ಮಂಗಳೂರು/ ಉಡುಪಿ/ಕಾಸರಗೋಡು: ಕರಾವಳಿಯ ವಿವಿಧೆಡೆ ಬುಧವಾರ ಉತ್ತಮ ಮಳೆ ಸುರಿದಿದೆ.ಮಂಗಳೂರು ಸುತ್ತಮುತ್ತ ಸಂಜೆ ವೇಳೆಗೆ ಸಾಧಾರಣ ಮಳೆಯಾಗಿದೆ. ಸುಬ್ರಹ್ಮಣ್ಯದಲ್ಲಿ ಗುಡುಗು, ಮಿಂಚು ಸಹಿತ ಸುರಿದ ಭಾರೀ ಮಳೆಯಿಂದಾಗಿ ವಿದ್ಯುತ್‌ ಕೈಕೊಟ್ಟಿದೆ. ಕಡಬ, ಸುಳ್ಯದಲ್ಲಿ ಗುಡುಗು ಸಹಿತ ಉತ್ತಮ ಮಳೆಯಾಗಿದೆ. ಪುತ್ತೂರು, ಮಡಂತ್ಯಾರು, ಕಲ್ಲೇರಿ, ಬಜಪೆ ಪರಿಸರದಲ್ಲಿಯೂ ಮಳೆ ಸುರಿದಿದೆ.
Mangalore-Rain
ಬೆಳ್ತಂಗಡಿ, ಉಜಿರೆಯಲ್ಲಿ ಮಳೆಯೊಂದಿಗೆ ಭಾರೀ ಸಿಡಿಲು ಕಾಣಿಸಿಕೊಂಡಿದೆ. ಪುಂಜಾಲಕಟ್ಟೆ, ಮಚ್ಚಿನದಲ್ಲಿ ಮಿಂಚು-ಗುಡುಗು ಸಹಿತ ವರ್ಷಧಾರೆಯಾಗಿದೆ. ಬಿ.ಸಿ. ರೋಡ್‌, ಬಂಟ್ವಾಳ, ಕಲ್ಲಡ್ಕ, ಮಾಣಿ, ಮಂಚಿ, ಫರಂಗಿಪೇಟೆ, ವಾಮದಪದವು, ಸಿದ್ಧಕಟ್ಟೆ, ಪಾಣೆಮಂಗಳೂರು, ಉಳ್ಳಾಲ, ಬಜಪೆ ಮುಂತಾದೆಡೆ ಮಳೆ ಸುರಿದಿದೆ.

ಬುಧವಾರ ಮುಂಜಾನೆ ಧಾರಾಕಾರ ಮಳೆ ಸುರಿದಿದ್ದು, ಈ ಸಂದರ್ಭ ಸಿಡಿಲಿಗೆ ಬೈಕಂಪಾಡಿ, ಕುಳಾç ಸೇರಿದಂತೆ ವಿವಿಧೆಡೆ ಕಂಪ್ಯೂಟರ್‌, ಇಂಟರ್‌ನೆಟ್‌ ಮೋಡೆಮ್‌, ಲಕ್ಷಾಂತರ ರೂ. ಮೌಲ್ಯದ ಯುಪಿಎಸ್‌ಗಳು, ಫ್ಯಾನ್‌, ಟಿ.ವಿ.ಗಳು ಹಾನಿಗೀಡಾಗಿವೆ. ಕುಳಾç ಬಳಿ ವಿದ್ಯುತ್‌ ಕಂಬದಲ್ಲಿ ಬೆಂಕಿ ಕಿಡಿ ಹೊತ್ತಿಕೊಂಡ ಬಳಿಕ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗಿತ್ತು.

ಕಾಸರಗೋಡು ಜಿಲ್ಲೆಯ ಕರಾವಳಿಯ ಕೆಲವೆಡೆ ಹಾಗೂ ಒಳನಾಡಿನಲ್ಲಿ ಬುಧವಾರ ಸಂಜೆ ಉತ್ತಮ ಮಳೆಯಾಗಿದೆ. ಕಾಸರಗೋಡು ನಗರ, ಚೆರ್ಕಳ, ಮೊಗ್ರಾಲ್‌ಪುತ್ತೂರು, ಮುಳ್ಳೇರಿಯ, ಬದಿಯಡ್ಕ, ಬೋವಿಕ್ಕಾನ, ನೀರ್ಚಾಲು, ಏಳಾನ, ಬೆಳ್ಳೂರು, ಅಡೂರು ಮೊದಲಾದೆಡೆ ಮಿಂಚು-ಗುಡುಗು ಸಹಿತ ಮಳೆಯಾಗಿದೆ. ವಿವಿಧೆಡೆ ವಿದ್ಯುತ್‌ ಸಂಪರ್ಕ ಪದೇ ಪದೇ ಕೈಕೊಡುತ್ತಿತ್ತು. ಬುಧವಾರ ಮುಂಜಾನೆಯೂ ವಿವಿಧೆಡೆ ಸಾಮಾನ್ಯ ಮಳೆಯಾಗಿದೆ.

By Suddi9

Leave a Reply

Your email address will not be published. Required fields are marked *