ಜ್ಯೋತಿಗುಡ್ಡೆ :ತರಿಕಿಟ ಕಲಾ ಕಮ್ಮಟ ಸಿಂಪನಿ ಮಕ್ಕಳ ಪತ್ರಿಕೆ ಹಾಗೂ ಚಾವಡಿ ಗ್ರಾಮ ಶಿಕ್ಷಣ ಸಂಸ್ಥೆ ಕಳ್ಳಿಗೆ ಇದರ ಆಶ್ರಯದಲ್ಲಿ ಪಿಂಗಾರ ಮಕ್ಕಳ ಶಿಬಿರದ ಉದ್ಘಾಟನೆಯು ನೆರವೇರಿತು. ಮೇ .23 ರಿಂದ 25 ರವರೆಗೆ ನಡೆಯಲಿರುವ ಈ ಶಿಬಿರವು ದರಿಬಾಗಿಲು ಸನಿಹದ ತರಿಕಿಟದ ವಠಾರದಲ್ಲಿ ಜರುಗಿತು.
Pingara (2)

ಈ ಶಿಬಿರದಲ್ಲಿ ಸುಮಾರು 30 ಸ್ಥಳೀಯ ಹಾಗೂ ದೂರದೂರಿನ ಮಕ್ಕಳು ಆಗಮಿಸಿ ಪಾಲ್ಗೊಂಡು ಸಂಭ್ರಮಿಸಿದರು. ಶಿಬಿರದಲ್ಲಿ ಮಕ್ಕಳಿಗಾಗಿ ಚಿತ್ರಕಲೆ, ಹಾಡಿನ ತರಬೇತಿ, ಬೊಂಬೆ ತಯಾರಿಕೆ, ಕಸದಿಂದ ರಸ, ಬೊಂಬೆ ನಾಟಕ ಇತ್ಯಾದಿ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಬಲೂನ್ ಗೊಂಬೆ, ಬೆರಳು ಗೊಂಬೆ, ಅಂಗೈ ಗೊಂಬೆ, ನೆರಳು ಬೆಳಕಿನ ಗೊಂಬೆ ತಯಾರಿಸಿ ಇವುಗಳ ಮೂಲಕ ಪುಟ್ಟ ಮಕ್ಕಳಿಂದಲೇ ಬೊಂಬೆ ನಾಟಕವನ್ನು ಮಾಡುವಂತೆ ಗಗನ್ ಕುಮಾರ್ ಇವರು ಕಲಿಸಿಕೊಟ್ಟರು. ದೈಹಿಕ ಆಟಗಳು, ಕ್ರಿಯಾತ್ಮಕ ಚಟುವಟಿಕೆಗಳು, ಮನೋರಂಜನಾ ಆಟಗಳ ಜೊತೆಗೆ ಹಾಡು ಮಕ್ಕಳ ಮನಸನ್ನು ಮುದಗೊಳಿಸಿತು. ಸಂಪನ್ಮೂಲ ವ್ಯಕ್ತಿಗಳಾಗಿ ಗಗನ್ ಕುಮಾರ್, ಉದಯ ಕುಮಾರ್ ಜ್ಯೋತಿಗುಡ್ಡೆ, ವಾಣಿ ಪೆರಿಯೋಡಿ, ಮಲ್ಲಿಕಾ ಜ್ಯೋತಿಗುಡ್ಡೆ, ಶ್ರೀನಾಥ್ ಗುಂಡಿಬೆಟ್ಟು ಆಗಮಿಸಿದ್ದರು. ರಮ್ಯ ಪೆರಿಯೋಡಿ, ಶ್ವೇತಾ ಜ್ಯೋತಿಗುಡ್ಡೆ, ಸುನೀಲ ಜಾರಂದಗುಡ್ಡೆ ಕಾರ್ಯಕ್ರಮ ನಿರ್ವಹಣೆ ಮಾಡಿದರು.

By Suddi9

Leave a Reply

Your email address will not be published. Required fields are marked *