SUDDI9 MEDIA NETWORK
ಹಸಿರು ಸೀರೆಯುಟ್ಟಿದ್ದ ಜೆ.ಜಯಲಲಿತಾ ಅವರು ಶನಿವಾರ ಬೆಳಗ್ಗೆ 11.08ಕ್ಕೆ ಮದ್ರಾಸ್ ವಿವಿ ಶತಮಾನೋತ್ಸವ ಭವನದಲ್ಲಿ ನಡೆದ ಸಮಾರಂಭದಲ್ಲಿ 5ನೇ ಬಾರಿಗೆ ಮಖ್ಯಮಂತ್ರಿಯಾಗಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ಕೆ.ರೋಸಯ್ಯ ಅವರು ಜಯಲಲಿತಾ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. [ಪನ್ನೀರ್ ಸೆಲ್ವಂ ಎಂಬ ಆಸಾಮಿಯ ಸ್ವಾಮಿನಿಷ್ಠೆಯ ಪರಾಕಾಷ್ಠೆ] ಅಕ್ರಮ ಆಸ್ತಿ ಪ್ರಕರಣದಲ್ಲಿ ಜಯಲಲಿತಾ ನಿರ್ದೋಷಿ ಎಂದು ಕರ್ನಾಟಕ ಹೈಕೋರ್ಟ್ ವಿಶೇಷ ಪೀಠ ಇತ್ತೀಚೆಗೆ ತೀರ್ಪು ನೀಡಿತ್ತು. ಶುಕ್ರವಾರ ಎಐಎಡಿಎಂಕೆ ಶಾಸಕಾಂಗ ಪಕ್ಷದ ನಾಯಕಿಯನ್ನಾಗಿ ಜಯಲಲಿತಾ ಅವರನ್ನು ಆಯ್ಕೆ ಮಾಡಲಾಗಿತ್ತು. ಸುಮಾರು ಎಂಟು ತಿಂಗಳ ಬಳಿಕ ತಮಿಳುನಾಡಿಲ್ಲಿ ಪುನಃ ಅಮ್ಮನ ಆಡಳಿತ ಆರಂಭವಾಗಿದೆ. [ಜಯಲಲಿತಾ ವೀಕೆಂಡ್ ಪಾರ್ಟಿ ಕೆಡಿಸಲು ಕರ್ನಾಟಕ ಸಿದ್ಧ!] ಸೂಪರ್ ಸ್ಟಾರ್ ರಜನಿಕಾಂತ್, ಸಂಗೀತ ಮಾಂತ್ರಿಕ ಇಳಯರಾಜ, ನಟ ಶರತ್ ಕುಮಾರ್, ವಿವೇಕ್, ಶಿವಕಾರ್ತಿಕೇಯನ್, ಶಿವಾಜಿ ಪ್ರಭು, ಜಯಾಲಲಿತಾ ಆಪ್ತೆ ಶಶಿಕಲಾ, ಸಾಕು ಮಗ ಸುಧಾಕರನ್ ಹಾಗೂ