ಉಜಿರೆ : ಉಜಿರೆ ರುಡ್ಸೆಟ್ ಸಂಸ್ಥೆಯಲ್ಲಿ ಕೆಳೆದ 45 ದಿನಗಳಿಂದ ನಡೆಯುತ್ತಿದ್ದ ಮಹಿಳೆಯರ ಕಂಪ್ಯೂಟರ್ ಡಿ.ಟಿ.ಪಿ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭವು ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಜಯವಾಣಿ ದಿನಪತ್ರಿಕೆಯ ವರದಿಗಾರರಾದ ಮನೋಹರ್ ಬಳಂಜ ಬಾಗವಹಿಸಿ ಸ್ವ ಉದ್ಯೋಗ ಮತ್ತು ಅದಕ್ಕೆ ರುಡ್ಸೆಟ್ ಸಂಸ್ಥೆಯ ಬೆಂಬಲದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.
ಈ ಕಾರ್ಯಕ್ರಮದಲ್ಲಿ ರುಡ್ಸೆಟ್ ಸಂಸ್ಥೆಯ ಅದ್ಯಯನಕ್ಕಾಗಿ ವಿ ಲೀಡ್ ಸಂಸ್ಥೆ, ಮೈಸೂರಿಗೆ ಬಂದಂತಹ ಅಮೇರಿಕಾ ದೇಶದ ಉತ್ತರ ಅಯೋವ ವಿಶ್ವವಿದ್ಯಾಲಯದ ಫ್ರೊ. ರೋಬೆಕಾ ಮತ್ತು ಐದು ಜನರ ತಂಡವೂ ಭಾಗವಹಿಸಿತ್ತು. ಕಾರ್ಯಕ್ರಮದ ಅಧ್ಯಕ್ಷರಾಗಿ ರುಡ್ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರಾದ ಟಿ.ಪಿ. ಜಗದೀಶ್ ಮೂರ್ತಿ ನಿರ್ವಹಿಸಿದರು. ಸಂಸ್ಥೆಯ ನಿರ್ದೇ ಶಕರಾದ ಅಜಿತ್ ಕೆ. ರಾಜಣ್ಣವರ್ ಅತಿಥಿಗಳನ್ನು ಸ್ವಾಗತಿಸಿದರು. ಉಪನ್ಯಾಸಕರಾದ ಅನಸೂಯ ಕಾರ್ಯಕ್ರಮ ನಿರೂಪಿಸಿ ಅಬ್ರಹಾಂ ಜೇಮ್ಸ್ ವಂದಿಸಿದರು. ಈ ತರಬೇತಿ ಕಾರ್ಯಕ್ರಮದಲ್ಲಿ 25 ಮಹಿಳಾ ಶಿಬಿರಾರ್ಥಿಗಳು ತರಬೇತಿಯ ಲಾಭವನ್ನು ಪಡೆದರು.
