ಬಂಟ್ವಾಳ: ಶ್ರೀದೇವಿ ಸೇವಾ ಸಮಿತಿ ವಗ್ಗ ಇದರ ಉದ್ಘಾಟನಾ ಸಮಾರಂಭವು ಮೇ.5 ಮಂಗಳವಾರ ಸಂಜೆ 6.30ಕ್ಕೆ ಅಲಂಪುರಿ ವಗ್ಗದ ದ.ಕ. ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.

IMG-20150504-WA0014
ಕಾರ್ಯಕ್ರಮದಲ್ಲಿ ಶ್ರೀ ಮಹತೋಬಾರ ಶ್ರೀ ಕಾರಿಂಜೇಶ್ವರ ಕ್ಷೇತ್ರದ ಪ್ರಧಾನ ಅರ್ಚಕ ನಟರಾಜ ಉಪಾಧ್ಯಾಯ ದೀಪ ಬೆಳಗಿಸಿ ಚಾಲನೆ ನೀಡಲಿದ್ದಾರೆ. ಕಟೀಲಿನ ಅರ್ಚಕ ಕಮಲಾದೇವಿ ಆಸ್ರಣ್ಣ ಉಪಸ್ಥಿತರಿದ್ದು, ಆಶೀರ್ವಚನ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ನಡುಬೊಟ್ಟುವಿನ ಧರ್ಮದರ್ಶಿ ರವಿ.ಎನ್. ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕಟೀಲು ಮೇಳದ ಸಂಚಾಲಕ ಕಲ್ಲಾಡಿ ದೇವಿ ಪ್ರಸಾದ್ ಶೆಟ್ಟಿ, ಎಂಸಿಎಫ್ ನ ಡಾ. ಯೋಗೀಶ್ ಕೆ., ಕೆನರಾ ಚೆಂಬರ್ ಆಫ್ ಕಾರ್ಮರ್ಸ್ ನ ಕೆ.ಎನ್. ಶೆಟ್ಟಿ, ವೈದ್ಯರಾದ ಜೆ.ಎನ್. ಭಟ್ ಉಪಸ್ಥಿತರಿರುವರು.
ಅಂದು ಬೆಳಿಗ್ಗೆ 9.30 ರಿಂದ 12.30ರ ವರೆಗೆ ರೈತರಿಗಾಗಿ ಮಣ್ಣಿನ ಫಲವತ್ತತೆಯ ಉಚಿತ ಮಣ್ಣು ಪರೀಕ್ಷೆ ಮತ್ತು ಕೃಷಿ ಸಂಬಂಧಿತ ಸಲಹೆಗಳನ್ನು ತಜ್ಞರಿಂದ ನೀಡಲಾಗುವುದು. ಅಲ್ಲದೇ 40 ವರ್ಷ ಮೇಲ್ಪಟ್ಟವರಿಗಾಗಿ ಉಚಿತವಾಗಿ ಮಧುಮೇಹದ ರಕ್ತ ಪರೀಕ್ಷೆಯನ್ನು ನಡೆಸಲಾಗುವುದು.
ಅಲ್ಲದೇ ಸಂಜೆ 3.30ರಿಂದ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ರಾತ್ರಿ ಗಂಟೆ 9ರಿಂದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ `ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ನಡೆಯಲಿರುವುದು ಎಂದು ಸೇವಾ ಸಮಿತಿಯ ಕಾರ್ಯದರ್ಶಿ ಜಗದೀಶ ಮೂಲ್ಯ ಅವರು ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *