ಬಂಟ್ವಾಳ; ತಾಲ್ಲೂಕಿನ ಬಿ.ಸಿ.ರೋಡ್ ರೈಲ್ವೆ ನಿಲ್ದಾಣದಲ್ಲಿ ಬಂಟ್ವಾಳ ಹೆಸರು ಇನ್ನೂ ‘ಬಂಟವಾಳ’ ಎಂದೇ ಬರೆಯಲಾಗಿದ್ದು, ಎಲ್ಲರೂ ಇದನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದರೂ ಇಲ್ಲಿನ ಅಧಿಕಾರಿಗಳು ಮಾತ್ರ ಮೌನವಾಗಿದ್ದಾರೆ. ಇಲ್ಲಿ ವಿತರಿಸಲಾಗುವ ತತ್ಕಾಲ್ ಟಿಕೆಟಿಗೆ ಮಧ್ಯವರ್ತಿಗಳ ಹಾವಳಿ ಅತಿಯಾಗಿದೆ ಎಂದು ಆರೋಪ ಇಲ್ಲಿನ ಪ್ರಯಾಣಿಕರಿಮದ ಕೇಳಿ ಬಂದಿದೆ.

