ಮಂಗಳೂರು: ಗಾಣಿಗರ ಯಾನೆ ಸಫಲಿಗರ ಪರವಾರ ಮತ್ತು ಜಿಲ್ಲಾ ಗಾಣಿಗರ ಯಾನೆ ಸಫಲಿಗರ ಸಂಘದ ಯುವ ವಿಭಾಗ ಇದರ ಆಶ್ರಯದಲ್ಲಿ ಅತ್ತಾವರ ಕೆಎಂಸಿ ಮೈದಾನದ ಈಚೆಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕ್ರಿಕೆಟ್‌ ಪಂದ್ಯಾಟದಲ್ಲಿ ಅಡ್ಯಾರ್‌ ಬಬ್ಬು ಸ್ವಾಮಿ ತಂಡ ಚಾಂಪಿಯನ್‌ ಆಗಿದೆ. ಕುರ್ನಾಡು ತಂಡ ರನ್ನರ್‌ ಅಪ್‌ ಪ್ರಶಸ್ತಿ ಪಡೆದಿದೆ.
06-mng-ganiga-cup
ಕಾರ್ಯಕ್ರಮವನ್ನು ಎಸ್‌. ರಮೇಶ್‌ ಉದ್ಘಾಟಿಸಿದರು. ಭಾಸ್ಕರ್‌ ಎಸ್‌. ಎಡಪದವು ಅಧ್ಯಕ್ಷತೆ ವಹಿಸಿದ್ದರು. ಸುಷ್ಮಾ ಕಣ್ಣನ್‌ ಗಾಣಿಗ, ವಿಶ್ವಾಸ್‌ ಕುಮಾರ್‌ ದಾಸ್, ಪ್ರೇಮ್‌ ಸಾಲಿಯಾನ್‌, ಅಶೋಕ್‌ ಕುರ್ನಾಡು, ವಿಜೇತ್‌ ಸುವರ್ಣ, ಶೋಭಾ ಅತ್ತಾವರ, ರಂಜನ್‌ಕುಮಾರ್‌ ಅತ್ತಾ ವರ, ಪ್ರಮೋದ್‌ ಕರ್ಕೇರ ಫರಂಗಿಪೇಟೆ ಇದ್ದರು.

ಇದೇ ಸಂದರ್ಭ ರಾಷ್ಟ್ರೀಯ ಕರಾಟೆ ಪ್ರಶಸ್ತಿ ವಿಜೇತೆ ದಿಯಾ ರಾಣಿಯನ್ನು ಸನ್ಮಾನಿಸಲಾಯಿತು. ಪಂದ್ಯಾಟದಲ್ಲಿ 30 ತಂಡಗಳು ಭಾಗವಹಿಸಿದ್ದವು. ಜಯರಾಮ್‌ ಅಡ್ಯಾರ್‌ ಮತ್ತು ಗೀತಾ ಸುವರ್ಣ ಕಾರ್ಯಕ್ರಮ ನಿರೂಪಿ ಸಿದರು. ಬಾಲಕೃಷ್ಣ ಪಂದ್ಯಾಟವನ್ನು ನಡೆಸಿಕೊಟ್ಟರು.

By Suddi9

Leave a Reply

Your email address will not be published. Required fields are marked *