ಬಂಟ್ವಾಳ : ಐಸ್ಕ್ರೀಂ ಮೆಲ್ಲುವಾಗ ವ್ಯಕ್ತಿಯೋರ್ವರಿಗೆ ಅದರಲ್ಲಿ ರಬ್ಬರ್ ಬ್ಯಾಂಡ್ ಪತ್ತೆಯಾದ ಘಟನೆ ತಾಲೂಕಿನ ಪಾಣೆಮಂಗಳೂರು ಎಂಬಲ್ಲಿ ನಡೆದಿದ್ದು, ಇದನ್ನು ಮನೆಯ ರೆಫ್ರಿಜರೇಟರ್ನಲ್ಲಿ ಭದ್ರವಾಗಿಟ್ಟು ಮಾಧ್ಯಮದ ಗಮನ ಸೆಳೆದಿದ್ದಾರೆ.
ಪಾಣೆಮಂಗಳೂರು ನಿವಾಸಿ ಮುಸ್ತಫಾ ಎಂಬವರು ಪರಿಸರದ ಅಂಗಡಿಯೊಂದರಿಂದ ಐಸ್ಕ್ರೀಂ ಕಪ್ವೊಂದನ್ನು ಖರೀದಿಸಿ ಮೆಲ್ಲುತ್ತಿರುವಾಗ ಅರ್ಧ ತಿಂದ ಬಳಿಕ ಐಸ್ಕ್ರೀಂ ಮಧ್ಯಭಾಗದಲ್ಲಿ ರಬ್ಬರ್ ಬ್ಯಾಂಡ್ವೊಂದು ಪತ್ತೆಯಾಗಿದೆ. ತಕ್ಷಣ ಈ ಬಗ್ಗೆ ಮೆಲ್ಕಾರ್ನಲ್ಲಿರುವ ಐಸ್ಕ್ರೀಂ ತಯಾರಿಕಾ ಘಟಕಕ್ಕೆ ಫೋನಾಯಿಸಿ ಘಟನೆಯನ್ನು ವಿವರಿಸಿದ್ದಾರೆ. ಆದರೆ ತಯಾರಿಕಾ ಘಟಕದ ಮಂದಿ ಮಾತ್ರ ಅದನ್ನು ತಂದು ತೋರಿಸಿ ಎಂಬುದಾಗಿ ಉಡಾಫೆ ಮಾತನ್ನಾಡಿದ ಕರೆ ಕಟ್ ಮಾಡಿದ್ದಾರೆ ಎಂದು ಮುಸ್ತಫಾ ವಿವರಿಸಿದ್ದಾರೆ.
01 May Ice Cream 1

01 May Ice Cream 3
ಈ ಬಗ್ಗೆ ಪತ್ರಿಕಾ ಪ್ರತಿನಿಧಿ ಮೆಲ್ಕಾರ್ನ ಉಲ್ಲಾಸ್ ಐಸ್ಕ್ರೀಂ ತಯಾರಿಕಾ ಘಟಕದ ಉದ್ಯೋಗಿಯೋರ್ವರ ಗಮನ ಸೆಳೆದಾಗ ಇಂತಹ ನೂರಾರು ದೂರುಗಳು ಈಗಾಗಲೇ ನಮಗೂ ಬಂದಿದೆ. ಇದರ ಬಗ್ಗೆ ಕಂಪೆನಿ ಮಾಲಕರ ಗಮನಕ್ಕೆ ತಂದರೆ ಅಂತಹದ್ದೇನೂ ನಡೆದೇ ಇಲ್ಲ ಎಂಬಂತೆ ಬೇಜವಾಬ್ದಾರಿ ಹಾಗೂ ಉಡಾಫೆಯಿಂದ ಮಾತನಾಡಿ ಪ್ರಕರಣದ ಗಂಭೀರತೆಯನ್ನು ತಗ್ಗಿಸುತ್ತಿದ್ದಾರೆ. ಈ ಬಗ್ಗೆ ನೀವೇ ಎಲ್ಲಿಗಾದರೂ ದೂರು ನೀಡಿ ಎಂದು ಅಸಹಾಯಕತೆ ಪ್ರದರ್ಶಿಸಿದ್ದಾರೆ.
ಇಲ್ಲಿನ ಐಸ್ಕ್ರೀಂ ಕಪ್ ಹಾಗೂ ಇನ್ನಿತರ ಉತ್ಪನ್ನಗಳಲ್ಲಿ ಈ ಹಿಂದೆಯೂ ಇಂತಹ ವಸ್ತುಗಳು ಪತ್ತೆಯಾಗಿದ್ದು, ಈ ಬಗ್ಗೆ ಕಂಪೆನಿ ಮಾಲಕರ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮದ ಭರವಸೆ ದೊರೆತಿಲ್ಲ. ಇದೀಗ ಈ ಬಗ್ಗೆ ಆರೋಗ್ಯಾಧಿಕಾರಿಗಳಿಗೆ ದೂರು ನೀಡಿ ಸೂಕ್ತ ಕ್ರಮಕ್ಕಾಗಿ ಆಗ್ರಹಿಸಿರುವುದಾಗಿ ಮುಸ್ತಫಾ ಪತ್ರಿಕೆಗೆ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *