತ್ತಿದೆ. ಕಸ ವಿಲೇವಾರಿ ಮಾಡಲು ಗುತ್ತಿಗೆದಾರರ ಸಮಸ್ಯೆಯಾದರೆ ಶಾಶ್ವತವಾದ ಪರಿಹಾರಕ್ಕೆ ಇಲ್ಲಿನ ರಾಜಕೀಯ ವ್ಯವಸ್ಥೆ ಅಡ್ಡ ಬರುತ್ತಿದೆ.

ಪಾಣೆಮಂಗಳೂರು ಪೇಟೆಯಿಂದ ನಂದಾವರಕ್ಕೆ ಸಂಪರ್ಕಿಸುವ ರಸ್ತೆ ತಿರುವಿನಲ್ಲಿ ಕಸದ ರಾಶಿಯೊಂದು ಗುಡ್ಡೆಯಾಕರಕ್ಕೆ ಬೆಳೆಯುತ್ತಿದೆ. ಮಳೆಯ ನೀರು ಬಿದ್ದು ಕೊಳೆತ ತ್ಯಾಜ್ಯ ರಾಡಿಯಾಗಿ ದುರ್ವಾಸನೆ ಬೀರುತ್ತಿದೆ. ಸೀಯಾಳ ಚಿಪ್ಪು, ಪ್ಲಾಸ್ಟಿಕ್ ಬಾಟಲಿ, ಪ್ಲಾಸ್ಟಿಕ್ ಕೈ ಚೀಲಗಳು ಕಸದ ರಾಶಿಯಲ್ಲಿ ಹೇರಳವಾಗಿದ್ದು ಅದರೊಳಗೆ ನೀರು ತೊಂಬಿಕೊಂಡು ಸೊಳ್ಳೆಗಳ ಉತ್ಪಾದನೆಗೆ ಕಾರಣವಾಗುತ್ತಿದೆ. ಇಲ್ಲಿಂದ ಕೊಳಚೆ ನೀರು ರಸ್ತೆಯ ಮೂಲಕ ಹರಿದು ಹೋಗುತ್ತಿದ್ದು ಇದನ್ನೇ ಮೆಟ್ಟಿಕೊಂಡು ಜನ ನಡೆದಾಡಬೇಕಾಗಿದೆನಿತ್ಯ ಸಾವಿರಾರು ಜನ ಈ ರಸ್ತೆಯನ್ನು ಅವಲಂಬಿಸಿರುವುದರಿಂದ ಜನರಲ್ಲಿ ರೋಗ ಭೀತಿ ಉಂಟಾಗಿದೆ.
ಪಾಣೆಮಂಗಳೂರಿನ ಶ್ರೀ ಶಾರದಾ ಪ್ರೌಡಶಾಲೆ ಹಾಗೂ ಎಸ್‍ಎಲ್‍ಎನ್‍ಪಿ ಶಾಲೆಯ ಬಳಿ ಕಸದ ರಾಶಿ ರಸ್ತೆಯನ್ನೇ ಆಕ್ರಮಿಸಿಕೊಳ್ಳುವಷ್ಟರ ಮಟ್ಟಿಗೆ ವ್ಯಾಪಿಸಿಕೊಂಡಿದೆ. ಕೋಳಿಯ ತ್ಯಾಜ್ಯಗಳನ್ನು ಇದೇ ಕಸದ ರಾಶಿಗೆ ಎಸೆಯಲಾಗುತ್ತಿದ್ದು ಕೋಳಿಗರಿಗಳು ರಸ್ತೆಯ ಸುತ್ತಮುತ್ತ ಹರಡಿಕೊಂಡಿದೆ. ಕೊಳೆತ ಕಸದ ರಾಶಿಯಲ್ಲಿ ಹುಳಗಳು ಹುಟ್ಟಿಕೊಂಡು ನಿಂತ ಮಳೆನೀರಲ್ಲಿ ಜಿನುಗುಟ್ಟುತ್ತಿದೆ. ಈ ನೀರು ಪಕ್ಕದ ದೊಡ್ಡ ತೋಡಿಗೆ ಹರಿದು ನದಿ ಸೇರುತ್ತಿದೆ. ಇಲ್ಲಿ ಹಾದು ಹೋಗಿರುವ ರಸ್ತೆಯಂಚಿಗೆ ತಾಗಿಕೊಂಡೆ ಎರಡು ಶಾಲೆಗೆ ಸೇರಿದ ಆಟದ ಮೈದಾನವಿದೆ. ಶಾಲೆಗೆ ಬರುವ ಸುಮಾರು ಎರಡೂ ಸಾವಿರಕ್ಕಿಮತಲೂ ಅಧಿಕ ಮಂದಿ ವಿದ್ಯಾರ್ಥಿಗಳು ಮೈದಾನವನ್ನು ಆಟಕ್ಕೆ ಬಳಸಿಕೊಳ್ಳುವುದರಿಂದ ಎಲ್ಲಿ ರೋಗಗಳು ವಿದ್ಯಾರ್ಥಿಗಳಿಗೆ ಅಂಟಿಕೊಳ್ಳುವುದೋ ಎನ್ನುವ ಆತಂಕ ಶಿಕ್ಷಕರನ್ನು ಕಾಡಲಾರಂಭಿಸಿದೆ.
ವಿದ್ಯಾರ್ಥಿಗಳ ಆರೋಗ್ಯಕ್ಕೆ ತೊಂದರೆ ನೀಡುವ ಕೊಳೆತ ಕಸದ ರಾಶಿಯನ್ನು ಇಲ್ಲಿಂದ ತೆರವುಗೊಳಿಸಿ ಪರಿಸರದಲ್ಲಿ ಶುಚಿತ್ವ ಕಾಪಾಡುವಂತೆ ಒತ್ತಾಯಿಸಿ ಎರಡೂ ಶಾಲೆಗಳ ವತಿಯಿಂದ ಪ್ರತ್ಯೇಕವಾಗಿ ರಾಜ್ಯ ಪರಿಸರ ಸಚಿವ ಬಿ.ರಮಾನಾಥ ರೈಯವರಿಗೆ ಮನವಿ ಸಲ್ಲಿಸಲಾಗಿದೆ. ಯಾರಿಂದಲೂ ಸರಿಯಾದ ಸ್ಪಂದನೆ ದೊರೆತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಹಲವು ಬಾರಿ ಮನವಿ ಮಾಡಿದರೂ ಕಸ ವಿಲೇವಾರಿಗೆ ನಿರ್ಲಕ್ಷ ಮಾಡುತ್ತಿರುವ ಸ್ಥಳೀಯ ಪುರಸಭೆಯ ವಿರುದ್ದ ಪ್ರತಿಭಟನೆ ಮಾಡಲು ಸ್ಥಳೀಯರು ನಿರ್ಧರಿಸಿದ್ದಾರೆ. ಪೇಟೆಯಲ್ಲಿ ಸಾರ್ವಜನಿಕರೆಲ್ಲ ಸೇರಿ ಬೃಹತ್ ಮಾನವ ಸರಪಳಿಯನ್ನು ರಚಿಸಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

By Suddi9

Leave a Reply

Your email address will not be published. Required fields are marked *