ಬಂಟ್ವಾಳ : ರಾಷ್ಟ್ರೀಯ ಹೆದ್ದಾರಿ 234ರಲ್ಲಿ ಪುಂಜಾಲಕಟ್ಟೆ ಪೇಟೆ ಸಮೀಪ ರಸ್ತೆ ಮೋರಿಯ ಬಳಿ ಮಣ್ಣಿನಿಂದ ಅಸಮರ್ಪಕವಾಗಿ ನಿರ್ಮಿಸಲಾದ ಕಲ್ಲಿನ ಗೋಡೆ ಮತ್ತು ತಡೆಗೋಡೆ ಮತ್ತೆ ಕುಸಿದಿದೆ.
2105pkt1A

2105pkt1
ಇತ್ತೀಚೆಗೆ ಈ ರಸ್ತೆ ಮೋರಿಯ ಒಂದು ಬದಿಗೆ ಕಟ್ಟಿದ ಕಲ್ಲುಗಳು ಜರಿದುಬಿದ್ದಿದ್ದವು. ಈ ಬಗ್ಗೆ ಉದಯವಾಣಿ ಮೂರು ಬಾರಿ ಸಚಿತ್ರ ವರದಿ ಪ್ರಕಟಿಸಿತ್ತು. ಬಳಿಕ ಮೋರಿಗೆ ಪುನಃ ಕಲ್ಲು ಕಟ್ಟಲಾಗಿತ್ತು. ಆದರೆ ಅದನ್ನು ಸಿಮೆಂಟ್ ಬಳಸದೆ ಕೇವಲ ಮಣ್ಣಿನಿಂದ ನಿರ್ಮಿಸಲಾಗಿತ್ತು. ಅದರ ಮೊದಲು ಕೂಡಾ ಇದನ್ನು ಮಣ್ಣಿನಿಂದ ಕಟ್ಟಲಾಗಿದ್ದು ಜರಿದುಬಿದ್ದಿತ್ತು. ಮತ್ತೆ ಪುನಃ ಅದೇ ರೀತಿ ಕಟ್ಟಿದ್ದರಿಂದ ಇದರ ದೃಢತೆಯ ಬಗ್ಗೆ ತುಳುನಾಡ ರಕ್ಷಣಾ ವೇದಿಕೆ ಪುಂಜಾಲಕಟ್ಟೆ ಘಟಕ ಸಂಶಯ ವ್ಯಕ್ತಪಡಿಸಿ ಜನಪ್ರತಿನಿ„ಗಳು ಮತ್ತು ಸಂಬಂ„ಸಿದ ಇಲಾಖೆ ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಆದರೆ ಇಲಾಖೆಯ ನಿರ್ಲಕ್ಷ್ಯದಿಂದ ತಡೆಗೋಡೆ ಮೂರನೇ ಬಾರಿ ಕುಸಿದಿದೆ. ಇದುವರೆಗೆ ಇದನ್ನು ಕಟ್ಟಲು ತಗಲಿದೆ ವೆಚ್ಚ ವ್ಯರ್ಥವಾಗಿದೆ. ಇದರೊಂದಿಗೆ ಇಲ್ಲಿ ವಾಹನಗಳಿಗೆ ರಸ್ತೆ ಸಂಚಾರ ಅಪಾಯಕಾರಿಯಾಗಿದೆ.

By Suddi9

Leave a Reply

Your email address will not be published. Required fields are marked *