ಮೂಡುಬಿದರೆ: ಕಾರ್ಯನಿರತ ಪತ್ರಕರ್ತ ಸಂಘ, ಮೂಡುಬಿದರೆ ಪ್ರೆಸ್ ಕ್ಲಬ್ ಆಶ್ರಯದಲ್ಲಿ ಜುಲೈ 1ರಂದು 11ಗಂಟೆಗೆ ಸಮಾಜಮಂದಿರ ಮೀಟಿಂಗ್ ಹಾಲ್‍ನಲ್ಲಿ ಪತ್ರಿಕಾ ದಿನಾಚರಣೆ ನಡೆಯಲಿದೆ.
ಸಂಘದ ಅಧ್ಯಕ್ಷ ಎಂ.ಗಣೇಶ್ ಕಾಮತ್ ಅಧ್ಯಕ್ಷೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಂಗಳೂರು ಆಕಾಶವಾಣಿಯ ಕಾರ್ಯನಿರ್ವಾಹಕ ಸದಾನಂದ ಪೆರ್ಲ, ವೇಣೂರು ಸಿ.ಎ ಬ್ಯಾಂಕ್ ನಿವೃತ್ತ ಪ್ರಬಂಧಕ ಎಚ್.ಮಹಮ್ಮದ್ ಮುಖ್ಯ ಅತಿಥಿಗಳಾಗಿರುವರು. ವಿಶ್ರಾಂತ ಪತ್ರಿಕಾ ಛಾಯಾಗ್ರಾಹಕ ರಾಘವ ಶ್ಯಾನ್‍ಬಾಗ್ ಅವರನ್ನು ಸನ್ಮಾನಿಸಲಾಗುವುದು ಎಂದು ಸಂಘದ ಕಾರ್ಯದರ್ಶಿ ಪ್ರಸನ್ನ ಹೆಗ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
