ಬಂಟ್ವಾಳ ತಾಲೂಕುನ ನಾವೂರು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೇಸ್ (ಐ) ಪಕ್ಷದ ಬೆಂಲಲಿತ ಅಭ್ಯರ್ಥಿ ಅಸುಂತಾ ಮೆಲ್ವಿನ್ಡಿ ‘ಸೋಜಾ ಅವರು ಗೆಲುವು ಸಾಧಿಸಿದ್ದಾರೆ. ಎದುರಾಳಿ ಬಿಜೆಪಿ ಅಭ್ಯರ್ಥಿ ವಸಂತಿ ಗೌಡ ಅವರನ್ನು ಸುಮಾರು 130 ಮತಗಳಿಂದ ಪರಾಭವಗೊಳಿಸಿ ವಿಜೇತರಾಗಿದ್ದಾರೆ.
Asuntha Melwin D'Souza-3

ಅಸುಂತಾ ಅವರು ಬಂಟ್ವಾಳ ಆಗ್ರಾರ್ ಚಾರ್ಲ್ಸ್ ವಲೇರಿಯನ್ ಫ್ರಾಂಕ್ ಮತ್ತು ಲೆತೇಷಿಯಾ ಚಾರ್ಲ್ಸ್ ಫ್ರಾಂಕ್ ಸುಪುತ್ರಿ ಆಗಿದ್ದು, ರೊನಿಡಾ ಪ್ರೆಸ್ ವಿೂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕಿ ತಾರಾ ರೋನ್ಸ್ ಬಂಟ್ವಾಳ್ ಅವರ ಸಹೋದರಿ ಆಗಿದ್ದಾರೆ. ಸಚಿವ ಹಾಗೂ ಬಂಟ್ವಾಳ ಶಾಸಕ ಬಿ.ರಮಾನಾಥ ರೈ, ಮೂಡ ಅಧ್ಯಕ್ಷ ಪಿಯೂಸ್ ಎಲ್.ರೋಡ್ರಿಗಸ್, ಬಂಟ್ವಾಳ ಪುರಸಭೆಸದಸ್ಯ ರಾಜೇಶ್ ರೋಡ್ರಿಗಸ್, ವಾಲ್ಟರ್ ನೊರೋನ್ಹಾ ಮತ್ತಿತರ ಗಣ್ಯರು ಅಸುಂತಾ ಅವರನ್ನು ಅಭಿನಂದಿಸಿದ್ದಾರೆ.

By suddi9

Leave a Reply

Your email address will not be published. Required fields are marked *