ಬಂಟ್ವಾಳ : ದೇವರಲ್ಲಿ ನಂಬಿಕೆ ಗುರುಹಿರಿಯರಲ್ಲಿ ಭಕ್ತಿಯಿಂದ ಸಾತ್ವಿಕ ಜೀವನವನ್ನು ನಡೆಸಿದಾಗ ಧರ್ಮದ ಉದ್ಧಾರವಾಗಲು ಸಾಧ್ಯವಿದೆ. ಹರಿಕಥಾ ಸಪ್ತಾಹದಿಂದ ಇಂತಹಾ ವಾತಾವರಣ ನಿಮರ್ಾಣವಾಗುತ್ತಿದೆ ಎಂದು ವೇದಮೂರ್ತಿ ಬೋಳಂತಕೋಡಿ ರಾಮ ಭಟ್ಟ ನುಡಿದರು.
ಅವರು ಮಂಚಿ ಕನಕಗಿರಿಯಲ್ಲಿ 13 ಮಂಗಳವಾರದಂದು ಹರಿಕಥಾ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.

ಸ್ವ-ಅನುಭವ ಕ್ಕಿಂತ ಹೆಚ್ಚಿನದಾದ ಜ್ಞಾನ ಬೇರೆ ಇಲ್ಲ ಇಂತಹಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಿಳಿದುಕೊಂಡು ಉತ್ತಮ ವ್ಯಕ್ತಿಗಳಾಬೇಕು ಎಂದು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ವೇದಮೂತರ್ಿ ಶೀವರಾಮ ಮಯ್ಯ ತನ್ನಚ್ಚಿಲು ನುಡಿದರು. ಜಯಪ್ರಕಾಶ್ ಕಂದೂರು ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಹರಿದಾಸರಾದ ಕಲಾರತ್ನ ಶಂನಾ ಅಡಿಗ ಕುಂಬ್ಳೆ , ಕಾರ್ಯಕ್ರಮ ಸಂಯೋಜಕ ಕೈಯೂರು ನಾರಾಯಣ ಭಟ್ , ಅಧ್ಯಕ್ಷ ಸೀತಾರಾಮ ಶೆಟ್ಟಿ , ಶ್ರೀದೇವಿ ಕೈಯೂರು, ಜಯಂತಿ ಶೆಟ್ಟಿ , ರಾಮಕೃಷ್ಣ ನಾಯಕ್ ಕೋಕಳ, ತಿರುಮಲೇಶ್ ಕೈಯೂರು, ರಮೇಶ ಕೈಯೂರು ಉಪಸ್ಥಿತರಿದ್ದರು. ಹರಿಕಥಾ ಸಪ್ತಾಹವು ಪ್ರತಿದಿನ ಸಂಜೆ 6.30ರಿಂದ 8.30ರವರೆಗೆ ನಡೆಯಲಿದ್ದು 19-05-2015ರಂದು ಮುಕ್ತಾಯಗೊಳ್ಳಲಿದ
