ಕಿನ್ನಿಗೋಳಿ ; ಎರಡು ದ್ವಿಚಕ್ರ ವಾಹನಗಳಿಗೆ ಆಕಸ್ಮಿಕ ಬೆಂಕಿ ಬಿದ್ದು  ನಿಂತಲ್ಲಿಯೇ ಸಂಪೂರ್ಣ ಸುಟ್ಟು ಕರಕಲಾದ ಘಟನೆ ನಿನ್ನೆ ತಡ ರಾತ್ರಿ ನಡೆದಿದೆ. ಕಿನ್ನಿಗೋಳಿ ಸಮೀಪದ ಗುತ್ತಕಾಡು ಚಿನ್ನಾಯ ಬೆಟ್ಟು ಎಂಬಲ್ಲಿ ಮ್ಯಾಕ್ಸಿಮ್ ಡಿ ಸೋಜ ಎಂಬುವವರ ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಹಿರೊ ಮ್ಯಾಸ್ಟ್ರೊ ಮತ್ತು ಬಜಜ್ ಡಿಸ್ಕವರಿ ನಿಂತಲ್ಲಿಯೇ ಸುಟ್ಟು ಸಂಪೂರ್ಣ ಸುಟ್ಟು ಕರಕಲಾಗಿದೆ.

11b

2b

3b

4b

ರಾತ್ರಿ ಸುಮಾರು ೩.೩೦ ರ ಗಂಟೆಯ ಹೊತ್ತಿಗೆ ಮನೆಯವರಿಗೆ ಹೊರಗಿಂದ ಬೆಂಕಿಯ ಕೆನ್ನಾಲಿಗೆ ಕಂಡು ಹೊರ ಬರುವಾಗ ವಾಹನಗಳು ಸುಡುತಿರುದು ಗಮನಕ್ಕೆ  ಬಂತು ಕೂಡಲೇ ಹತ್ತಿರವಿದ್ದ ಮಾರುತಿ ಒಮಿನಿಯನ್ನು ಅಲ್ಲಿಂದ ತೆರವುಗೊಳಿಸಿದರು ಮಾರುತಿ ಒಮಿನಿಗೆ ಸ್ವಲ್ಪ ಮಟ್ಟಿನ ಹಾನಿಯಾಗಿದ್ದು, ಮಕ್ಕಳ ಸೈಕಲ್ ಕೂಡ ಸುಟ್ಟು ಹೋಗಿದೆ, ಹತ್ತಿರವಿದ್ದ ಹೂವಿನ ಗಿಡಗಳು ಸುಟ್ಟುಹೋಗಿದ್ದು ಮಾತ್ರವಲ್ಲದೆ ಮನೆಯ ಕಿಟಕಿ ಗಾಜಿಗೆ ಹಾನಿಯಾಗಿದೆ, ಪಾರ್ಕ್ ಮಾಡಿದ ಮೆಲ್ಭಾಗದ ಟ್ಯಾರಸಿಗೂ ಹಾನಿಯಾಗಿದೆ ಮುಲ್ಕಿ ಪೋಲಿಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

By suddi9

Leave a Reply

Your email address will not be published. Required fields are marked *