ಬಂಟ್ವಾಳ;ತಾಲ್ಲೂಕಿನಲ್ಲಿ ಒಟ್ಟು 57 ಗ್ರಾಮ ಪಂಚಾಯಿತಿನ ಒಟ್ಟು 803 ಸ್ಥಾನಗಳಿಗೆ ಕಳೆದ 29ರಂದು ನಡೆದ ಚುನಾವಣೆ ಮತ ಎಣಿಕೆ ಪ್ರಕ್ರಿಯೆ ಇಲ್ಲಿನ ಮೊಡಂಕಾಪು ಇನ್ಫೆಂಟ್ ಜೀಸಸ್ ಶಾಲೆ ಆವರಣದಲ್ಲಿ ಶುಕ್ರವಾರ ನಡೆಯಲಿದೆ. ಇದಕ್ಕಾಗಿ ಬಂಟ್ವಾಳ ಹೆಚ್ಚುವರಿ ಪೊಲೀಸರ ಬಿಗಿ ಬಂದೋಬಸ್ತಿನ ನಡುವೆ ಇಲ್ಲಿನ 700ಕ್ಕೂ ಮಿಕ್ಕಿ ಚುನಾವಣಾ ಸಿಬ್ಬಂದಿಗಳು ಗುರುವಾರ ಭಾರೀ ಸಿದ್ಧತೆ ನಡೆಸಿದ್ದಾರೆ.

3 2 1

4btl-modankap
ಮೊಡಂಕಾಪು ಶಾಲೆಯ ವಿವಿಧ ಕೊಠಡಿಗಳಲ್ಲಿ ಪ್ರತ್ಯೇಕ-ಪ್ರತ್ಯೇಕ ಒಟ್ಟು 90 ಮೇಜು ಅಳವಡಿಸಲಾಗಿದ್ದು, ಒಂದು ಬಾರಿಗೆ ಒಟ್ಟು 10 ಗ್ರಾಮ ಪಂಚಾಯಿತಿ ಮತ ಎಣಿಕೆ ಪ್ರಕ್ರಿಯೆ ಆರಂಭಿಸಲಾಗುತ್ತದೆ. ಇದರಿಂದಾಗಿ ಪ್ರತೀ ಪಂಚಾಯಿತಿ ಫಲಿತಾಂಶ ಹಂತ ಹಂತವಾಗಿ ಪ್ರಕಟಿಸಲು ಅನುಕೂಲವಾಗಲಿದ್ದು, ಸಂಜೆ ವೇಳೆಗೆ ಎಲ್ಲಾ ಫಲಿತಾಂಶ ಪ್ರಕಟಣೆ ಸಾಧ್ಯವಾಗುತ್ತದೆ. ಮತ ಎಣಿಕೆ ಕೇಂದ್ರ ಪ್ರವೇಶಿಸಲು ಅಭ್ಯರ್ಥಿಗಳು ಮತ್ತು ಅವರ ಏಜೆಂಟರಿಗೆ ಮಾತ್ರ ಪ್ರತ್ಯೇಕ ಗುರುತು ಚೀಟಿ ವಿತರಿಸಲಾಗಿದ್ದು, ಮೊಬೈಲ್ ಕೊಂಡೊಯ್ಯಲು ಅವಕಾಶ ಇಲ್ಲ ಎಂದು ತಹಶೀಲ್ದಾರ್ ಪುರಂದರ ಹೆಗ್ಡೆ ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *