ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಮೆಲ್ಕಾರ್ ರಾಷ್ಟ್ರೀಯ ಹೆದ್ದಾರಿ ಬಳಿ ಹಾಡುಹಗಲಿನಲ್ಲೇ ಪ್ರಯಾಣಿಕರೊಬ್ಬರ ಬ್ಯಾಗ್ ಎಗರಿಸಿ ಬಳಿಕ ಸ್ಥಳೀಯರ ಕೈಗೆ ಸಿಕ್ಕಿ ಒದೆ ತಿಂದ ಘಟನೆ ಇಲ್ಲಿನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ. ಆರೋಪಿಯನ್ನು ಸ್ಥಳೀಯ ಅಲ್ಲಿಪಾದೆ ನಿವಾಸಿ ಎಂದು ಗುರುತಿಸಲಾಗಿದ್ದು, ಪಣೋಲಿಬೈಲು ಕ್ಷೇತ್ರಕ್ಕೆ ಬಂದಿದ್ದ ಮೂಲ್ಕಿ ಕುಟುಂಬವೊಂದು ಮೆಲ್ಕಾರ್ನ ಹೋಟೆಲೊಂದರಲ್ಲಿ ಉಪಹಾಸ ಸೇವಿಸಲು ಬಂದಿದ್ದ ವೇಳೆ ಈ ಕೃತ್ಯ ನಡೆದಿದೆ.
ಇಲ್ಲಿನ ಸಿಸಿ ಕ್ಯಾಮೆರಾ ಮೂಲಕ ಆರೋಪಿಯನ್ನು ಗುರುತಿಸಿದ ಬಳಿಕ ಪೊಲೀಸರೊಂದಿಗೆ ಸ್ಥಳೀಯರು ಸೇರಿಕೊಂಡು ಕೋಳಿ ಅಂಕವೊಂದರಲ್ಲಿ ಆರೋಪಿಯನ್ನು ಹಿಡಿದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
