ಮೂಡುಬಿದರೆ: ಅಖಿಲ ಭಾರತ ಕಾರ್ಮಿಕ ಸಂಘದ ಮುಖಂಡ ಸುದತ್ತ ಜೈನ್ ಅವರು ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಶಿರ್ತಾಡಿ ಪಂಚಾಯಿತಿ ಕಚೇರಿ ಎದುರು ಕಳೆದ ಐದು ದಿನಗಳಿಂದ ನಡೆಸುತ್ತಾ ಬಂದಿರುವ ಅನಿರ್ಧಿಷಾವಧಿ ಉಪವಾಸ ಸತ್ಯಾಗ್ರಹವನ್ನು ಬುಧವಾರ ಜ್ಯೂಸ್ ಸೇವಿಸುವ ಮೂಲಕ ಮುಕ್ತಾಯಗೊಳಿಸಿದರು.
ಕಾರ್ಮಿಕರ ಸಮಸ್ಯೆಗಳ ಬಗ್ಗೆ ಶಿರ್ತಾಡಿ ಪಂಚಾಯಿತಿ ನಿರ್ಲಕ್ಷ್ಯ ವಹಿಸುತ್ತಿದೆ ಹಾಗೂ ಕೊಣಾಜೆಕಲ್ಲಿ ಡೋರ್ ನಂಬರ್ ನೀಡುವಲ್ಲಿ ಅವ್ಯವಹಾರ ನಡೆಸಿದೆ ಎಂದು ಆರೋಪಿಸಿ ಈ ಬಗ್ಗೆ ತನಿಖೆ ನಡೆಸಬೇಕೆಂದು ಆಗ್ರಹಿಸಿ ಸುದತ್ತ ಜೈನ್ ಅವರು ಮೇ 2ರಿಂದ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದರು.
mbd_may6_2 (1)
ಬುಧವಾರದಂದು ಅಕ್ಷರ ದಾಸೋಹದ ತಾಲೂಕು ಶಿಕ್ಷಣಾಧಿಕಾರಿ ಶಿವರಾಮ್, ಮೂಡುಬಿದರೆ ತಹಸಿಶೀಲ್ದಾರ್ ಮಹಮ್ಮದ್ ಇಸಾಕ್ ಅವರು ಸ್ಥಳಕ್ಕೆ ಭೇಟಿ ನೀಡಿ ಅಹವಾಲು ಸ್ವೀಕರಿಸಿ ಪೂರಕ ಭರವಸೆಯನ್ನು ನೀಡಿದರು. ನಂತರ ತನಿಖೆ ನಡೆಸಿ ಪಿಡಿಓ ಮನೋಹರ ಹಾಗೂ ಪಂಚಾಯಿತಿ ಸದಸ್ಯರನ್ನು ಕರೆಸಿ ತುರ್ತು ಸಭೆಯನ್ನು ನಡೆಸಿ ಕೊಣಾಜೆಕಲ್ಲು ಶಾರದಾದಾಸ್ ಸಿದ್ಧಾಶ್ರಮಕ್ಕೆ ನೀಡಿರುವ ಡೋರ್ ನಂಬರ್‍ವನ್ನು 1993ರ ಪಂಚಾಯಿತಿ ಆಕ್ಟ್ ಪ್ರಕರಣ 64ರ ಪ್ರಕಾರ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಲು ಪಿಡಿಓಗೆ ಸೂಚಿಸಿದ ಮೇಲೆ ಸುದತ್ತ ಜೈನ್ ಉಪವಾಸವನ್ನು ಕೈಬಿಟ್ಟರು.
ಇದಕ್ಕೂ ಮೊದಲು ಶಿಕ್ಷಣಾಧಿಕಾರಿ ಶಿವರಾಮ್ ಮತ್ತು ತಹಶೀಲ್ದಾರ್ ಅವರು ಸುದತ್ತ ಅವರ ಸಮಸ್ಯೆಗಳನ್ನು ಆಲಿಸಿ ಈ ಸಮಸ್ಯೆಗಳ ಬಗ್ಗೆ ಕ್ರಮಕೈಗೊಳ್ಳುತ್ತೇವೆ ತಾವು ಉಪವಾಸ ಸತ್ಯಾಗ್ರಹವನ್ನು ಕೈಬಿಡುವಂತೆ ಕೇಳಿಕೊಂಡಾಗ ತಾವು ಮೊದಲು ಪಂಚಾಯಿತಿನಿಂದ ಆಗಿರುವ ಅವ್ಯವಹಾರಗಳ ಬಗ್ಗೆ ಸೂಕ್ತ ತನಿಖೆ ನಡೆಸಿ, ಪಿಡಿಓ ಅವರು ಡೋರ್ ನಂಬರ್ ಹೇಗೆ ನೀಡಿದ್ದಾರೆಂದು ಪ್ರಶ್ನಿಸಿ ಅಥವಾ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಅಮಾನತುಗೊಳಿಸಿ ಎಂದು ಆಗ್ರಹಿಸಿದಾಗ ಪಕ್ಕದಲ್ಲಿಯೇ ಇದ್ದ ಪಿಡಿಓ ಮನೋಹರ ಅವರು ಈ ಹಿಂದೆ ಕೋಣಾಜೆ ಕಲ್ಲಿಗೆ ಡೋರ್ ನಂಬರ್ ನೀಡಿದ್ದಾರೆ ಸಂಬಂಧಪಟ್ಟವರು ಆಕ್ಷೇಪ ಕೊಟ್ಟರೆ ಮಾತ್ರ ಇದನ್ನು ರದ್ದುಗೊಳಿಸಲು ಸಾಧ್ಯವಿದೆ ಎಂದಾಗ, ಬಡವರು ಮನೆಕಟ್ಟಿ ಕುಳಿತುಕೊಂಡರೆ ಅದನ್ನು ಸಭೆ ನಡೆಸದೆ ನೆಲಸಮ ಮಾಡುತ್ತೀರಿ ತಾವು ಅದೇ ಅಕ್ರಮವಾಗಿ ಡೋರ್ ನಂಬರ್ ಹೇಗೆ ಕೊಟ್ಟಿರಿ ಕೊಣಾಜೆ ಕಲ್ಲಿಗೆ ಡೋರ್ ನಂಬರ್ ನೀಡಲು ನೀವೆ ಕಾರಣ ನಿಮ್ಮನ್ನು ಅಮಾನತುಗೊಳಿಸಬೇಕೆಂದು ಸುಧತ್ತ ಜೈನ್ ಹೇಳಿದರು. ನೀವು ಏನು ಬೇಕಾದರು ಮಾಡಿಕೊಳ್ಳಿ ಎಂದು ಪಿಡಿಓ ಉತ್ತರಿಸಿದಾಗ ಸ್ವಲ್ಪ ಸಮಯ ಮಾತಿನ ಚಕಮಕಿ ನಡೆಯಿತು.
ನಂತರ ಭ್ರಷ್ಟಾಚಾರ ಪಿಡಿಓ ಎಂದು ಮಾಡಿರುವ ಪ್ರತಿಕೃತಿಯನ್ನು ಪ್ರತಿಭಟನಕಾರರು ದಹನ ಮಾಡಿದರು. ಮತ್ತೆ ಪುನ: ತಹಶೀಲ್ದಾರ್, ಪಿಡಿಓ, ತಾ.ಪಂ ಸದಸ್ಯ ರುಕ್ಕಯ್ಯ ಪೂಜಾರಿ ಸಹಿತ ಸದಸ್ಯರು ಸಭೆ ನಡೆಸಿ ಸೂಕ್ತ ಕ್ರಮವನ್ನು ಕೈಗೊಂಡ ನಂತರ ಪಂಚಾಯಿತಿ ಸದಸ್ಯ ಪ್ರವೀಣ್ ಕುಮಾರ್ ಜೈನ್, ಮೂಡುಬಿದರೆ ಪೊಲೀಸ್ ನಿರೀಕ್ಷಕ ಅನಂತಪದ್ಮನಾಭ ಅವರ ಕೈಯಿಂದ ಜ್ಯೂಸ್ ಕುಡಿದು ಉಪವಾಸವನ್ನು ಕೈಬಿಟ್ಟರು.

By suddi9

Leave a Reply

Your email address will not be published. Required fields are marked *