ಬಂಟ್ವಾಳ : ತಾಲೂಕಿನ ಹೃದಯ ಪಟ್ಟಣ ಬಿ ಸಿ ರೋಡಿನ ಟ್ರಾಫಿಕ್ ಜಾಂಗೆ ಯಾವುದೇ ಪರಿಹಾರ ಸದ್ಯಕ್ಕೆ ದೊರಯುವ ಲಕ್ಷಣಗಳು ಕಂಡು ಬರುತ್ತಿಲ್ಲ. ಕಳೆದ ಒಂದು ವಾರದಿಂದ ನಿರಂತರ ಸಂಚಾರ ಅಸ್ತವ್ಯಸ್ತತೆಗೆ ಒಳಗಾಗುತ್ತಿರುವ ಬಿ ಸಿ ರೋಡು ಪೇಟೆ ಕಿಲೋ ಮೀಟರ್ ಉದ್ದದ ವಾಹನಗಳ ಸರತಿ ಸಾಲು ಕಂಡು ಬರುತ್ತಿದೆ.
01 May Traffic 3

 

01 May Traffic 1

01 May Traffic 2
ಶುಕ್ರವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ಇಲ್ಲಿ ಟ್ರಾಫಿಕ್ ಜಾಂ ದೃಶ್ಯ ಕಂಡು ಬಂದಿದೆ. ಈ ಹಿಂದೆ ಇಲ್ಲಿನ ಫ್ಲೈ ಓವರ್ನ ಇಕ್ಕೆಲಗಳಲ್ಲಿ ಆಗಿರುವ ಅವ್ಯವಸ್ಥೆಯಿಂದಾಗಿ ಟ್ರಾಫಿಕ್ ಕಿರಿಕಿರಿ ಉಂಟಾಗುತ್ತಿದ್ದರೆ, ಈ ಬಾರಿ ಬಿ ಸಿ ರೋಡಿನ ರೈಲ್ವೇ ಮೇಲ್ಸೇತುವೆ ರಸ್ತೆಯನ್ನು ಮುಖ್ಯ ಹೆದ್ದಾರಿಗೆ ಜೋಡಿಸುವ ಕಾಮಗಾರಿ ನಡೆಯುತ್ತಿದ್ದು, ಇದರಿಂದಾಗಿ ವಾಹನ ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ. ಈ ಮಧ್ಯೆ 108 ಆರೋಗ್ಯ ರಕ್ಷಾ ಕವಚ ಅಂಬ್ಯುಲೆನ್ಸ್ವೊಂದು ಇಲ್ಲಿನ ಟ್ರಾಫಿಕ್ ಮಧ್ಯೆ ಸಿಲುಕಿಕೊಂಡು ಕೆಲವು ನಿಮಿಷಗಳ ಕಾಲ ಸೈರನ್ ಮೊಳಗಿಸಿದರೂ ಆಚೀಚೆ ಅಲುಗಾಡಲು ಜಾಗವಿಲ್ಲದ ಪರಿಸ್ಥಿತಿಯೂ ಕಂಡು ಬಂತು.
ಟ್ರಾಫಿಕ್ ಠಾಣೆ ಆರಂಭಗೊಂಡ ಬಳಿಕವೂ ಬಿ ಸಿ ರೋಡಿನ ಸಂಚಾರಿ ಸಮಸ್ಯೆಗೆ ಯಾವುದೇ ಪರಿಹಾರ ಕಾಣದೆ ಇದ್ದು, ಹೆದ್ದಾರಿ ಅವ್ಯವಸ್ಥೆಯಿಂದಾಗಿ ಟ್ರಾಫಿಕ್ ಪೊಲೀಸರ ಸಹಿತ ಇಲ್ಲಿನ ನಗರ ಪೊಲೀಸರು ಕೂಡಾ ದಿನವಿಡೀ ಟ್ರಾಫಿಕ್ ನಿಯಂತ್ರಿಸುವಲ್ಲಿ ಹರಸಾಹಸಪಡುವಂತಾಗಿದೆ. ಬಿ ಸಿ ರೋಡಿನ ಪರಿಸ್ಥಿತಿ ವ್ಯವಸ್ಥೆಗೆ ಬರುವವರೆಗೂ ಪೊಲೀಸರು ಏನು ಮಾಡಿದರೂ ಪರಿಸ್ಥಿತಿ ಸುಧಾರಿಸುವ ಲಕ್ಷಣ ಸದ್ಯಕ್ಕೆ ಕಂಡುಬರುತ್ತಿಲ್ಲ. ಇದು ಇನ್ನೆಷ್ಟು ಕಾಲ ಮುಂದುವರಿಯಲಿದೆಯೋ ಎಂದು ಇಲ್ಲಿನ ಜನ ಆಡಿಕೊಳ್ಳುವಂತಾಗಿದೆ.

By suddi9

Leave a Reply

Your email address will not be published. Required fields are marked *