ಬಂಟ್ವಾಳ: ತಾಲೂಕಿನ 57 ಪಂಚಾಯಿತಿಗಳ 311 ಮತಗಟ್ಟೆಗಳ ಮತ ಎಣೆಕೆ ಕಾರ್ಯ 3 ಹಂತಗಳಲ್ಲಿ ಮೊಡಂಕಾಪು ಇನ್ಪೆಂಟ್ ಜೀಸಸ್ ಆಂಗ್ಲ ಹಾಗೂ ಕನ್ನಡ ಮಾಧ್ಯಮ ಶಾಲೆಯಲ್ಲಿ ನಿಗದಿತ ಸಮಯಕ್ಕೆ ಶಾಂತಿಯುತವಾಗಿ ಶುಕ್ರವಾರ ನಡೆಯಿತು.
18 ಕೊಠಡಿಯಲ್ಲಿ 91 ಟೇಬಲ್ಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ಪ್ರಾರಂಭವಾಯಿತಾದರೂ ಬ್ಯಾಲೆಟ್ ಪೇಪರ್ ಎಣಿಕೆ ನಿಧಾನಗತಿಯಲ್ಲಿ ನಡೆಯಿತು. ಮೊದಲ ಸುತ್ತಿನ ಮತ ಎಣಿಕೆ ಕೊನೆಯಾಗುತ್ತಿದ್ದಂತೆ ಸ್ಥಳಕ್ಕೆ ಜಿಲ್ಲಾಧಿಕಾರಿ ಎ ಬಿ ಇಬ್ರಾಹಿಂ ಅವರು ಬೇಟಿ ನೀಡಿ ಮೊದಲ ಹಂತ ಸಂಪೂರ್ಣ ಮುಗಿದ ಬಳಿಕವೇ ಎರಡನೇ ಸುತ್ತಿನ ಮತ ಎಣೆಕೆ ನಡೆಸಬೇಕೆಂಬ ನಿರ್ದೇಶನ ನೀಡಿದರು. ಈ ಹಿನ್ನಲೆಯಲ್ಲಿ ಮತ ಎಣಿಕೆ ಕಾರ್ಯವು ಕೆಲ ಹೊತ್ತುಗಳ ಕಾಲ ಮತ ಎಣಿಕೆ ಸ್ಥಗಿತವಾಗಿತ್ತು. ಇದರಿಂದಾಗಿ ಎರಡನೇ ಸುತ್ತಿನ ಮತ ಎಣಿಕೆ ಆರಂಭವಾಗುವಾಗ ಮಧ್ಯಾಹ್ನವಾಗಿತ್ತು.
ಚುನಾವಣಾ ವೀಕ್ಷಕ ಪಿ ಎಲ್ ಜ್ಯೋತೀಂದ್ರ, ಚುನಾವಣಾ ನೋಡಲ್ ಅಧಿಕಾರಿ ಎನ್ ಆರ್ ಉಮೇಶ್, ಚುನಾವಣಾ ಮೇಲ್ವಿಚಾರಕ ಸದಾಶಿವ ಪ್ರಭು, ಬಂಟ್ವಾಳ ತಹಸೀಲ್ದಾರ ಪುರಂದರ ಹೆಗಡೆ, ದ ಕ ಜಿಲ್ಲಾ ಎಸ್ ಪಿ ಡಾ. ಶರಣಪ್ಪ, ಎಎಸ್ಪಿ ರಾಹುಲ್ ಕುಮಾರ್, ವೃತ್ತ ನಿರೀಕ್ಷಕ ಬೆಳ್ಳಿಯಪ್ಪ ಮತ್ತಿತರರು ಹಾಜರಿದ್ದರು.
ಡಿಸಿ ತರಾಟೆ:
ಮತ ಎಣಿಕೆ ಕೇಂದ್ರಗಳಿಗೆ ಫಾಸ್ ಒದಗಿಸಿದವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶವಿದ್ದು, ಆಯಾ ಸುತ್ತ್ತಿನ ಫಲಿತಾಂಶ ಘೋಷಣೆಯನ್ನು ಮೈಕ್ ಮೂಲಕ ಮಾತ್ರ ಹೇಳಲಾಗುತ್ತಿತ್ತು. ಆದರೆ ಮಾಧ್ಯಮ ಕೇಂದ್ರವನ್ನು ಮೂಲೆಯಲ್ಲಿ ಮಾಡಲಾಗಿದ್ದರಿಂದ ಸರಿಯಾಗಿ ಇದು ಮಾಧ್ಯಮ ಕೇಂದ್ರಕ್ಕೆ ಕೇಳುತ್ತಿರಲಿಲ್ಲ. ಈ ಹಿನ್ನಲೆಯಲ್ಲಿ ಬಂಟ್ವಾಳ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ್ ವಿಶ್ವಕರ್ಮ ನೇತೃತ್ವದಲ್ಲಿ ಜಿಲ್ಲಾಧಿಕಾರಿಯವರಿಗೆ ದೂರು ನೀಡಲಾಯಿತು. ಮಾಧ್ಯಮ ಕೇಂದ್ರಕ್ಕೆ ಬೇಟಿ ನೀಡಿದ ಡಿಸಿಯವರು ಬೆಂಚು ಡೆಸ್ಕ್ ಇರುವುದನ್ನು ಗಮನಿಸಿ ಚುನಾವಣಾಧಿಕಾರಿ ಎಲ್ಲಿ ಎಂದು ಪ್ರಶ್ನಿಸಿದರು. ಆ ಸಮಯ ಚುನಾವಣಾಧಿಕಾರಿ ನಾಪತ್ತೆಯಾಗಿದ್ದರು. ಅವ್ಯವಸ್ಥೆಯನ್ನು ಗಮನಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ಚುನಾವಣಾ ವೀಕ್ಷಕರ ಕೊಠಡಿಗೆ ಮಾಧ್ಯಮ ಕೊಠಡಿಯನ್ನು ವರ್ಗಾವಣೆ ಮಾಡುವಂತೆ ಸೂಚಿಸಿ, ಸಮಗ್ರ ಮಾಹಿತಿಯನ್ನು ನೀಡುವಂತೆ ಸೂಚಿಸಿದರು.
ಮೂರು ಮೊಬೈಲ್ ವಶಕ್ಕೆ:
ಮತ ಎಣೆಕೆಯ ಸಂದರ್ಭ ಎಣಿಕೆ ಕೇಂದ್ರಕ್ಕೆ ಅಕ್ರಮ ಪ್ರವೇಶಿಸಿದ್ದೂ ಅಲ್ಲದೆ, ಮತಎಣಿಕೇಂದ್ರದ ಬಳಿ ಮೊಬೈಲ್ ನಲ್ಲಿ ಹೊರಗಿನವರಿಗೆ ಮಾಹಿತಿ ನೀಡುತ್ತಿದ್ದ ಮೂವರಿಂದ ಜಿಲ್ಲಾಧಿಕಾರಿಯವರು ಮೊಬೈಲ್ ವಶಕ್ಕೆ ಪಡೆದು ಹೊರಗೆ ಕಳುಹಿಸಿದರು. ತಾಲೂಕು ಕೇಂದ್ರದಿಂದ ಜು.6ರಂದು ಮೊಬೈಲ್ ಪಡೆದುಕೊಳ್ಳುವಂತೆ ಸೂಚಿಸಲಾಗಿದೆ.
ಸಿಸಿ ಕ್ಯಾಮರಾ ವ್ಯವಸ್ಥೆ ಇಲ್ಲ:
ಶಾಲೆಯ ಆವರಣದಲ್ಲಿ ಹಿಂದೆಹಾಕಿದ್ದ ಸಿಸಿ ಕ್ಯಾಮರಾಗಳು ಬಿಟ್ಟರೆ ಕೊಠಡಿಗಳಿಗೆ ಪ್ರತ್ಯೇಕ ಕ್ಯಾಮರಾಗಳನ್ನು ಅಳವಡಿಸಿ ನಿಘಾ ಇಡುವ ಕೆಲಸವಾಗಿರಲಿಲ್ಲ. ಮತ ಎಣಿಕೆಯ ಸಮಗ್ರ ಚಿತ್ರೀಕರಣ ಇದರಿಂದ ಸಿಗದಂತಾಗಿದೆ.
ಚೀಟಿ ನಲ್ಲಿ ವಿನ್:
ಕರಿಯಂಗಳ ಗ್ರಾಮ ಪಂಚಾಯಿತಿನ ನಾಲ್ಕನೇ ವಾರ್ಡ್ ಅಭ್ಯರ್ಥಿಗಳಾದ ರಾಜು ಕೋಟ್ಯಾನ್ ಹಾಗೂ ಕಿಶೋರ್ ಅವರಿಗೆ 286 ಮತ ಪಡೆದು ಸಮ ಬಲ ಸಾಧಿಸಿರುವ ಹಿನ್ನಲೆಯಲ್ಲಿ ಚುನಾವಣಾಧಿಕಾರಿಗಳು ಚೀಟಿ ಎತ್ತುವ ಮೂಲಕ ವಿಜೇತರನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಸಿದರು. ಈ ಸಂದರ್ಭ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕಿಶೋರ್ ಅವರು ಆಯ್ಕೆಯಾಗಿದ್ದಾರೆಂದು ಘೋಷಿಸಲಾಯಿತು.
ಒಕ್ಕೂಟದ ಪ್ರಧಾನ ಕಾರ್ಯದರ್ಶಿಗೆ ಸೋಲು:
ಬಂಟ್ವಾಳ ತಾಲೂಕು ಗ್ರಾಮ ಪಂಚಾಯಿತಿ ಸದಸ್ಯರುಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ , ಸಂಗಬೆಟ್ಟು ಪಂಚಾಯಿತಿಯ ಮಾಜಿ ಅಧ್ಯಕ್ಷ, ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಕಾಂಗ್ರೇಸ್ ನಾಯಕ ಪ್ರಭಾಕರ ಪ್ರಬು ಅವರು 7 ಮತಗಳ ಅಂತರದಲ್ಲಿ ಸೋಲನ್ನು ಅನುಭವಿಸಿದ್ದಾರೆ.
ಸಚಿವರಿಗೆ ಮುಖ ಭಂಗ:
ನೂತನವಾಗಿ ಅಸ್ತಿತ್ವಕ್ಕೆ ಬಂದ ಜಿಲ್ಲಾ ಉಸ್ತುವಾರಿ ಸಚಿವರ ತವರು ಗ್ರಾಮ ಕಳ್ಳಿಗೆ ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಬೇರಿ ಭಾರಿಸಿದ್ದು, ಅಮ್ಮುಂಜೆ ಗ್ರಾಮ ಪಂಚಾಯತಿಯು ಬಿಜೆಪಿ . ಮೊದಲ ಆಡಳಿತ ಬಿಜೆಪಿ ಪಾಲಾಗಿದೆ. ಆರೋಗ್ಯ ಸಚಿವರ ವಿಧಾನ ಸಭಾ ಕ್ಷೇತ್ರಕ್ಕೆ ಒಳಪಟ್ಟ ತುಂಬೆ ಗ್ರಾಮ ಪಂಚಾಯಿತಿನಲ್ಲೂ ಬಿಜೆಪಿ ಬೆಂಬಲಿತರು ಜಯಗಳಿಸಿದ್ದಾರೆ. ಇಲ್ಲಿನ ನಿಕಟ ಪೂರ್ವ ಅಧಕ್ಷ ಮಹಮ್ಮದ್ ಒಳವೂರು ಅವರು ಈ ಬಾರಿ ಬಿಜೆಪಿಗೆ ಸೇರ್ಪಡೆಗೊಂಡು ಅವರ ಚುನಾವಣೆ ಎದುರಿಸಿತ್ತು.
ಕೈಕಂಬದಲ್ಲಿ ವಾಹನಗಳ ಸಾಲು
ಮತ ಎಣಿಕಾ ಕೇಂದ್ರದ ಸ್ಥಳಕ್ಕೆ ವಾಹನಗಳ ಸಂಚಾರಕ್ಕೆ ತಡೆ ಒಡ್ಡಲಾಗಿದ್ದು, ಇಲ್ಲಿ ಆಗಮಿಸುವ ಎಲ್ಲಾವಾಹನಗಳನ್ನೂ ಕೈಕಂಬದ ಪೂಂಜಾ ಮೈದಾನದಲ್ಲಿ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿತ್ತು. ಕುತೂಹಲಿಗರು ಅಲ್ಲಿಂದ ಪಾದಯಾತ್ರೆ ಮಾಡಿಕೊಂಡು ಎಣಿಕಾ ಕೇಂದ್ರದತ್ತ ಬರಬೇಕಾಯಿತು.
ತಾ ಪಂ ಸದಸ್ಯನಿಗೆ ಸೋಲು:
ಬಂಟ್ವಾಳ ತಾ ಪಂ ನ ಬಿಜಿಪಿ ಸದಸ್ಯರಮೇಶ್ಕುಡ್ಮೇರುರವರು ನೂತನವಾಗಿ ಅಸ್ಥಿತ್ವಕ್ಕೆ ಬಂದಇರ್ವತ್ತೂರುಗ್ರಾಮ ಪಂಚಾಯಿತಿಗೆ ಸ್ಪಧರ್ಿಸಿ ಸೋಲು ಅನುಭವಿಸಿದ್ದಾರೆ.
ಗೆಲುವು:
ಅನಂತಾಡಿಗ್ರಾ.ಪಂ.ನ ಎಲ್ಲ 7 ಮಂದಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳೂ ಜಯಗಳಿಸಿದ್ದಾರೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಸನತ್ ಕುಮಾರ್ ರೈ , ಪುರಂದರಗೌಡ, ವಸಂತಗೌಡ, ಗೀತಾ, ಸುಜಾತಾ, ಕವಿತಾ, ವಸಂತಿಅವರು ಜಯಗಳಿಸಿದ್ದಾರೆ.
ನೂತನವಾಗಿ ಅಸ್ತಿತ್ವಕ್ಕೆ ಬಂದ ಸಾಲೆತ್ತೂರುಗ್ರಾ.ಪಂ. ಚೊಚ್ಚಲ ಚುನಾವಣೆಯನ್ನುಎದುರಿಸುತ್ತಿದ್ದುಒಟ್ಟು 7 ಸ್ಥಾನಗಳಲ್ಲಿ 3 ಕಾಂಗ್ರೆಸ್, 3 ಬಿಜೆಪಿ ಹಾಗೂ 1 ಪಕ್ಷೇತರಅಭ್ಯರ್ಥಿ ಜಯ ಗಳಿಸಿದ್ದಾರೆ.
ನೂತನವಾಗಿ ಅಸ್ತಿತ್ವಕ್ಕೆ ಬಂದ ಮಾಣಿಲ ಗ್ರಾ.ಪಂ.ನ 8 ಸ್ಥಾನಗಳಲ್ಲಿ ಕಾಂಗ್ರೆಸ್ 5, ಬಿಜೆಪಿ 3 ಬೆಂಬಲಿತ ಅಭ್ಯರ್ಥಿಗಳು ವಿಜಯಿಯಾಗಿದ್ದಾರೆ.
ಸಜಿಪ ನಡು ಪಂಚಾಯಿತಿಯಲ್ಲಿ 7 ಮಂದಿ ಎಸ್ ಡಿ ಪಿ ಐ ಬೆಂಬಲಿತ ಅಭ್ಯರ್ಥಿಗಳು ಗೆಲುವು ದಾಖಲಿಸಿದ್ದಾರೆ.
ವಿಯಯೋತ್ಸವ:
ವಿಜೇತ ಅಭ್ಯರ್ಥಿಗಳು ನಿಷೇಧದ ನಡುವೆಯೂ ತಮ್ಮಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಭ್ರಮ ಹಾಗೂ ವಿಜಯೋತ್ಸವನ್ನು ಆಚರಿಸಿದರು
ಪತ್ರಕರ್ತನ ಗೆಲುವು:
ನೂತನವಾಗಿ ಅಸ್ಥಿತ್ವಕ್ಕೆ ಬಂದ ನೆಟ್ಲಮುಡ್ನೂರು ಗ್ರಾಮ ಪಂಚಾಯಿತಿಗೆ ಸ್ಪರ್ಧಿಸಿದ್ದ ಪತ್ರಕರ್ತ ಲತೀಪ್ ನೇರಳಕಟ್ಟೆ ಅವರು ಜಯಗಳಿಸಿದ್ದಾರೆ
