ಬಂಟ್ವಾಳ; ಬೋಳಂತೂರು ಗ್ರಾಮದ ಸುರಿಬೈಲು ಎಂಬಲ್ಲಿ ಪುರಾತನ ಸೂರ್ಯಲಿಂಗೇಶ್ವರ ದೇವಸ್ಥಾನದ ಕುರುಹು ಪತ್ತೆಯಾಗಿದ್ದು, ಜೀರ್ಣೋದ್ದಾರಗೊಳಿಸುವ ನಿಟ್ಟಿನಲ್ಲಿ ಗ್ರಾಮದ ಸರ್ವಧರ್ಮದ ಜನತೆ ಸಂಕಲ್ಪ ತೊಟ್ಟಿದ್ದಾರೆ.
ಗ್ರಾಮದಲ್ಲಿ ಕಾಣಿಸಿಕೊಂಡ ಅಶಾಂತಿ, ಅನಾರೋಗ್ಯ, ಸಂಕಷ್ಟಗಳಿಗೆ ಈ ದೇವಸ್ಥಾನದ ಜೀರ್ಣಾವಸ್ಥೆಯೇ ಕಾರಣ ಎಂಬ ಹಿನ್ನೆಲೆಯಲ್ಲಿ , ಕೇಳಲಾದ ಅಷ್ಟ ಮಂಗಲ ಪ್ರಶ್ನೆಯಲ್ಲಿ ತ್ರೇತಾಯುಗದಲ್ಲಿ ನಿರ್ಮಾಣಗೊಂಡಿರುವ ಈ ದೇವಸ್ಥಾನದ ಕುರಿತಾಗಿ ಅಚ್ಚರಿಯ ಮಾಹಿತಿಗಳು ಬೆಳಕಿಗೆ ಬಂದಿದೆ. ತ್ರೇತಾಯುಗದ ರಾಮನು ಈ ಕ್ಷೇತ್ರಕ್ಕೆ ಬಂದಿದ್ದ, ಸಾಕ್ಷಾತ್ ಶುವನೇ ತನ್ನ ಜೊತೆ ಸೂರ್ಯನೊಂದಿಗೆ ರಾಮನಿಗೆ ಪ್ರತ್ಯಕ್ಷನಾಗಿದ್ದ ಈ ಕಾರಣಕ್ಕೆ ಇದನ್ನು ಸೂರ್ಯಲಿಂಗೇಶ್ವರ ದೇವಸ್ಥಾನವೆಂದು ಕರೆಯಲಾಗಿದೆ. ಕಾಲಾಂತರದಲ್ಲಿ ಶಂಕರ ಭಾಗವತ ಪಾದರಾದ ಆದಿಶಂಕರಾಚಾರ್ಯರು ಈ ಕ್ಷೇತ್ರಕ್ಕೆ ಬಂದಿದ್ದರೆಂದೂ ತಿಳಿದುಬಂದಿದೆ.

DSC_6819 DSC_6820

ನಂದರಸರು ಮತ್ತು ಟಿಪ್ಪು ಸುಲ್ತಾನನಿಗೂ ಯುದ್ದವಾಗಿ ಎಲ್ಲವೂ ಕಾಲಗರ್ಭದಲ್ಲಿ ಸಾನ್ನಿಧ್ಯೋಪಾದಿಗಳೆಲ್ಲ ಹುದುಗಿ ಹೋಗಿರುವುದಾಗಿ ಕಂಡುಬಂದಿದೆ. ಅಲ್ಲದೆ ಸದ್ರಿ ಸ್ಥಳದ ಮುಂಭಾಗದಲ್ಲಿರುಇವ ಅಂಗಣ ಮಾರು ಎಂಬ ಸ್ಥಳದಲ್ಲಿಯೂ ದೈವಸಾನಿಧ್ಯವಿರುವ ಬಗ್ಗೆ ಅಷ್ಟಮಂಗಲ ಪ್ರಶ್ನೆಯಲ್ಲಿ ಗೊತ್ತಾಗಿದ್ದು, ಸ್ಥಳೀಯರ ತಂಡ ದೇವಸ್ಥಾನವನ್ನು ಜೀಣರ್ೋದ್ದಾರ ಗೊಳಿಸುವ ನಿಟ್ಟಿನಲ್ಲಿ ಕಾರ್ಯೋ ನ್ಮುಖರಾಗಿದ್ದಾರೆ.
ಪುತ್ತೂರು ಮಾಡಾವಿನ ಜ್ಯೋತಿಷಿ ಶ್ರೀಪತಿ ಭಟ್ ಅವರ ಮಾರ್ಗದರ್ಶನದಲ್ಲಿ ದೇವಳದ ಕಾರ್ಯ ಕೈಗೆತ್ತಿಕೊಂಡಿರುವ ಇಲ್ಲಿನ ತಂಡ, ನೆಲವನ್ನು ಅಗೆದು ಇತಿಹಾಸದ ಕುರುಹುಗಳನ್ನು ಪತ್ತೆ ಮಾಡುವ ಕಾರ್ಯದಲ್ಲಿ ತೊಡಗಿದೆ. ಸ್ಥಳೀಯ ಪರಿಸರದಲ್ಲಿ ವಾಸ್ತವ್ಯ ವಿರುವ ಮುಸಲ್ಮಾನ ಸಹೋದರರೂ ಕೂಡ ದೇವಸ್ಥಾನದ ಜೀರ್ಣೋದ್ದಾರ ಕಾರ್ಯಕ್ಕೆ ನೆರವು ನೀಡುವ ಭರವಸೆ ನೀಡಿದ್ದಾರೆ, ಈಗಾಗಲೇ ಪ್ರತೀ ಸೋಮವಾರ ಗ್ರಾಮಸ್ಥರ ಭಾಗವಹಿಸುವಿಕೆಯೊಂದಿಗೆ ಭಜನಾ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಸ್ಥಳೀಯರಾದ ಜಯರಾಜ್ ಬೋಳಂತೂರು ತಿಳಿಸಿದ್ದಾರೆ

By Suddi9

Leave a Reply

Your email address will not be published. Required fields are marked *