ಬಂಟ್ವಾಳ: ಹಳ್ಳಿಗಳಲ್ಲಿ ಈಗ ಗ್ರಾಮ ಪಂಚಾಯತ್ ಚುನಾವಣೆಯದ್ದೆ ಜಪ… ಪ್ರಜಾಪ್ರಭುತ್ವ ವ್ಯವಸ್ಥೆಯ ಬೇರು ಏನಿಸಿರುವ ಗ್ರಾಮ ಪಂಚಾಯತ್ ಪ್ರವೇಶಿಸಲು ಹಳ್ಳಿ ರಾಜಕಾರಣಿಗಳು ತಯಾರಾಗುತ್ತಿದ್ದಾರೆ. ಹಾಲಿ ಸದಸ್ಯರ ಸಹಿತ ಕೆಲ ಆಕಾಂಕ್ಷೆಗಳಿಗೆ ತಾನು ಬಯಸಿದ ವಾರ್ಡ್ ಗಳಲ್ಲಿ ಬದಲಾದ ಮೀಸಲಾತಿಯಿಂದಾಗಿ ಅವರ ಆಸೆಗೆ ತಣ್ಣೀರೆರಚಿದಂತಾಗಿದೆ.
ಲೋಕಸಭಾ ಚುನಾವಣೆಯ ಬಳಿಕ ಸರಿ ಸುಮಾರು ಒಂದುವರ್ಷಗಳ ಕಾಲ ಆರಾಮದಲ್ಲಿದ್ದ ರಾಜಕೀಯ ನೇತಾರರು ಕಪಾಚಿನಲ್ಲಿಟ್ಟಿದ್ದ ಖಡಕ್ ಇಸ್ತ್ರಿಯ ಖಾದಿ ಬಟ್ಟೆಯನ್ನು ತೊಟ್ಟು ಪುಲ್ ಬಿಝಿಯಾಗಿದ್ದಾರೆ. ಗ್ರಾಮ ಮಟ್ಟದಲ್ಲಿರುವ ಸಮಸ್ಯೆಯನ್ನೇ ಆಧಾರವಾಗಿಟ್ಟುಕೊಂಡೇ ಹಳ್ಳಿ ಸಮರ ನಡೆಯುತ್ತಿದೆ ಹೊರತು ರಾಜ್ಯ ಕೇಂದ್ರ ಸರಕಾರ ಜಾರಿಗೊಳಿಸಿರುವ ಯೋಜನೆಗಳು ಅಥವಾ ಸಾಧನೆ ಇಲ್ಲಿ ವರ್ಕ್ ಔಟ್ ಆಗುವುದಿಲ್ಲ. 9/11 ಕಟ್ಟಡ ಪರವಾನಿಗೆ ವಿವಾದ, ಕುಡಿಯುವ ನೀರು ಸಹಿತ ಹತ್ತು ಹಲವು ಸಮಸ್ಯೆಗಳು ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಬಗೆಹರಿಯದಿದ್ದು, ಇದು ಚುನಾವಣೆಯ ಮೇಲೆ ಪರಿಣಾಮ ಬೀರಲಿದೆ.
download
ಹಾಲಿಗಳು ಕರಾದಲ್ಲಿ
ಬಂಟ್ವಾಳ ತಾಲೂಕಿನಲ್ಲಿ ಕೆಲ ಹಾಲಿ ಸದಸ್ಯರು ಮರಳಿ ಚುನಾವಣಾ ಕಣಕ್ಕಿಳಿದು ಅಗ್ನಿ ಪರೀಕ್ಷೆ ಎದುರಿಸಲು ಸಜ್ಜಾಗಿದ್ದಾರೆ. ಹೊಸದಾಗಿ 12 ಪಂಚಾಯತ್ ಅಸ್ತಿತ್ವಕ್ಕೆ ಬಂದಿರುವುದರಿಂದ ಹಳೇ ಪಂ.ನ ಕೆಲ ಹಾಲಿ ಸದಸ್ಯರನ್ನು ಶಿಪ್ಟ್ ಆಗಲಿದ್ದಾರೆ. ಅವರು ಹೊಸ ಪಂಚಾಯತ್ ಪ್ರವೇಶಿಸಲು ಸ್ದರ್ಧೆಗಿಳಿಯುವ ನಿರೀಕ್ಷೆ ಇದೆ. ಹಾಗೆಯೇ ಈ ಬಾರಿ ಬಹುತೇಕ ಹೊಸ ಮುಖಗಳು ಹಳ್ಳಿ ಸಮರದ ಕಣಕ್ಕಿಳಿಯುವ ಸಾಧ್ಯತೆ ಇದೆ. ಹಳ್ಳಿಯ ಪ್ರಮುಖ ಮತ್ತು ಪಕ್ಷದಲ್ಲಿ ಸಕ್ರೀಯವಾಗಿ ಗುರುತಿಸಿರುವ ಪ್ರಭಾವಿ ಸದಸ್ಯರು ಈ ಬಾರಿ ತಾವು ಬಯಸಿದ ವಾಡರ್್ಗಳಲ್ಲಿ ಕಳೆದ ಮೂರ್ನಾಲ್ಕು ತಿಂಗಳಿನಿಂದ ಜನರ ಸಂಪರ್ಕ ಪ್ರಚಾರದಲ್ಲೂ ತೊಡಗಿಸಿದ್ದರು. ಆದರೆ ಬದಲಾದ ಮೀಸಲಾತಿಯ ಪಟ್ಟಿಯಿಂದಾಗಿ ಅವರ ಕನಸು ಭಗ್ನವಾಗಿದೆ. ಚುನಾವಣೆಯ ಬಳಿಕ ಜನರ ಸಂಪರ್ಕಕಕ್ಕೆ ಸಿಗದ ಕೆಲಸದಸ್ಯರು ಈಗ ಮದುವೆ, ಮುಂಜಿ, ಬ್ರಹ್ಮಕಲಶ, ಗೃಹಪ್ರವೇಶ, ಕೋಲ ಮೊದಲಾದ ಸಮಾರಂಭಗಳಲ್ಲಿ ಎದುರಿಗೆ ಸಿಗುವ ತನ್ನ ಮತದಾರ ಪ್ರಭುಗಳ ಬೆನ್ನು ಸವರಿ ಕುಶಲೋಪಚರಿಗಿಳಿದು ಒಲೈಕೆಗೆ ತೊಡಗಿದ್ದಾರೆ. ಇದಕ್ಕೆ ರಾಜಕೀಯ ಮುಖಂಡರು ಕೂಡ ಹೊರತಾಗಿಲ್ಲ.
313 ಮತದಾನ ಕೇಂದ್ರ….. 56 ಅತೀ ಸೂಕ್ಷ್ಮ
ತಾಲೂಕಿನಲ್ಲಿ 59ರ ಪೈಕಿ 57 ಗ್ರಾ.ಪಂ.ಗಳಲ್ಲಿ ಚುನಾವಣೆಯಲಿದ್ದು. 313 ಮತದಾನ ಕೇಂದ್ರಗಳನ್ನು ಗುರುತಿಸಲಾಗಿದೆ. ಇದರಲ್ಲಿ 52 ಸೂಕ್ಷ, 56 ಅತೀ ಸೂಕ್ಷ್ಮ ಹಾಗೂ 205 ಸಾಮಾನ್ಯ ಎಂದು ಪರಿಗಣಿಸಲಾಗಿದೆ. ಪುರಸಭೆ ಹೊರತು ಪಡಿಸಿ 2,70,787 ಮಂದಿ ಮತದಾನದ ಹಕ್ಕು ಹೊಂದಿದ್ದು ಇದರಲ್ಲಿ 1,36,189 ಪುರುಷರು, 1,34,598 ಮಹಿಳೆಯರು ಸೇರಿದ್ದಾರೆ. ಮೇ.9ರವರೆಗೆ (ಶನಿವಾರ) ಮತದಾರರ ಪಟ್ಟಿಗೆ ಹೊಸ ಮತದಾರರ ಸೇರ್ಪಡೆಗೆ ಅವಕಾಶವಿದ್ದು, ಅವರಿಗೂ ಮತದಾನದ ಹಕ್ಕು ಸಿಗಲಿದೆ. ಹಾಗೆಯೇ ವಿವಿಧ ಗ್ರಾಮಗಳಲ್ಲಿ ಸೈನ್ಯ ಸಹಿತ ದೇಶದ ಸೇವೆಯಲ್ಲಿ ವಿವಿಧ ಹುದ್ದೆಗಳಲ್ಲಿರುವ 94 ಮಂದಿಯನ್ನು ಸೇವಾ ಮತದಾರರನ್ನಾಗಿ ಗುರುತಿಸಲಾಗಿದೆ. ಇದರಲ್ಲೂ 67 ಮಂದಿ ತುರುವುದು, 27 ಮಂದಿ ಮಹಿಳೆ ಅಧಿಕೃತ ಮತದಾರರ ಪಟ್ಟಿ ಇನ್ನೂ ಅಭ್ಯರ್ಥಿಗಳ ಕೈಗೆ ತಲುಪಿಲ್ಲ. ಬಂಟ್ವಾಳ ತಾಲೂಕಿಗೆ 57 ಮಂದಿ ಚುನಾವಣಾಧಿಕಾರಿಗಳನ್ನು ಹಾಗೂ 63 ಸಹಾಯಕ ಚುನಾವಣಾಧಿಕಾರಿಗಳನ್ನು ನಿಯುಕ್ತಿಗೊಳಿಸಲಾಗಿದೆ.
ಮೇ 10ರಂದು ಅದಿಸೂಚನೆ ಪ್ರಕಟವಾಗಲಿದ್ದು, 11ರಂದು ನಾಮಪತ್ರ ಸಲ್ಲಿಕೆಯಾಗಲಿದೆ. 18ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದೆ. 19ರಂದು ಪರಿಶೀಲನೆ 21ರಂದು ವಾಪಾಸ್ ಪಡೆಯಲು ಕೊನೆ ದಿನ ಬಳಿಕ ಒಂದುವಾರ ಅಭ್ಯರ್ಥಿಗಳಿಗೆ ಪ್ರಚಾರ ಕಾರ್ಯಕ್ಕೆ ಅವಕಾಶ ಸಿಗಲಿದೆ. 29ರಂದು ಬೆಳಿಗ್ಗೆ 7ರಿಂದ ಸಂಜೆ 5ಗಂಟೆಯವರೆಗೆ ಮತದಾನ ನಡೆಯಲಿದೆ.
ನಾಮಪತ್ರ ಠೇವಣಿ: ಅಭ್ಯರ್ಥಿಗಳು ಗ್ರಾಮ ಪಂಚಾಯತ್ನಲ್ಲಿ ಸಹಾಯಕ ಚುನಾವಣಾಧಿಕಾರಿಯಿಂದ ನಾಮಪತ್ರದ ನಮೂನೆ ಪಡೆದು ಭರ್ತಿ ಮಾಡಿ ಸಲ್ಲಿಸಬೇಕು. ಪ್ರತಿಯೊಂದು ನಾಮಪತ್ರಕ್ಕೆ ಮತದಾರರ ಪಟ್ಟಿಯ ಭಾಗಸಂಖ್ಯೆ ಮತ್ತು ಕ್ರಮ ಸಂಖ್ಯೆಯನ್ನು ನಮೂದಿಸಿ ಅಭ್ಯರ್ಥಿಗೆ ಸೂಚಕರಾಗಿ ಪ್ರಸ್ತಾವಿಸಿರುವ ಬಗ್ಗೆ ಸಹಿ ಹಾಕಿ ದೃಡೀಕರಿಸಬೇಕು, ಚುನಾವಣೆ ಪಕ್ಷಾತೀತವಾಗಿ ನಡೆಯುವುದರಿಂದ ಅಭ್ಯರ್ಥಿಯ ಮುಕ್ತ ಚಿಹ್ನೆಗಳ ವಿವರ ಪಡೆದು ನಾಮಪತ್ರದಲ್ಲಿ 3 ಮುಖ್ಯ ಚಿಹ್ನೆ ಕೊಡಬೇಕು. ಒಂದು ವೇಳೆ ಅಭ್ಯಥರ್ಿ ಚಿಹ್ನೆ ಕೊಡದಿದ್ದರೆ ಚುನಾವಣಾಧಿಕಾರಿಯೆ ಚಿಹ್ನೆ ಹಂಚಿಕೆ ಮಾಡುವ ವೇಳೆ ಚಿಹ್ನೆ ನೀಡಲಿದ್ದಾರೆ.ಅಭ್ಯರ್ಥಿ 200ರೂ ನಗದು ( ಅನುಸೂಚಿತ ಜಾತಿ,ಪಂಗಡ, ಮಹಿಳೆಯರು ರೂ.100) ಠೇವಣಿ ಇಡಬೇಕು. ಮೀಸಲಾತಿ ಸ್ಥಾನಗಳಿಗೆ ಸ್ಪರ್ಧಿ ಸುವ ಅಭ್ಯರ್ಥಿಗಳು ತಮ್ಮ ಜಾತಿ ಪ್ರಮಾಣ ಪತ್ರ ಸಲ್ಲಿಸುವ ವೇಳೆ ಮಹಿಳೆ ಎಂದು ದೃಡೀಕರಿಸಬೇಕು ಎಂದು ತಾಲೂಕು ಚುನಾವಣಾಧಿಕಾರಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *