ಬಂಟ್ವಾಳ: ಗ್ರಾಮಪಂಚಾಯತ್ ಚುನಾವಣೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆಯೇ ಅಭ್ಯಥರ್ಿಗಳ ಪರ ಪ್ರಚಾರದ ಅಬ್ಬಾರ ಹೆಚ್ಚಾಗುತ್ತಿದೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಯು.ಟಿ.ಖಾದರ್ ಭಾನುವಾರ ತುಂಬೆ ಗ್ರಾಮಪಂಚಾಯತ್ ವ್ಯಾಪ್ತಿಯ ಜ್ಯೋತಿಗುಡ್ಡೆ ಪರಿಸರದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯಥರ್ಿಯ ಪರ ಮತಯಾಚನೆ ನಡೆಸಿದರು. ಜ್ಯೋತಿಗುಡ್ಡೆಯ ಶ್ರೀ ದುಗರ್ಾಪರಮೇಶ್ವರೀ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದ ಸಚಿವರು ಬಳಿಕ ಈ ಪರಿಸರದ ಮನೆಗಳಿಗೆ ತೆರಳಿ ಮತ ಯಾಚಿಸಿ, ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡುವಂತೆ ಮನವಿ ಮಾಡಿದರು.
BTW_MAY24_1

BTW_MAY24_1B
ಈ ಸಂದರ್ಭ ಕೆಪಿಸಿಸಿ ಕಾರ್ಮಿಕರ ವಿಭಾಗದ ಉಪಾಧ್ಯಕ್ಷ ಅಮೀರ್ ಅಹಮ್ಮದ್, ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಮಮತಾಗಟ್ಟಿ, ಪ್ರಕಾಶ್ ಶೆಟ್ಟಿ ತುಂಬೆ, ಪುದು ಗ್ರಾ.ಪಂ.ಉಪಾಧ್ಯಕ್ಷ ಮಹಮ್ಮದ್ ಶರೀಫ್ ಅಭ್ಯರ್ಥಿಗಳಾದ ಧನಂಜಯ, ಕಮಲ, ಹೇಮಲತಾ ಹಾಗೂ ಪಕ್ಷದ ಕಾರ್ಯಕರ್ತರು ಹಾಜರಿದ್ದರು. ಇದಕ್ಕಿಂತ ಮೊದಲು ಸಚಿವರು ಕೊಣಾಜೆ, ಕೊಡ್ಮಾಣ್, ಮೇರಮಜಲು, ತಲಪಾಡಿ, ಕಿನ್ಯಾ, ಅಂಬ್ಲಮೊಗರು, ಮಂಜನಾಡಿ, ಸೋಮೇಶ್ವರ ಪರಿಸರದಲ್ಲಿ ಮತಯಾಚನೆ ಮಾಡಿದರು.

By Suddi9

Leave a Reply

Your email address will not be published. Required fields are marked *