ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಮೊಡಂಕಾಪು ಸಮೀಪದ ಕುಪ್ಪಿಲ ನೇತಾಜಿ ಯುವಕ ಸಂಘದ ಬೆಳ್ಳಿಹಬ್ಬ ಪ್ರಯುಕ್ತ ಇದೇ 10ರಂದು ಪಲ್ಲಮಜಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೃಹತ್ ‘ಉಚಿತ ಆರೋಗ್ಯ ಮೇಳ’ ಮತ್ತು ಸ್ಥಳೀಯ ಅಶಕ್ತ ಮಹಿಳೆಗೆ ಹೊಸ ಮನೆ ಹಸ್ತಾಂತರ ಕಾರ್ಯಕ್ರಮ ಆಯೋಜಿಸಿದೆ.
ಆರೋಗ್ಯ ಮೇಳದಲ್ಲಿ ಎಲ್ಲಾ ವಿಭಾಗದ ತಜ್ಞ ವೈದ್ಯರು ಆರೋಗ್ಯ ತಪಾಸಣೆ ನಡೆಸಲಿದ್ದು, ಶಿಬಿರದಲ್ಲಿ ಸುಮಾರು 1ಸಾವಿರಕ್ಕೂ ಮಿಕ್ಕಿ ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಆರ್‍ಎಸ್‍ಎಸ್ ಮುಖಂಡ ಗೋಪಾಲ್ ಶೆಟ್ಟಿಯಾರ್ ಶಿಬಿರ ಉದ್ಘಾಟಿಸಲಿದ್ದು, ಉದ್ಯಮಿ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಪುರಸಭಾ ಸದಸ್ಯ ರಾಮಕೃಷ್ಣ ಆಳ್ವ ಮತ್ತಿತರ ಗಣ್ಯರು ಭಾಗವಹಿಸುವರು.
ಮನೆ ಹಸ್ತಾಂತರ: ಸಂಘದ ಬೆಳ್ಳಿಹಬ್ಬ ಪ್ರಯುಕ್ತ ಸ್ಥಳೀಯ ಅಶಕ್ತ ಮಹಿಳೆ ಇಂದಿರಾ ಎಂಬವರಿಗೆ ಸಂಘದ ವತಿಯಿಂದ ಸುಮಾರು ರೂ 3ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಹೊಸ ಮನೆ ಹಸ್ತಾಂತರಿಸಲಾಗುತ್ತದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

By Suddi9

Leave a Reply

Your email address will not be published. Required fields are marked *