ಬಂಟ್ವಾಳ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಿ.ಸಿ.ರೋಡ್ ಬಂಟ್ವಾಳದಲ್ಲಿ ಕಾನೂನು ಸಲಹೆಗಾರರು ಹಾಗೂ ಸಂಧಾನಕಾರರಾಗಿ ಬಂಟ್ವಾಳದ ನ್ಯಾಯವಾದಿ ಶ್ರೀಮತಿ ಆಶಾಪ್ರಸಾದ್ ರೈ ಯವರನ್ನು ದ.ಕ.ಜಿಲ್ಲಾ ಪ್ರಧಾನ ನ್ಯಾಯಧೀಶೆ ಹಾಗೂ ಸೆಷನ್ಸ್ ನ್ಯಾಯಾಧೀಶೆ ಮತ್ತು ಜಿಲ್ಲಾ ಕಾನೂನು ಸೇವಾಪ್ರಾಧಿಕಾರ ಮಂಗಳೂರು ಇದರ ಅಧ್ಯಕ್ಷರಾದ ಗೌರವಾನ್ವಿತ ಶ್ರೀಮತಿ ಉಮಾ ಎಂ.ಜಿ. ಇವರು ನೇಮಕ ಮಾಡಿ ಆದೇಶಿಸಿರುತ್ತಾರೆ.

ಅವರು ತಾ.03-06-2015 ರಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಇಲಾಖೆ ಬಿ.ಸಿ.ರೋಡ್ ಇದರ ಕಛೇರಿಯಲ್ಲಿ ಮಹಿಳಾ ದೌರ್ಜನ್ಯ ತಡೆ ಕಾಯ್ದೆಯಂತೆ ಅಧಿಕಾರ ವಹಿಸಿಕೊಂಡಿರುತ್ತಾರೆ ಎಂದು ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ನ್ಯಾಯವಾದಿ/ನೋಟರಿ ಎಮ್.ಚಂದ್ರಶೇಖರ ಪೂಜಾರಿ ತಿಳಿಸಿರುತ್ತಾರೆ.
