ಮೂಡುಬಿದರೆ: ಕೋಟೆಬಾಗಿಲಿನ ಸುಭಾಸ್ನಗರದಲ್ಲಿ ರವಿ ದೇವಾಡಿಗ ಮತ್ತು ಆತನ ಮನೆಯವರು ಊರಿನ ಮಹಿಳೆಯರು, ಮಕ್ಕಳು ಎನ್ನದೆ ಸ್ಥಳೀಯರಿಗೆ ಆಗಾಗ್ಗೆ ಉಪಟಳ ನೀಡಿ ಭಿತಿ ಹುಟ್ಟಿಸುತ್ತಿದ್ದಾರೆಂಬ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾ ಮಾನವ ಹಕ್ಕು ಆಯೋಗದ ಮಹಿಳಾ ವಿಭಾಗ ಭಾನುವಾರ ಸಂಜೆ ಸುಭಾಸ್ ನಗರಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತು.
ಈ ವೇಳೆ ಊರವರು ರವಿ ದೇವಾಡಿಗ ಮತ್ತು ಆತನ ಮಕ್ಕಳಿಂದ ಆಗುತ್ತಿರುವ ತೊಂದರೆಯನ್ನು ಮಹಿಳಾ ಹಕ್ಕು ವಿಭಾಗದ ಮುಂದೆ ವಿವರವಾಗಿ ಬಿಡಿಸಿಟ್ಟರು.
ಸುಬಾಸ್ ನಗರಕ್ಕೆ ಮಾನವ ಹಕ್ಕು ಆಯೋಗ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.

ರವಿ ದೇವಾಡಿಗನ ಕ್ರಿಮಿನಲ್ ವರ್ತನೆಯಿಂದ ಊರಲ್ಲಿ ನೆಮ್ಮದಿ ಇಲ್ಲದಂತಾಗಿದೆ. ಆತನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ರವಿ ದೇವಾಡಿಗನ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾದರೆ ಪೊಲೀಸರ ವಿರುದ್ಧವೇ ಆತ ಬೆದರಿಕೆ ತಂತ್ರ ಅನುಸುತ್ತಿದ್ದಾನೆಂದು ಭ್ರಷ್ಟಾಚರ ನಿರ್ಮುಲನೆ ಹಾಗೂ ಮಾನವ ಹಕ್ಕು ಸಂಸ್ಥೆ ಮೂಡುಬಿದರೆ ವಲಯಾಧ್ಯಕ್ಷ ರತ್ನಾಕರ ದೇವಾಡಿಗ ಅವರು ಮಾನವ ಹಕ್ಕು ಮಹಿಳಾ ವಿಭಾಗದ ಗಮನಕ್ಕೆ ತಂದರು.
ಕಮಿಷನರ್ ಭೇಟಿ:
ರವಿ ದೇವಾಡಿಗನ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿ ಶೀಘ್ರದಲ್ಲೆ ಜಿಲ್ಲಾ ಪೊಲೀಸ್ ಕಮಿಷನರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗುವುದು ಎಂದು ಮಾನವ ಹಕ್ಕು ಆಯೋಗದ ಮಹಿಳಾ ವಿಭಾಗದ ಅಧ್ಯಕ್ಷೆ ವಿಜಯಶ್ರೀ ಹೇಳಿದರು. ಆಯೋಗದ ಸದಸ್ಯೆಯರಾದ ಆಶಾ ಭಾಸ್ಕರ್, ಪದ್ಮಿನಿ, ಆಯೋಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಉಷಾ ಭಂಡಾರಿ, ಸದಸ್ಯೆ ಉಷಾ ಕಿರಣ್ ಹಾಜರಿದ್ದರು.
