ಮೂಡಬಿದಿರೆ : ಬದುಕಿನ ಸೂತ್ರ, ವಿಶಾಲ ಮನೋಭಾವ, ಧಾರ್ಮಿಕ, ಸಾಂಸ್ಕೃತಿಕ ಚೌಕಟ್ಟನ್ನು ಹಿಂದೂಗಳು ತಮ್ಮ ಹಿರಿಯರಿಂದ ಬಳುವಳಿಯಾಗಿ ಪಡೆದಿದ್ದು, ಇಂದಿನ ಸವಾಲುಗಳೊಂದಿಗೆ ಅವುಗಳನ್ನು ಜತನದಿಂದ ಕಾಪಾಡಿ ಮುನ್ನಡೆಯಬೇಕಾಗಿದೆ ಎಂದು ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಹೇಳಿದರು.

ಪುತ್ತಿಗೆ ವಿವೇಕಾನಂದ ನಗರದಲ್ಲಿ ಹತ್ತುದಿನಗಳ ಕಾಲ ನಡೆಯುವ ವಿಶ್ವ ಹಿಂದೂ ಪರಿಷತ್‌ನ ರಾಜ್ಯಮಟ್ಟದ ಶಿಕ್ಷಾವರ್ಗಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
VHP-8-5

ವಿಹಿಂಪ ದಕ್ಷಿಣ ಪ್ರಾಂತ್ಯದ ಕಾರ್ಯಾಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್‌ ಅಧ್ಯಕ್ಷತೆ ವಹಿಸಿದ್ದರು.

ಹಿಂದೆ ಅನ್ಯಧರ್ಮೀಯರು ಮಾತ್ರ ಹಿಂದೂಗಳಿಗೆ ವಿರೋಧಿಗಳಾಗಿದ್ದರೆ ಈಗ ಹಿಂದೂಗಳಿಗೆ ಹಿಂದೂಗಳೇ ವಿರೋಧಿಗಳಾಗಿ ವರ್ತಿಸುತ್ತಿರುವುದು ದುರದೃಷ್ಟಕರ. ಹಿಂದೂ ಧರ್ಮದಲ್ಲಿರುವ ಕೊರತೆ, ನ್ಯೂನತೆಗಳನ್ನು ಬಂಡವಾಳ ಮಾಡಿಕೊಂಡು ವಿದೇಶದಿಂದ ಬರುವ ಕೋಟ್ಯಂತರ ರೂಪಾಯಿ ಹಣ ಬಳಸಿ ಹಿಂದೂಗಳನ್ನು ಮತಾಂತರಿಸಲಾಗುತ್ತಿದೆ. ಇದನ್ನು ಸಮರ್ಪಕವಾಗಿ ಇದಿರಿಸುವಲ್ಲಿ ವಿಹಿಂಪ ನಿರಂತರವಾಗಿ ಶ್ರಮಿಸುತ್ತಾ ಬಂದಿದೆ ಎಂದು ಪುರಾಣಿಕ್‌ ಹೇಳಿದರು.

ದಕ್ಷಿಣ ಪ್ರಾಂತ್ಯ ಉಪಾಧ್ಯಕ್ಷ ಶಂಕರಪ್ಪ ಉಪಸ್ಥಿತರಿದ್ದರು. ಸಹಕಾರ್ಯದರ್ಶಿ ಕೃಷ್ಣಮೂರ್ತಿ ಸ್ವಾಗತಿಸಿದರು. ಕೇಶವ ಹೆಗ್ಡೆ ಕಾರ್ಯಕ್ರಮಗಳ ವಿವರ ನೀಡಿದರು. ಕೆ.ಪಿ. ಶೆಣೈ ವಂದಿಸಿದರು. ಬಸವರಾಜ ಕಾರ್ಯಕ್ರಮ ನಿರ್ವಹಿಸಿದರು.

By Suddi9

Leave a Reply

Your email address will not be published. Required fields are marked *