ಬಂಟ್ವಾಳ: ನಾಲ್ಕೈತ್ತಾಯ ಮತ್ತು ಪರಿವಾರ ದೈವಗಳ ದೈವಸ್ಥಾನ ಮುದೆಲ್ಮುಟ್ಟಿ ಸ್ಥಾನ ಸಜಿಪ ಮುನ್ನೂರು ಇದರ ಜೀರ್ಣೊದ್ಧಾರದ ಅಂಗವಾಗಿ ಜ್ಯೋತಿಷ್ಯ ಶಾಸ್ತ್ರ ಪ್ರಶ್ನೆ ಪ್ರಕಾರ ಬ್ರಹ್ಮಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಬಾಹಾಕರ್ಷಣೆ , ಉಚ್ಛಾಟನೆ ,ಸುದರ್ಶನ ಹೋಮ ,ವಾಸ್ತು ಪೂಜೆ ,ರಾಕ್ಷೊಘ್ನ ಹೋಮ ,ಬಾಲಾಲಯದಲ್ಲಿ ಶ್ರೀ ನಾಲ್ಕೈತ್ತಾಯ ದೈವದ ಪ್ರತಿಷ್ಟೆ ಕರ್ಕಾಟಕ ಲಗ್ನ ಸುಮುಹೂರ್ತದಲ್ಲಿ
ಜರಗಿತು.
84 (1)
ಆ ಪ್ರಯುಕ್ತ ನೀಲೇಶ್ವರ ತಂತ್ರಿಗಳ ಮನೆಗೆ ನಾಲ್ಕೈತ್ತಾಯ ದೈವ ಸ್ಥಾನದ ಜೀರ್ಣೋದ್ಧಾರ ಸಮಿತಿಯವರು ಭೇಟಿ ನೀಡಿ ಗೌರವಪೂರ್ವಕವಾಗಿ ಆಹ್ವಾನ ನೀಡಿದರು. ನಿಯೋಗದಲ್ಲಿ ಜೀರ್ಣೊದ್ಧಾರ ಸಮಿತಿ ಅಧ್ಯಕ್ಷರಾದ ಎ.ಸಿ.ಭಂಡಾರಿ ಪದಾಧಿಕಾರಿಗಳಾದ ನ್ಯಾಯವಾದಿ ದಿನೇಶ್ ಭಂಡಾರಿ, ಮನೋಜ್ ಆಳ್ವ , ಸುಬ್ರಹ್ಮಣ್ಯ ಭಟ್ , ಸೂರ್ಯನಾರಾಯಣ ಭಟ್ , ಗಂಗಾಧರ ಭಂಡಾರಿ , ಸಚ್ಚಿದಾನಂದ ಖಂಡೇರಿ , ಮೊದಲಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *