ಮೂಡುಬಿದರೆ: ಶಿರ್ತಾಡಿ ಗ್ರಾಮದ ಮಕ್ಕಿ ಐದು ಸೆಂಟ್ಸ್ನ ವಿವಾಹಿತೆ ರೇಶನ್ ಅಂಗಡಿಗೆಂದು ಹೋದವರು ನಾಪತ್ತೆಯಾಗಿದ್ದಾರೆ.
ನಾಪತ್ತೆಯಾದ ಮಹಿಳೆಯನ್ನು ಜೊಹರಾ(22)ಎಂದು ಗುರುತಿಸಲಾಗಿದೆ. ಈಕೆ ಕಾರ್ಕಳ ಬಂಗ್ಲೆಗುಡ್ಡೆಯ ತನ್ನ ಪತಿ ಜತೆ ವಿದೇಶದಲ್ಲಿದ್ದು ಇತ್ತೀಚೆಗೆ ಊರಿಗೆ ಬಂದಿದ್ದಳು.

mbd_june14_1( johara)

ಶುಕ್ರವಾರ ಮಧ್ಯಾಹ್ನ ಮಕ್ಕಿಯ ತನ್ನ ಮನೆಯಿಂದ ಕಾರ್ಕಳದ ರೇಶನ್ ಅಂಗಡಿಯಿಂದ ರೇಶನ್ ತರಲೆಂದು ತನ್ನ ಮಗನೊಂದಿಗೆ ಹೋಗಿ ಸಂಜೆ ಶಿರ್ತಾ ಡಿಗೆ ವಾಪಾಸಾಗಿದ್ದಳು. ನಂತರ ರಿಕ್ಷಾದಲ್ಲಿ ತನ್ನ ಮಗನೊಂದಿಗೆ ಮನೆಗೆ ಸಾಮಾನು ಕೊಟ್ಟು ಕಳಿಸಿ ತಾನು ನಂತರ ಬರುತ್ತೇನೆ ಎಂದು ಮಗನಲ್ಲಿ ಹೇಳಿ ಹೋದವಳು ನಾಪತ್ತೆಯಾಗಿದ್ದಾಳೆ. ಕಾರ್ಕಳಕ್ಕೆ ರೇಶನ್ ತರಲು ಹೋಗುವ ಮೊದಲು ಶಿರ್ತಾಡಿ ಬ್ಯಾಂಕ್ನಲ್ಲಿ ರೂ 2400ಕ್ಕೆ ಉಂಗುರವನ್ನು ಅಡವಿಟ್ಟಿದ್ದಳು ಎನ್ನಲಾಗಿದೆ. ಯುವತಿಯ ಸಹೋದರಿ ನೀಡಿದ ದೂರಿನ ಮೇರೆಗೆ ಮೂಡುಬಿದರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

By suddi9

Leave a Reply

Your email address will not be published. Required fields are marked *