ಮುಂಬಯಿ,ಜೂ.12: ವ್ಯಕ್ತಿತ್ವ ವಿಕಾಸನ ಸಾಧ್ಯವಾದಲ್ಲಿ ಸಮುದಾಯದಲ್ಲಿ ಏಕತೆಯೆ ನಿರ್ಮಾಣ ಸಾಧ್ಯವಾಗುವುದು.ಆದುದರಿಂದ ಮಕ್ಕಳಲ್ಲಿ ಜ್ಙಾನ ಪ್ರಸರಣದ ಜತೆ ಜತೆಯಲ್ಲಿ ಬಂಟರ ಸಂಸ್ಕೃತಿ ಬಿತ್ತುವ ಕಾರ್ಯದಲ್ಲೂ ನಮ್ಮವರು ಕಾರ್ಯನಿರ್ವಹಿಸಬೇಕು. ನೈತಿಕ ಶಿಕ್ಷಣ ಹಾಗೂ ಮೌಲ್ಯಧಾರಿತ ಕಾರ್ಯಕ್ರಮಗಳಿಂದ ಭವಿಷ್ಯತ್ತಿನ ಪೀಳಿಗೆಯಲ್ಲಿ ಸಮುದಾಯ ಕಟ್ಟುವ ಹುಮ್ಮಸ್ಸು ಬಲಗೊಳ್ಳುವುದು ಎಂದು ಸಂಸದ ಗೋಪಾಲ್ ಸಿ.ಶೆಟ್ಟಿ ನುಡಿದರು. ಬಂಟರ ಸಂಘ ಮುಂಬಯಿ ತನ್ನ ಶಿಕ್ಷಣ ಮತ್ತು ಸಮಾಜ ಕಲ್ಯಾಣಾಭಿವೃದ್ಧಿಸಮಿತಿಯೊಂದಿಗೆ ಇಂದಿಲ್ಲಿ ಶುಕ್ರವಾರ ಪೂರ್ವಾ ಹ್ನ ಕುರ್ಲಾ ಪೂರ್ವದಲ್ಲಿನ ಬಂಟರ ಭವನದಲ್ಲಿನ ರಾಧಾಭಾಯಿ ತಿಮ್ಮಪ್ಪ ಭಂಡಾರಿ ಸಭಾಗೃಹದಲ್ಲಿ ಸಂಘದ ಅಧ್ಯಕ್ಷ ಕರ್ನೆರೆ ವಿಶ್ವನಾಥ ಶೆಟ್ಟಿ ಅವರು ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ದಿ| ವಾಸು ಕೆ.ಶೆಟ್ಟಿ ಸ್ಮಾರಣಾರ್ಥ ಚರಿಷ್ಮಾ ಬಿಲ್ಡರ್ಸ್ನ ಆಡಳಿತ ನಿರ್ದೇಶಕ ಸುಧೀರ್ ವಿ.ಶೆಟ್ಟಿ ವಹಿಸಿದ್ದರು
ವಿದ್ಯಾಲಯ ಮತ್ತು ಸಮುದಾಯಕ್ಕೆ ಕೀರ್ತಿ ತಂದ ಸರ್ವ ಮಕ್ಕಳಿಗೆ ನನ್ನ ಶುಭಕಾಮನೆಗಳು . ಕರ್ಮಭೂಮಿ ಮುಂಬಯಿಯಲ್ಲಿ ಬಂಟರ ಕೀರ್ತಿ ಪಸರಿಸುವಲ್ಲಿ ನಿಮ್ಮೆಲ್ಲರ ಪ್ರಯತ್ನ ಸಾಕ್ಷಿಯಾಗಿದೆ. ಶಿಕ್ಷಣದಿಂದ ಮಾತ್ರ ಉತ್ಕೃಷ್ಟತೆಯ ಬದುಕು ಸಾಧ್ಯ. ಆದುದರಿಂದ ಮುಂದಿನ ದಿನಗಳಲ್ಲಿ ನೀವೆಲ್ಲರೂ ಯೋಚನೆಮಾಡಿ ಬದುಕು ಕಂಡುಕೊಳ್ಳಬೇಕು. ನಮ್ಮ ಜೀವನದ ಅಂತಸ್ತನ್ನು ಕಾಪಡಲು ಹಂತಹಂತವಾಗಿ ಚಿಂತಿಸಿ ಮುನ್ನಡೆಯ ಬೇಕು.
ದೂರದೃಷ್ಟಿತ್ವವನ್ನು ಮೈಗೂಡಿಸಿ ಜೀವನಾಭಿವೃದ್ಧಿಯನ್ನು ಪೂರೈಸಬೇಕು. ವಿದೇಶಿ ಯೋಜನೆಗಳಿಕ್ಕಿಂತ ಮರೆಯಾಗುತ್ತಿರುವ ಪರಂಪರಾಗತ ಉದ್ಯಮ ಕಸುಬುಗಳತ್ತ ಕೂಡಾ ಗಮನ ಸೆಳೆದು ಅವುಗಳನ್ನೂ ಜತೆಜತೆಯಲ್ಲಿ
ಮುನ್ನಡೆಸಬೇಕು. ಅವುಗಳಲ್ಲೂ ವಿಪುಲ ಅವಕಾಶವಿದ್ದು, ಜನಾಂಗೀಯ ಕಸುಬುಗಳ ಉಳಿಸುವಿಕೆ ಬಗ್ಗೆಮಕ್ಕಳಲ್ಲಿ ಅರಿವು ಮೂಡಿಸಿ ನಮ್ಮ ಸಂಸ್ಕೃತಿಯ ಉಳಿವಿನ ಬಗ್ಗೆಯೂ ಕ್ರಿಯಾಶೀಲರಾಗುವಲ್ಲಿ ಸಂಘ ಸಂಸ್ಥೆಗಳು ಶ್ರಮಿಸಬೇಕು ಎಂದೂ ಗೋಪಾಲ್ ಶೆಟ್ಟಿ ಕರೆಯಿತ್ತರು. ಕಾರ್ಯಕ್ರಮದಲ್ಲಿ ತುಂಗಾ ಹೊಟೇಲು ಸಮೂಹ ಸಂಸ್ಥೆಗಳ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ಧೆಶಕ ಹಾಗೂ ಸಮಾಜ ಕಲ್ಯಾಣ ಯೋಜನಾ ರೂವಾರಿ ಸುಧಾಕರ್ ಎಸ್.ಹೆಗ್ಡೆ, ಬಂಟ್ಸ್ ಸಂಘ ಬೆಂಗಳೂರು ಅಧ್ಯಕ್ಷ ಡಾ| ನರೇಶ್ಶೆ ಟ್ಟಿ, ಬಂಟ್ಸ್ ಸಂಘ ಬೆಳಗಾಂ ಅಧ್ಯಕ್ಷ ಸಾಂತೂರು ಭಾಸ್ಕರ್ ಶೆಟ್ಟಿ ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು.
ಸಮಾಜದ ನೂರಾರು ವಿದ್ಯಾರ್ಥಿಗಳಿಗೆ ವಾರ್ಷಿಕ ವಿದ್ಯಾರ್ಥಿ ವೇತನ, ವಿದ್ಯಾರ್ಥಿಗಳ ದತ್ತು ಸ್ವೀಕಾರ, ಪ್ರತಿಭಾ ಸಂಪನ್ನ ಶಿಕ್ಷಣ ವಂಚಿತ ವಿಕಲಚೇತನರಿಗೆ ಆರ್ಥಿಕ ಸಹಾಯ ಹಾಗೂ ವಿಧವಾ ಮಾಸಾಶನ ಸೇರಿದಂತೆ ಮತ್ತಿತರ ದೇಣಿಗೆಗಳನ್ನು ವಿತರಿಸಿ ಸಂದರ್ಭೊಚಿತವಾಗಿ ಮಾತನಾಡಿ ಮಕ್ಕಳ ಭವಿಷ್ಯಕ್ಕೆ ಶುಭಕೋರಿದರು. ಈ ಬಾರಿ ಸಂಘವು ಈ ಯೋಜನೆಗಾಗಿ ಸುಮಾರು1.5 ಕೋಟಿ ವ್ಯಹಿಸಿದೆ. ಶಿಕ್ಷಣದಮಹತ್ವದಿಂದ ಬಂಟರ ಉದಾರತ್ವ ಸಾಧ್ಯವಾಗಿದೆ. ಭವಿಷ್ಯತ್ತಿನಲ್ಲಿ ಈ ಬೃಹತ್ ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇಮಾಭಿವೃದ್ಧಿ ವ್ಯವಸ್ಥಿತವಾಗಿ ಮುನ್ನಡೆಸಲು ಸಂಘವು ಹೊಸ ಯೋಜನೆಯು ರೂಪಿಸಿದ್ದು, ಬರೇ ಅಗತ್ಯವುಳ್ಳವರೇ ಫಲಾನುಭವಿಸಬೇಕು.
ಈ ಬಾರಿ ಬಂಟ ಸಮಾಜದ ಮತ್ತು ಸಂಘದ ಶೈಕ್ಷಣಿಕ ವರ್ಷವು ಬಂಟರಿಗೆ ಸುವರ್ಣಯುಗ. ಕಾರಣ ನಮ್ಮ ಸಂಸ್ಥೆಯ 3 ಶಿಕ್ಷಣ ಸಂಸ್ಥೆಗಳೂ ಎಸ್ಎಸ್ಸಿಯಲ್ಲಿಶೇಕಡಾ 100% ಫಲಿತಾಂಶ ತಂದೊದಗಿಸಿದೆ. ಇನ್ನು ಸಂಘವು ಕುಶಲ ವಾಸು ಶೆಟ್ಟಿ ಬಂಟ್ಸ್ ಹೆಲ್ತ್ ಕೇರ್ ಸೆಂಟರ್ ಮತ್ತು ಬಂಟ ಸಮಾಜದ ಹೆಣ್ಣುಮಕ್ಕಳ ಮದುವೆಗೆ ಆರ್ಥಿಕ ಸಹಾಯನಿಧಿ ಕಂಕಣಭಾಗ್ಯ ಯೋಜನೆಹಮ್ಮಿಕೊಂಡಿದೆ. ಗಳ ಮಾಹಿತಿಯನ್ನಿತ್ತರು. ಕಂಕಣಭಾಗ್ಯವು ಸುಮಾರು 2 ಕೋಟಿ ರೂಪಾಯಿ ಒಗ್ಗೂಡಿಸಿ ವಾರ್ಷಿಕ ಸಹಾಯ ಹಸ್ತವನ್ನೀಡಲಿದೆ. ಅಂತೆಯೇ ವಾರ್ಷಿಕವಾಗಿ ಸಾವಿರಾರು ಮಹಿಳೆಯರಿಗೆ ಆರೋಗ್ಯಭಾಗ್ಯದ ಫಲಾನುಭವ ಪಡೆಯುವಲ್ಲಿ ಶ್ರಮಿಸಲಿದೆ. ಜಗತ್ತಿನಲ್ಲೇ ಬಂಟರು ಎತ್ತರದ ಸ್ಥಾನದಲ್ಲಿದ್ದವರು. ಆ ನಿಟ್ಟಿನಲ್ಲಿ ನಮ್ಮ ಶೈಕ್ಷಣಿಕ ಸಂಸ್ಥೆಗಳಲ್ಲಿ 10% ಸೀಟುಗಳನ್ನು ಮಹಾನಗರದಲ್ಲಿನ ನಮ್ಮೂರ ಇತರೇ ಬಂಧುಗಳಿಗೂ ಒದಗಿಸಲಿದ್ದೇವೆ. ಆದುದರಿಂದ ರಾಷ್ಟ್ರದ ಯಾವಸಮಾಜವೂ ನೀಡಲಾಗದ ಸೇವೆ ಬಂಟ ಸಮುದಾಯ ನೀಡುತ್ತಿದೆ ಎಂದು ಅಧ್ಯಕ್ಷೀಯ ನುಡಿಯಲ್ಲಿ ಉಲ್ಲೇಖೀಸಿದರು. ಡಾ| ಸುರೇಶ್ ಮಾತನಾಡಿ ಈ ಬಂಟ್ಸ್ ಸಂಘ ನನ್ನ ಎರಡನೇ ಮನೆಇದ್ದಂತೆ.
ಸದ್ಯದವ್ಯಾವಹಾರಿಕ ಜೀವನದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಮೌಲವು ಕಳಕೊಳ್ಳುತ್ತಿದೆ. ಬರೇ ಹಣದಿಂದ ಜೀವನ ಸಾಧ್ಯವಿಲ್ಲ. ಪ್ರೀತಿ ವಾತ್ಸಲ್ಯ ಸಂಸ್ಕೃತಿಯುತ ಜೀವನದ ಅಡಿಪಾಯವಾಗಿದೆ. ಆದುದರಿಂದ ಮಕ್ಕಳಿಗೆ ಮೌಲಿಕ ಬದುಕನ್ನು ಕಲಿಸುವಲ್ಲಿ ಪಾಲಕರು ಹೆಚ್ಚಿನ ಶ್ರಮ ವಹಿಸಬೇಕು. ಮನೆ ಸಂಸ್ಕೃತಿ ಪರಿಪಠಿಸಿದರೆ ಎಲ್ಲರ ಬದುಕು ಸುಖಮಯವಾಗುವುದು. ಸಮಾಜ ಅಂದರೆ ಜನ್ಮ ನೀಡಿದ ತಾಯಿಯಂತೆ. ಸಮಾಜದ ಋಣ ತೀರಿಸುವುದು ಮಾನವ ಪರಮ ಧರ್ಮ. ಸಮುದಾಯದ ಋಣ ಸಂದಯ ಮಾಡಲು ಬಡವ ಬಲ್ಲಿದವನೆಂಬ ಭೇದ ಬೇಡ. ಬಂಟರು ವಿಶ್ವಕ್ಕೆ ಮಾಡಿದ ಹೆಸರು ಬೇರೆಯರೂ ಮಾಡಿಲ್ಲ ಎನ್ನುವ ಅಭಿಮಾನ ನನಗಿದೆ ಎಂದು ಸಾಂತೂರು ಭಾಸ್ಕರ್ ನುಡಿದರು. ಸುಧಾಕರ ಹೆಗ್ಡೆಮಾತನಾಡಿಯಾವುದೇ ಆರಂಭಿಕ ಕೆಲಸ ಕೊನೆತನಕ ಮುನ್ನಡೆಯುವುದು ಅವಶ್ಯ. ದಾನಿಗಳಿಂದ ಹಣ ಪಡೆಯುವುದನ್ನಾದರೂ ನಿಲ್ಲಿಸಬಹುದು. ಆದರೆ ಫಲಾನುಭವಿಗಳಿಗೆ ಹಣ ಕೊಡುವುದು ಅರ್ಧದಲ್ಲಿ ನಿಲ್ಲಿಸುವಂತಿಲ್ಲ. ನೆರವು ಪಡೆಯುವವರೂ ಬೆಡುವುದಾಗಿ ತಿಳಿಯಬಾರದು. ಹಿಂದೊಮ್ಮೆ ಶ್ರೀಮಂತರ ಸಂಘ ಅಂತನಿಸಿದ ಬಂಟರ ಸಂಘವು ಪ್ರಸ್ತುತ ಸೂಟು ಬೂಟು ಸಂಸ್ಕೃತಿ ಮುಕ್ತ ಸಂಘವಾಗಿ ಬಡವಬಲ್ಲಿದರೆಂಬ ಭೇದ ಮರೆತು ಸರ್ವ
ಬಂಟರನ್ನೂ ಅಹ್ವಾನಿಸಿ ಪ್ರೀತಿಸುತ್ತಿದೆ ಇದು ದೇವರಿಗೂ ಮೆಚ್ಚುಗೆ ಆಗುವಂತಿದೆ. ಆದುದರಿಂದ ಸಾಮಾಜಿಕ ಕ್ಷೇಮಾಭಿವೃದ್ಧಿಗೆ ಕೊಟ್ಟವರೂ ಪಡೆದವರೂ ಒಳ್ಳೆಯದಾಗಲಿ ಎಂದರು.
ಇದೇ ಶುಭಾವಸರದಲ್ಲಿ ಮಹಾರಾಷ್ಟ್ರ ರಾಜ್ಯ ಸಿಇಟಿ ಪರೀಕ್ಷಯಲ್ಲಿ ಪ್ರಥಮ ಸ್ಥಾನ ಗಳಿಸಿದ ಹರ್ಷಿತಾ ಹೆಚ್.ಶೆಟ್ಟಿ ಪುಣೆ ಅವರನ್ನು ಮಾತಾಪಿತರಾದ ಶಿರ್ವ ಪಂಜಿಮಾರು ದೊಡ್ಡಮನೆ ಹರೀಶ್ ಶೆಟ್ಟಿ ಮತ್ತು ಕಬ್ಯಾಡಿ ತಟ್ಟೂರು ವಾರಿಜ ಶೆಟ್ಟಿ ಹಾಗೂ ಒಲಿಂಪಿಯಾ ಅಂತರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಮಾ| ನಿನಾದ್ ಎ.ಶೆಟ್ಟಿ ಅವರನ್ನು ಪೋಷಕರಾದ
ಹರೀಶ್ ಶೆಟ್ಟಿ ಮತ್ತು ವಾರಿಜ ಶೆಟ್ಟಿ ಅವರನ್ನೊಳಗೊಂಡು ಅತಿಥಿವರ್ಯರು ಹಾಗೂ ಅಧ್ಯಕ್ಷ ಕರ್ನೆ ರೆ ವಿಶ್ವನಾಥ ಶೆಟ್ಟಿ ಸನ್ಮಾನಿಸಿದರು. ಹಾಗೂ ಸಂಘದ ಸಂಚಾಲಕತ್ವದ ಮೂರೂ ಶಾಲೆಗಳು ಇದೇ ಮೊದಲ ಬಾರಿ ಒಟ್ಟಾಗಿ ಎಸ್ಎಸ್ಸಿಪರೀಕ್ಷೆಯಲ್ಲಿ ನೂರು ಪ್ರತಿಶತ ಫಲಿತಾಂಶ ಪಡೆದ ಶುಭಾವಸರದಿ ನಿತ್ಯಾನಂದ ಫ್ರೀ ನೈಟ್ ಹೈಸ್ಕೂಲು ವರ್ಲಿ ಇದರ ಆಡಳಿತ್ವ ನಡೆಸುವ ಸಂಘದ ಸಿಟಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಭುಜಂಗ ಶೆಟ್ಟಿ, ಕಾರ್ಯದರ್ಶಿ ನಲ್ಯಗುತ್ತು ಪ್ರಕಾಶ್ ಟಿ.ಶೆಟ್ಟಿ ಮುಖ್ಯೋಪಾಧ್ಯಾಯ ಸೋಮಶೇಖರ್ ಹೆಗ್ಡೆ, ಮೇಲ್ವಿಚಾರಕ ಸಂಜೀವ ಶೆಟ್ಟಿ,ಕರ್ನಾಟಕ ಫ್ರೀ ನೈಟ್ಹೈ ಸ್ಕೂಲು ಘಾಟ್ಕೋಪರ್ ಇದರ ಮೇಲ್ವಿಚಾರಕ ಬೆಳ್ಳಂಪಳ್ಳಿ ಬಾಲಕೃಷ್ಣ ಹೆಗ್ಡೆಮತ್ತು ಎಸ್.ಎಂ ಶೆಟ್ಟಿ ವಿದ್ಯಾಲಯ
ಪೊವಾಯಿ ಇದರ ಉಪ ಪ್ರಾಂಶುಪಾಲೆ ರೇಶ್ಮಾ ರಾವ್, ಮುಂಡ್ಕೂರು ರತ್ನಾಕರ ಶೆಟ್ಟಿ, ನಡಿಬೆಟ್ಟು ನಿತ್ಯಾನಂದ
ಎಸ್.ಹೆಗ್ಡೆಅವರನ್ನು ಅಭಿನಂದಿಸಿ ಗೌರವಿಸಲಾಯಿತು. ಸಂಘದ ಉಪಾಧ್ಯಕ್ಷ ಪ್ರಭಾಕರ ಎಲ್.ಶೆಟ್ಟಿ, ಜತೆ ಕಾರ್ಯದರ್ಶಿ ಕಿಶೋರ್ಕುಮಾರ್ ಶೆಟ್ಟಿ ಕುತ್ಯಾರ್, ಮಹಿಳಾ
ವಿಭಾಗದ ಕಾರ್ಯಾ ಧ್ಯಕ್ಷೆ ಶ್ರೀಮತಿ ಲತಾ ಜಯರಾಮ ಶೆಟ್ಟಿ ಆಸೀನರಾಗಿದ್ದು, ಮಾಜಿ ಅಧ್ಯಕ್ಷರುಗಳಾದ ಆರ್.ಸಿ ಶೆಟ್ಟಿ, ಐಕಳ ಹರೀಶ್ ಶೆಟ್ಟಿ, ಸಿಎ| ಶಂಕರ್ ಬಿ.ಶೆಟ್ಟಿ ಮತ್ತಿತರ ಗಣ್ಯರು, ಸಂಘದ ವಿವಿಧ ಪ್ರಾದೇಶಿಕ ಸಮಿಗಳಪದಾಧಿಕಾರಿ, ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿ ಕಾರ್ಯಧ್ಯಕ್ಷನಗ್ರಿಗುತ್ತು ವಿವೇಕ್ ಶೆಟ್ಟಿಪ್ರಾಸ್ತವಿಕ ನುಡಿಗಳನ್ನಾಡಿ ಇದು ನಿಜವಾದ ಮೌಲ್ಯವುಳ್ಳ ಒಂದು ಉತ್ತಮ ಯೋಜನೆ. ಮುಂದಿನ ದಿನಗಳಲ್ಲಿ ನಮ್ಮ ಕರ್ಮಭೂಮಿಯಲ್ಲಿನ ಮರಾಠಿ
ವಿದ್ಯಾರ್ಥಿ ವೇತನ ನೀಡುವ ಹಾಗೂ ಸ್ವಜಾತೀಯ ಮಕ್ಕಳ ಸಂಪೂರ್ಣ ಶಿಕ್ಷಣದ ವೆಚ್ಚವನ್ನು ಭರಿಸುವ ಬಗ್ಗೆ ಚಿಂತಿಸಲಾಗಿದೆ. ಮುಂದಿನ ವರ್ಷ ಕನಿಷ್ಠ 100 ವಿದ್ಯಾರ್ಥಿ ಗಳನ್ನು ಆಯ್ಕೆಗೊಳಿಸಿ ಈ ಯೋಜನೆಯನ್ನು ಮೌಲ್ಯಯುತವಾಗಿ ಮುನ್ನಡೆಸಲು ಆಲೋಚಿದ್ದೇವೆ ಎಂದರು. ಶ್ರೀಮತಿ ಕವಿತಾ ಐ.ಆರ್ ಶೆಟ್ಟಿ ಪ್ರಾರ್ಥನೆಗೈದರು. ಅಶೋಕ್ ಪಕ್ಕಳ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.ಉನ್ನತ ಶಿಕ್ಷಣ ಸಮಿತಿ ಕಾರ್ಯಧ್ಯಕ್ಷಚಂದ್ರಹಾಸ ಕೆ.ಶೆಟ್ಟಿಅವರು ನೂರು ಶೇಕಡಾ ಫಲಿತಾಂಶ ಗಳಿಸಿದ ಬಗ್ಗೆ ಪ್ರಕಟಿಸಿದರು. ಗೌ| ಕೋಶಾಧಿಕಾರಿ ಸಿಎ| ಐ.ಆರ್ ಶೆಟ್ಟಿದಾನಿಗಳನ್ನು ಸ್ಮರಿಸಿದರು. ಶಿಕ್ಷಣ ಸಮಿತಿ ಕಾರ್ಯದರ್ಶಿ ಭಾಸ್ಕರ್ ಶೆಟ್ಟಿ ಕೋಶಾಧಿಕಾರಿ ಸಿಎ| ರಮೇಶ್ ಎ.ಶೆಟ್ಟಿಅತಿಥಿಗಳನ್ನು ಪರಿಚಯಿಸಿದರು. ಜತೆ ಕೋಶಾಧಿಕಾರಿ ಮಹೇಶ್ ಎಸ್.ಶೆಟ್ಟಿ ವಿವಿಧ ಸಂಘಸಂಸ್ಥೆಗಳ ಮುಖ್ಯಸ್ಥರುಗಳನ್ನು ಗುರುತಿಸಿದರು. ಗೌ| ಪ್ರ| ಕಾರ್ಯದರ್ಶಿ ಉಳ್ತೂರು ಮೋಹನ್ದಾಸ್ ಶೆಟ್ಟಿ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದ ಅಂಗವಾಗಿ ಮಸ್ಕಿರಿ ಕುಡ್ಲ ತಂಡವು ದೀಪಕ್ ರೈ ಪಾಣಾಜೆ ನಿರ್ದೇಶನದಲ್ಲಿ ಬಲೇ ತೆಲಿಪುಲೆ ತುಳು ಹಾಸ್ಯಮಯ ಕಾರ್ಯಕ್ರಮ ಪ್ರಸ್ತುತ ಪಡಿಸಿತು
(ಚಿತ್ರ: ರೋನ್ಸ್ ಬಂಟ್ವಾಳ್)











