ಜಗತ್ತಿನ ಮುಂದುವರೆಯುವ ರಾಷ್ಟ್ರಗಳ ಸಾಲಿನಲ್ಲಿ ಭಾರತವು ಪ್ರಮುಖ ಸ್ಥಾನದಲ್ಲಿದೆ. ಕೈಗಾರಿಕೆ, ಆರ್ಥಿಕತೆ,ಶಿಕ್ಷಣ,ನಗರೀಕರಣ ಇನ್ನು ಹಲವಾರು ಕ್ಷೇತ್ರಗಳಲ್ಲಿ ಅಭಿವೃದ್ದಿ ಹೊಂದುತ್ತಿದೆ. ಜನಸಂಖ್ಯೆ ಹೆಚ್ಚಳದ ಪ್ರಭಾವದಿಂದ ನಗರಗಳಲ್ಲಿ ಕಟ್ಟಡಗಳ ನಿರ್ಮಾಣ ಹೆಚ್ಚುತ್ತಿದೆ. ಅಭಿವೃದ್ದಿ ಹೆಚ್ಚುತ್ತಿದ್ದಂತೆ ಅನುಕೂಲಗಳ ಜೊತೆಗೆ ಪ್ರತಿಕೂಲಗಳು ಹೆಚ್ಚುತ್ತಿದೆ. ಜೀವ ಸಂರಕ್ಷಣೆ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಅವಶ್ಯಕತೆ ಇದೆ. E Yantraನೈಸರ್ಗಿಕ ವಿಪತ್ತುಗಳು,ಕಟ್ಟಡಗಳಿಗೆ ತಿಳಿದೋ ತಿಳಿಯದ ಹಾಗೆ ಬೆಂಕಿ ಹತ್ತಿಕೊಳ್ಳುವುದು ಇವೆಲ್ಲ ಸಾಮಾನ್ಯವಾಗಿ ಎಲ್ಲಾ ಕಡೆಗಳಲ್ಲಿ ಕಾಣಿಸುತ್ತಿದೆ. ಈ ಸಂದರ್ಭದಲ್ಲಿ ಒಂದು ಜೀವ ಉಳಿಸಲು ಇನ್ನೋಂದು ಜೀವ ಒತ್ತೆ ಇಟ್ಟು ಸಂರಕ್ಷಣೆ ಕಾರ್ಯ ನಡೆಸಲೇ ಬೇಕಾದ ಪರಿಸ್ಥಿತಿಯಲ್ಲಿ ಇದ್ದೇವೆ. ಇಂತಹ ಸಮಸ್ಯೆಗಳಿಗೆ ಈಗ ಪರಿಹಾರ ಸಿಕ್ಕಿದೆ.

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಖ್ವಾಜಾ ನಿಜಾಮುದ್ದಿನ್ ಸುಭಾನಿ,ಡಿಸೋಜಾ ದೀಪಕ್ರಾಜ್ ಪೀಟರ್,ದರ್ಶನ್.ಡಿ.ಎನ್,ಕಾಂತೇಶ್ ಜೋಗಿ ಇವರು ತಮ್ಮ ಗುರುಗಳಾದ ಸಂತೋಷ್.ಎಸ್ ರವರ ಮಾರ್ಗದರ್ಶನದಲ್ಲಿ ಹೊಸ ತಂತ್ರಜ್ಞಾನದಿಂದ ಬೆಂಕಿ ನಂದಿಸುವ ರೋಬೋಟ್ ಮಾದರಿಯನ್ನು ತಯಾರಿಸಿದ್ದಾರೆ. ” ಫಯರ್ ಫೈಟಿಂಗ್ ರೋಬೋಟ್” ಎನ್ನುವ ಹೊಸ ತಂತ್ರಜ್ಞಾನ ಬಳಸಿ ಸ್ವಯಂ ಚಾಲುತ ರೋಬೋಟ್ ಮಾದರಿಯನ್ನು ಬೆಳಕಿಗೆ ತಂದಿದ್ದಾರೆ. ಇದರ ವಿಶೇಷ ಗುಣಗಳೆಂದರೆ,ಅಗ್ನಿಶಾಮಕರು ಬೆಂಕಿ ಇರುವ ಜಾಗಕ್ಕೆ ಹೋಗಿ ಅದನ್ನು ನಿಂದಿಸಲು ತನ್ನ ಜೀವವನ್ನೇ ಒತ್ತೆಯಾಗಿಡಬೇಕಾಗುತ್ತದೆ. ಬೆಂಕಿ ಹತ್ತಿರುವ ಸಂದರ್ಭಗಳಲ್ಲಿ ವಿಷ ಅನಿಲಗಳು ಹೊರಬರುವ ಸಾದ್ಯತೆಗಳು ಇರುತ್ತದೆ. ಇವುಗಳಿಂದ ಜೀವಿಗಳಿಗೆ ಹಾನಿಯಾಗುವ ಸಾದ್ಯತೆಗಳು ಇರುತ್ತದೆ. ಇಂತಹ ಸಂದರ್ಭದಲ್ಲಿ ಮನುಷ್ಯರ ಬದಲು ” ಫಯರ್ ಫೈಟಿಂಗ್ ರೋಬೋಟ್”ಗಳನ್ನು ಬಳಸುವುದರಿಂದ ಒಂದು ಜೀವ ರಕ್ಷಣೆಯಾಗುತ್ತದೆ. ಇವುಗಳು ಎಂತಹ ಪರಿಸರದಲ್ಲೂ ಯಾವುದೇ ತೊಂದರೆ ಇಲ್ಲದೆ ಬೆಂಕಿಯನ್ನು ನಿಂದಿಸುತ್ತದೆ. “ಫಯರ್ ಫೈಟಿಂಗ್ ರೋಬೋಟ್” ಗಳಲ್ಲಿ ಬೆಂಕಿಯನ್ನು ಗುರುತಿಸುವ ಸೆಂಸರ್ಗಳನ್ನು ಅಳವಡಿಸಿರುತ್ತದೆ. ಇದರಿಂದ ಬೆಂಕಿ ಇರುವ ಜಾಗದಲ್ಲಿ ಹೋಗಿ ಅದನ್ನು ನಂದಿಸುವುದರಲ್ಲಿ ಯಶಸ್ವಿಯಾಗುತ್ತದೆ. ಇವುಗಳನ್ನು ಬಳಸುವುದರಿಂದ ಮನುಷ್ಯನಿಗೆ ಆಗುವ ಹಾನಿಗಳನ್ನು ತಪ್ಪಿಸಬಹುದು.
ಈ ಯಂತ್ರ ರೋಬೋಟಿಕ್ಸ್ ಐಐಟಿ – ಬಾಂಬೆ ನಡೆಸಿದ “ಫಯರ್ ಫೈಟಿಂಗ್ ರೋಬೋಟ್” ಸ್ಪರ್ಧೆಯಲ್ಲಿ ಈ ವಿದ್ಯಾರ್ಥಿಗಳು ಭಾಗವಹಿಸಿ ಅವರು ನೀಡಿದ್ದ ಕಾರ್ಯವನ್ನು ಪೊರ್ಣಗೊಳಿಸಿದ್ದಾರೆ. ಇದಕ್ಕೆ ಐಐಟಿ ಬಾಂಬೆಯವರು ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಿದ್ದಾರೆ.

By suddi9

Leave a Reply

Your email address will not be published. Required fields are marked *