ಬಂಟ್ವಾಳ: ಬಡಗಬೆಳ್ಳೂರು ಗ್ರಾಮದ ಪಲ್ಲಿಪ್ಪಾಡಿ ನವ ಪಲ್ಗುಣಿ ನವೋದಯ ಸ್ವಸಹಾಯ ಗುಂಪಿನ ಸದಸ್ಯೆ ಸುಶೀಲರವರು ಅಪಘಾತದಲ್ಲಿ ಮರಣ ಹೊಂದಿದ್ದು ಅವರ ಮಗಳು ಧನ್ಯರವರಿಗೆ ಚೈತನ್ಯ ವಿಮಾ ಯೋಜನೆಯಡಿ ಮಂಜೂರಾದ 25ಸಾವಿರ ರು ಚೆಕ್‍ನ್ನು ಬಿಸಿರೋಡ್ ಶಾಖೆಯ ಎಸ್.ಡಿ.ಸಿ.ಸಿ.ಬ್ಯಾಂಕಿನ ಮ್ಯಾನೇಜರ್ ಗಣೇಶ್ ಕಾರಂತ ಹಸ್ತಾಂತರಿಸಿದರು.
ಎಸ್.ಡಿ.ಸಿ.ಸಿ.ಬ್ಯಾಂಕಿನ ವಲಯ ಮೇಲ್ವಾಚಾರಕ ಕೇಶವ ಕಿಣಿ ಮತ್ತು ಯೋಗಿಶ್ ನವೋದಯ ಮೇಲ್ವಿಚಾರಕ ಡಿ.ಸಂಜೀವ ಪೂಜಾರಿ, ವಲಯ ಪ್ರೇರಕಿ ಆಶಾ ಗುಂಪಿನ ಅಧ್ಯಕ್ಷ ದರ್ಣಮ್ಮ ಕಾರ್ಯದರ್ಶಿ ಚೈತ್ರಾ ಉಪಸ್ಥಿತರಿದ್ದರು .

