ದ.ಕ.ಜಿ.ಪಂ.ಹಿ.ಪ್ರಾ ಶಾಲೆ ಮಜಿ ವೀರಕಂಭ ಇಲ್ಲಿ ದಿನಾಂಕ 01-06-2015 ರಂದು ಶಾಲೆಯು ತಳಿರು ತೋರಣದಿಂದ ಶೃಂಗಾರಗೊಂಡು ಶಾಲಾ ಪ್ರಾರಂಭೋತ್ಸವ ನೆರವೇರಿತು. ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳು ಹಣತೆ ಉರಿಸಿ ದೀಪೋಜ್ವಲನ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಶ್ರೀ ಶಾರದಾ ದೇವಿಗೆ ಪುಷ್ಪವನ್ನು ಅರ್ಪಿಸಿದರು.

ಕಾರ್ಯಕ್ರಮದಲ್ಲಿ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಶ್ರೀಯುತ ಮೋನಪ್ಪ, ಸದಸ್ಯರಾದ ಶ್ರೀಯುತ ವೀರಪ್ಪ ಶ್ರೀಯುತ ಕೊರಗಪ್ಪ ಶ್ರೀಯುತ ಸಂಜೀವ ಇತರ ಸದಸ್ಯರು ಹಾಗೂ ಪೋಷಕರು ಭಾಗವಹಿಸಿದ್ದರು. ಸರಕಾರದಿಂದ ಪಡೆದ ಉಚಿತ ಪಠ್ಯ ಪುಸ್ತಕವನ್ನು ವಿತರಿಸಲಾಯಿತು. ಎಸ್.ಡಿ.ಎಮ್.ಸಿ ಮತ್ತು ಪೋಷಕರ ಸಭೆ ನಡೆಸಿ ಸದ್ರಿ ವರ್ಷದ ವಾರ್ಷಿಕ ಕ್ರಿಯಾ ಯೋಜನೆ ತಯಾರಿಸಲಾಯಿತು ಮುಖ್ಯ ಶಿಕ್ಷಕರಾದ ಶ್ರೀಯುತ ನಾರಾಯಣ ಪೂಜಾರಿ ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ಶಕುಂತಳಾ ಎಮ್.ಬಿ ಧನ್ಯವಾದ ವಿತ್ತರು. ಶಿಕ್ಷಕಿ ಸಂಗೀತ ಶರ್ಮ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿ ಶ್ರೀಮತಿ ಸಿಸಿಲಿಯಾ ಹಾಗೂ ಕುಮಾರಿ ಜ್ಯೋತಿ ಸಹಕರಿಸಿದರು.
