ಬಂಟ್ವಾಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮೆಡಿಕಲ್ ಟ್ರಸ್ಟ್ , ಶ್ರೀ ಕ್ಷೇ.ಧ.ಗ್ರಾ.ಯೋಜನೆ ದೇವಸ್ಯಪಡೂರು, ಅಲ್ಲಿಪಾದೆ ಶ್ರೀ ರಾಮ ಸೇವಾ ಟ್ರಸ್ಟ್ , ಶ್ರೀ ರಾಮ ಯುವ ವೃಂದ ಇವರ ಸಹಯೋಗದಲ್ಲಿ ಶ್ರೀ ಕ್ಷೇ.ಧ.ಧರ್ಮಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಶ್ರೀ ಧ.ಮಂ.ಸಂಚಾರಿ ಆಸ್ಪತ್ರೆಯ ಉಚಿತ ಚಿಕಿತ್ಸಾ ಶಿಬಿರವು ಬಂಟ್ವಾಳ ತಾಲೂಕು ಅಲ್ಲಿಪಾದೆ ಶ್ರೀ ರಾಮ ಸಭಾಭವನದಲ್ಲಿ ಮೇ 6ರಂದು ಬುಧವಾರ ಬೆಳಗ್ಗೆ 10ಕ್ಕೆ ಜರಗಲಿದೆ.
ಮಂಗಳೂರು ಉದ್ಯಮಿ ರವಿಕುಮಾರ್ ಅವರು ಶಿಬಿರವನ್ನು ಉದ್ಘಾಟಿಸಲಿರುವರು. ಸರಪಾಡಿ ಗ್ರಾ.ಪಂ.ಅಧ್ಯಕ್ಷ ಧನಂಜಯ ಶೆಟ್ಟಿ ಅಧ್ಯಕ್ಷತೆ ವಹಿಸಲಿರುವರು. ಶ್ರೀ ಧ.ಮಂ.ಮೆಡಿಕಲ್ ಟ್ರಸ್ಟ್ ನ ಕಾರ್ಯದರ್ಶಿ ಶಿಶುಪಾಲ ಪೂವಣಿ, ಬಂಟ್ವಾಳ ಶ್ರೀ ಕ್ಷೇ.ಧ.ಗ್ರಾ.ಯೋ.ಯೋಜನಾಕಾರಿ ಕು|ಸುನೀತಾ ನಾಯಕ್, ನಾವೂರು ಗ್ರಾ.ಪಂ.ಅಧ್ಯಕ್ಷ ಬೇಬಿ ಸುವರ್ಣ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು ಎಂದು ಪ್ರಕಟನೆ ತಿಳಿಸಿದೆ.

By Suddi9

Leave a Reply

Your email address will not be published. Required fields are marked *