ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಶಂಭೂರು ಗ್ರಾಮದ ನೇತ್ರಾವತಿ ನದಿಗೆ ಅಡ್ಡಲಾಗಿ ಈಗಾಗಲೇ ನಿರ್ಮಿಸಿರುವ ಎ.ಎಮ್ ಆರ್ ಹಾಗೂ ರೃತ್ವಿಕ್ ಕಂಪನಿಗಳ ಜಲವಿದ್ಯುತ್ ಯೋಜನೆಗಳ ಪಕ್ಕದಲ್ಲಿ ಗ್ರೀನ್ ಕೋ ಕಂಪನಿ ಮಾಲೀಕತ್ವದ ಪೆರ್ಲಾ ಹೈಡ್ರೋ ಪವರ್ ಪ್ರ್ರೆಜೆಕ್ಟ್ ಹೆಸರಿನಲ್ಲಿ ನಿರ್ಮಿಸುತ್ತಿರುವ ಜಲವಿದ್ಯುತ್ ಯೋಜನೆಗೆ ಬೆಂಗಳೂರಿನ ರಾಜ್ಯ ಉಚ್ಚ ನ್ಯಾಯಾಲಯ ಸರಕಾರ ಹಾಗೂ ಕಂಪನಿಗೆ ತುರ್ತು ನೋಟೀಸ್ ಜಾರಿ ಮಾಡಿ ಆದೇಶ ಹೊರಡಿಸಿದೆ.

IMG-20150614-WA0037

IMG-20150614-WA0038

ಪೆರ್ಲಾ  ಜಲವಿದ್ಯುತ್ ಯೋಜನೆ ಹೆಸರಿನಲ್ಲಿ ಗ್ರೀನ್ ಕೋ ಕಂಪನಿಯು ಸರಕಾರದ ನಿಯಮಗಳನ್ನು ಗಾಳಿಗೆ ತೂರಿ,ಸರಕಾರದ ದಿಕ್ಕು ತಪ್ಪಿಸಿ ಸುಳ್ಳು ಮಾಹಿತಿ ನೀಡಿ ಕಾನೂನು ಬಾಹಿರವಾಗಿ ಜಲ ವಿದ್ಯುತ್ ಯೋಜನೆಯನ್ನು ಕಾರ್ಯಗತಗೊಳಿಸುತ್ತಿದ್ದು, ಅದನ್ನು ಕೂಡಲೇ ನಿಲ್ಲಿಸಬೇಕೆಂದು ಒತ್ತಾಯಿಸಿ ನರಿಕೊಂಬು ಗ್ರಾಮದ ನಾಗರಿಕ ಜನಜಾಗೃತಿ ಸೇವಾ ಟ್ರಸ್ಟ್, ಹೈಕೋರ್ಟ್  ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿತ್ತು.

ಈ ಪ್ರಕರಣದ ವಿಚಾರಣೆ ನಡೆಸಿದ ಉಚ್ಚನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠ, ಈ ಕುರಿತು ಸರಕಾರಕ್ಕೆ ಹಾಗೂ ಕಂಪನಿಗೆ ತುರ್ತು ನೋಟೀಸ್ ಜಾರಿಗೊಳಿಸಿ ಆದೇಶಿಸಿದೆ. ನ್ಯಾಯಪೀಠ, ಜಲವಿದ್ಯುತ್ ಯೋಜನೆ ಸ್ಥಾಪನೆಗೆ ಸರಕಾರ ಈ ಮೊದಲು ಅನುಮತಿ ನೀಡಿದ್ದ ಪ್ರದೇಶವಾದ ಮಡಿ ಮುಗೆರು ತೊರೆ ಬಿಟ್ಟು ನೇತ್ರಾವತಿ ನದಿಯಲ್ಲಿಯೇ ಜಲವಿದ್ಯುತ್ ಸ್ಥಾಪಸುತ್ತಿರುವುದಕ್ಕೆ ತೀವೃ ಆಕ್ಷೇಪ ವ್ಯಕ್ತಪಡಿಸಿತು.

ಜನಜಾಗೃತಿ ಸಮಿತಿ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಪಿ.ಪಿ.ಹೆಗಡೆ, ಪೆರ್ಲ ಕಂಪನಿಯು ಸರಕಾರದ ದಾರಿ ತಪ್ಪಿಸಿ ಹೇಗೆ ಒಂದೇ ಕಂಪನಿಯು ಬೇರೆ ಬೇರೆ ಮೂರು ಹೆಸರುಗಳಲ್ಲಿ ಒಂದೇ ಸ್ಥಳದಲ್ಲಿ ಕಾನೂನು ಬಾಹಿರವಾಗಿ ಜಲ ವಿದ್ಯುತ್ ಯೋಜನೆಯನ್ನು ಕಾರ್ಯಗತಗೊಳಿಸುತ್ತಿದೆ ಎಂದು ವಿವರಿಸಿದರು. ಸರಕಾರಕ್ಕೆ ವಂಚಿಸುವ ಹುನ್ನಾರದಿಂದ ಈ ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿದ್ದು, ಅದಕ್ಕೆ ಕೂಡಲೇ ತಡೆ ನೀಡಬೇಕೆಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ಪೆರ್ಲ ಕಂಪನಿಯು ಸರಕಾರದ ವಿವಿಧ ಇಲಾಖೆಗಳ ಎಲ್ಲಾ ಹಂತಗಳಲ್ಲಿ ಅನುಮತಿ ಪಡೆಯದೇ, ಏಕಾಏಕಿ ಯೋಜನೆಯನ್ನು ಈಗಾಗಲೇ ಕಾರ್ಯಾರಂಭಗೊಳಿಸಿದೆ. ಅಲ್ಲದೇ ಅತಿ ಮುಖ್ಯವಾಗಿರುವ ಜಲಸಂಪನ್ಮೂಲ ಇಲಾಖೆಯ ಅಂತಿಮ ಅನುಮತಿ ಪಡೆಯದೇ, ಅದರೊಂದಿಗೆ ಒಡಂಬಡಿಕೆ ಮಾಡಿಕೊಳ್ಳದೇ, ಕ್ರೆಡೆಲ್ ಸಂಸ್ಥೆಯಿಂದ ತಾಂತ್ರಿಕ ಅನುಮೋದನೆ ಪಡೆಯದೇ ತೆರೆಮರೆಯಲ್ಲಿಯೋಜನೆ ಆರಂಭಗೊಳಿಸಿರುವುದು ಸಾರ್ವಜನಿಕರಲ್ಲಿ ಅನುಮಾನಕ್ಕೆ ಎಡೆಮಾಡಿದೆ ಎಂದು ಜನಜಾಗೃತಿ ಸಮಿತಿ ಆರೋಪಿಸಿದೆ.

By Suddi9

Leave a Reply

Your email address will not be published. Required fields are marked *