ಹೊಸದಿಲ್ಲಿ: “ಚಾಯ್‌ ಪೇ ಚರ್ಚಾ’, “ನಾವೇ ಪೇ ಚರ್ಚಾ’, ವಿದೇಶಿ ಗಣ್ಯರ ಜತೆ ಸೆಲ್ಫಿ ಮೂಲಕ ವಿಶ್ವ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಮೂಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಈಗ ದಿಲ್ಲಿಯ ಐತಿಹಾಸಿಕ ರಾಜಪಥದಲ್ಲಿ ಸ್ವತಃ ಯೋಗ ಪ್ರದರ್ಶನ ಮಾಡುವ ಮೂಲಕ ಮತ್ತೂಂದು ಇತಿಹಾಸ ರಚನೆಗೆ ಮುಂದಾಗಿದ್ದಾರೆ.
1 modi-doing-yoga
ಜೂನ್‌ 21ರ ದಿನವನ್ನು ಅಂತಾರಾಷ್ಟ್ರೀಯ ಯೋಗ ದಿನವೆಂದು ವಿಶ್ವಸಂಸ್ಥೆ ಘೋಷಿ ಸುವಲ್ಲಿ ಮುಂಚೂಣಿ ಪಾತ್ರ ವಹಿಸಿದ್ದ ಮೋದಿ, ಆ ಕ್ಷಣವನ್ನು ಐತಿಹಾಸಿಕವಾಗಿಸಲು ನಿರ್ಧರಿಸಿದ್ದಾರೆ. ಇದೇ ಕಾರಣಕ್ಕಾಗಿಯೇ ಜೂ.21ರಂದು ರಾಜಪಥದಲ್ಲಿ ಯೋಗಾಭ್ಯಾಸ ಮಾಡಲು ನಿರ್ಧರಿಸಿದ್ದಾರೆ.

ರಾಜಪಥದಲ್ಲಿ ಮೋದಿ ಜತೆ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಕೂಡಾ ಯೋಗ ಮಾಡಲಿದ್ದಾರೆ. ಅವರ ಸಚಿವ ಸಂಪುಟದ ಇನ್ನೂ ಹಲವು ಸಹೋದ್ಯೋಗಿಗಳು ಕೂಡಾ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ರಾಜಕೀಯ ನಾಯಕರು ಯೋಗ ಮಾಡುವುದು ಅಪರೂಪವಲ್ಲವಾದರೂ ಒಂದು ದೇಶದ ಪ್ರಧಾನಿಯೊಬ್ಬರು ಬಹಿರಂಗವಾಗಿ ಇಂಥ ಪ್ರದರ್ಶನಕ್ಕೆ ಮುಂದಾಗಿರುವುದು ಅಪರೂಪ. ಅದರಲ್ಲೂ ಪ್ರತಿವರ್ಷ ದೇಶದ ಮಿಲಿಟರಿ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಗುವ ದಿಲ್ಲಿಯ ರಾಜಪಥವನ್ನೇ ಮೋದಿ ತನ್ನ ಈ ಕಾರ್ಯಕ್ರಮಕ್ಕೆ ಆಯ್ದುಕೊಂಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಜೂನ್‌ 21 ಅನ್ನು ಅಂತಾರಾಷ್ಟ್ರೀಯ ಯೋಗ ದಿನ ಎಂದು ವಿಶ್ವಸಂಸ್ಥೆ ಘೋಷಿಸಿದ್ದರ ಹಿಂದೆ ಪ್ರಧಾನಿ ನರೇಂದ್ರ ಮೋದಿ ಪ್ರಮುಖ ಪಾತ್ರ ವಹಿಸಿದ್ದರು. 2014ರ ಸೆ.27ರಂದು ಯುನೆಸ್ಕೋ ಸಭೆ ಉದ್ದೇಶಿಸಿ ಮಾತನಾಡಿದ್ದ ಮೋದಿ, ಜೂನ್‌ 21 ಅನ್ನು ವಿಶ್ವ ಅಂತಾರಾಷ್ಟ್ರೀಯ ಯೋಗ ದಿನ ಎಂದು ಘೋಷಿಸಬೇಕು ಎಂದು ಪ್ರಸ್ತಾವಿಸಿದ್ದರು. ಈ ಪ್ರಸ್ತಾವ‌ಕ್ಕೆ ವಿಶ್ವಸಂಸ್ಥೆಯ 177 ಸದಸ್ಯ ರಾಷ್ಟ್ರಗಳು ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿದ್ದವು. ಹೀಗಾಗಿ ಮೋದಿ ಪ್ರಸ್ತಾವ ಮಂಡಿಸಿದ ಕೇವಲ 75 ದಿನಗಳಲ್ಲಿ ಅಂದರೆ 2014ರ ಡಿ.11ರಂದು, ಜೂನ್‌ 11 ಅನ್ನು ಅಂತಾರಾಷ್ಟ್ರೀಯ ಯೋಗ ದಿನ ಎಂದು ವಿಶ್ವಸಂಸ್ಥೆ ಘೋಷಿಸಿತ್ತು.

By Suddi9

Leave a Reply

Your email address will not be published. Required fields are marked *