ಬೆಂಗಳೂರು:ದೇವೇಗೌಡರು ಹಾಗೂ ಪರಮೇಶ್ವರ್ ಅವರ ನಡುವೆ ವಾಕ್ಸಮರ ತಾರಕಕ್ಕೇರಿದ್ದು, ‘ದೇವೇಗೌಡರು ಪ್ರತಿಯೊಂದು ಚುನಾವಣೆಯಲ್ಲಿ ಕಣ್ಣೀರು ಹಾಕ್ತಾರೆ, ಚುನಾವಣೆಯಲ್ಲಿ ಗೆಲ್ಲದಿದ್ದರೆ ವಿಷ ಕುಡಿಯುತ್ತೇನೆ ಎಂದು ಹೇಳ್ತಾರೆ ಅವರು ಯಾವಾಗ ವಿಷ ಕುಡಿಯುತ್ತಾರೆಂದು ನಾನು ಕಾಯುತ್ತಿದ್ದೇನೆ’ ಎಂದು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ವ್ಯಂಗ್ಯವಾಡಿದ್ದಾರೆ. ದೇವೇಗೌಡರು ಪದೇಪದೇ ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೇನೆ ಎಂದು ಹೇಳ್ತಾರೆ. ಮುಂದಿನ ಜನ್ಮ ಇದೆಯೋ ಇಲ್ಲವೋ, ಈ ಜನ್ಮದಲ್ಲೇ ಮತಾಂತರ ಆಗುವುದಾದರೆ ಆಗಲಿ ಎಂದು ಪರಮೇಶ್ವರ್ ಹೇಳಿದರು.

g

ತಂದೆ ಆಸ್ತಿಯನ್ನು ಮಕ್ಕಳಿಗೆ ಕೊಡ್ತಾರೆ. ಕುಮಾರಸ್ವಾಮಿಗೆ ದೇವೇಗೌಡರು ಏನು ಆಸ್ತಿ ಕೊಟ್ಟಿದ್ದಾರೆ. ಅಳುವ, ಕಣ್ಣೀರು ಹಾಕುವ ಆಸ್ತಿ ಕೊಟ್ಟಿದ್ದಾರೆ ಎಂದು ಪರಮೇಶ್ವರ್ ಹೇಳಿದರು. ಪರಮೇಶ್ವರ್ ಹೇಳಿಕೆ ನಾನ್ಸೆನ್ಸ್ , ರಬ್ಬಿಶ್. ಸೋನಿಯಾಗೆ ಖುಷಿಯಾಗೋದಾದ್ರೆ ಹೇಳಿಕೆ ನೀಡಲಿ. ಪರಮೇಶ್ವರ್ ಬಂಡವಾಳ ನನಗೂ ಗೊತ್ತಿದೆ. ದಲಿತರಿಗೆ ಸಿಎಂ, ಮಂತ್ರಿ ಪಟ್ಟ ನೀಡದಿದ್ದರೆ ಒದ್ದು ಕಿತ್ಕೊಳ್ಳಬೇಕು ಎಂದು ಹೇಳಿದವರು ಯಾರು ಎಂದು ದೇವೇಗೌಡರು ಪ್ರಶ್ನಿಸಿದ್ದಾರೆ.

By suddi9

Leave a Reply

Your email address will not be published. Required fields are marked *