ಮೂಡುಬಿದಿರೆ:ಕಾಂತಾವರ ರಥಬೀದಿ ಕಾಪಿಕಾಡು ಎಂಬಲ್ಲಿ ಹೆನ್ರಿ ಪಿರೇರಾ ಮನೆ ಹಟ್ಟಿಗೆ ಗುರುವಾರ ರಾತ್ರಿ ಚಿರತೆ ದಾಳಿ ನಡೆಸಿ 3 ಆಡುಗಳನ್ನು ಕೊಂದು ಹಾಕಿದೆ.

ಕಾಂತಾವರ, ನಿಡ್ಡೋಡಿಯಲ್ಲಿ ಚಿರತೆ ದಾಳಿ13mdb
ಮೃತ ಆಡುಗಳ ಪೈಕಿ ಒಂದು ಹಾಲು ಕರೆಯುವ ಆಡು ಆಗಿದ್ದರೆ ಇನ್ನೊಂದು ಗರ್ಭಿಣಿ ಆಡು ಆಗಿತ್ತು. ಮೂರು ಆಡುಗಳ ಪೈಕಿ ಎರಡು ಆಡುಗಳ ಕುತ್ತಿಗೆಯಲ್ಲಿ ಮಾತ್ರ ಗಾಯಗಾಗಿದ್ದು ಇನ್ನೊಂದು ಆಡನ್ನು ಚಿರತೆ ಅರ್ಧ ತಿಂದು ಬಿಟ್ಟ ಸ್ಥಿತಿಯಲ್ಲಿ ಇತ್ತು.
ಮೂಡುಬಿದಿರೆ ವಲಯ ಉಪ ಅರಣ್ಯಾಧಿಕಾರಿ ಪ್ರಕಾಶ್ ಶೆಟ್ಟಿ, ಸಾಣೂರು ಪಶುವೈದ್ಯಾಧಿಕಾರಿ ನಾಗರಾಜ ಬಳೆಗಾರ್ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ನಿಡ್ಡೋಡಿಯಲ್ಲು ಚಿರತೆ ದಾಳಿ: ಎರಡು ದಿನಗಳ ಹಿಂದೆ ನಿಡ್ಡೋಡಿಯ ರಾಬರ್ಟ್  ಮಾರ್ಷಲ್ ಡಿಸೋಜಾ ಅವರ ಜರ್ಸಿ ಡೈರಿಗೆ ಚಿರತೆ ದಾಳಿ ನಡೆಸಿ ಒಂದು ಆಡು ಮತ್ತು ಒಂದು ಕರುವನ್ನು ಅರ್ಧ ತಿಂದು ಕೊಂದು ಹಾಕಿದೆ.

By suddi9

Leave a Reply

Your email address will not be published. Required fields are marked *