ಮನೋತ್ಯರ್ಯ ಹೆಚ್ಚಿಸಲು ಸಾಂಸ್ಕ್ರತಿಕ ಚಟುವಟಿಕೆಗಳು ಸಹಕಾರಿ- ಹಿರಿಯ ನ್ಯಾಯವಾದಿ ಮಿತ್ತೂರು ಈಶ್ವರ ಉಪಾಧ್ಯಾಯ.
ಬಂಟ್ವಾಳ: ವಕೀಲರ ಸಂಘ(ರಿ) ಬಂಟ್ವಾಳ ಇದರ ವಾರ್ಷಿಕ ದಿನಾಚರಣೆ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮವು ರೊಟೇರಿಯನ್ ಪಿಎಚ್ಎಫ್ ನ್ಯಾಯವಾದಿ ದಿ.ಅನಂತ ಸೋಮಯಾಜಿ ಮೆಮೋರಿಯಲ್ ಸಭಾ ಭವನ ರೋಟರಿಕ್ಲಬ್ ಬಂಟ್ವಾಳದಲ್ಲಿ ಜರಗಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ನ್ಯಾಯವಾದಿ ಮಿತ್ತೂರು ಈಶ್ವರ ಉಪಾಧ್ಯಾಯ ದೀಪ ಬೆಳಗಿಸಿ , ನ್ಯಾಯವಾದಿಗಳು ದಿನಾ ತಮ್ಮ ಕಕ್ಷಿದಾರರಿಗೆ ನ್ಯಾಯ ಕೊಡಲು ಶ್ರಮಿಸಬೇಕಾಗಿದೆ ಹಾಗೂ ನಾವು ಯಾವಾಗಲೂ ಒತ್ತಡದ ಜೀವನವನ್ನು ನಡೆಸುತ್ತಿದ್ದೇವೆ. ಈ ಒತ್ತಡ ಕಡಿಮೆ ಮಾಡಲು ಸಾಂಸ್ಕ್ರತಿಕ ಕಾರ್ಯಕ್ರಮಗಳು ಸಹಕಾರಿ ಹಾಗೂ ವಕೀಲರ ಪ್ರತಿಭೆ ಗಳನ್ನು ಅಭಿವೃದ್ಧಿಗೊಳಿಸಲು ಉತ್ತಮ ವೇದಿಕೆಯಾಗಿದೆ ಎಂದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ವೇದಿಕೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ಚಂದ್ರಶೇಖರ ಪೂಜಾರಿ , ಉಪಾಧ್ಯಕ್ಷ ರಿಚಾಡ್ ಕೋಸ್ತ, ಕಾರ್ಯದರ್ಶಿ ಚಂದ್ರಶೇಖರ ಪುಂಚಮೆ , ನ್ಯಾಯವಾದಿಗಳಾದ ಸತೀಶ್ ಬಿ. , ಸುರೇಶ್ ಕುಮಾರ್ ನಾವೂರು, ಶೈಲಜಾ ರಾಜೇಶ್ ಉಪಸ್ಥಿತರಿದ್ದರು.
ಸಾಯಂಕಾಲ ನಡೆದ ಬಹುಮಾನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಹಿರಿಯ ಸಿವಿಲ್ ನ್ಯಾಯಾಧೀ ಶ ಹಾಗೂ ಜೆ.ಎಂ.ಎಫ್.ಸಿ ಚಂದ್ರಶೇಖರ ಯು. , ಪ್ರಧಾನ ಸಿವಿಲ್ ನ್ಯಾಯಾಧೀ ಶ ಹಾಗೂ ಜೆ.ಎಂ.ಎಫ್.ಸಿ ಜಯಪ್ರಕಾಶ್ ಡಿ.ಆರ್, ಹೆಚ್ಚುವರಿ ಸಿವಿಲ್ ನ್ಯಾಯಾಧೀ ಶ ಹಾಗೂ ಜೆ.ಎಂ.ಎಫ್.ಸಿ ಮಹೇಶ್ ಆರ್, ಹಿರಿಯ ನ್ಯಾಯವಾದಿ ಎ.ಕೆ.ರಾವ್, ಭಾಗವಹಿಸಿದ್ದರು.
ವಕೀಲರ ಸಂಘದ ಸಾಂಸ್ಕ್ರತಿಕ ಕಾರ್ಯದರ್ಶಿ ರ ವೀಂದ್ರ ಕುಕ್ಕಾಜೆ ಸ್ವಾಗತಿಸಿ , ನರೇಂದ್ರನಾಥ ಭಂಡಾರಿ ವಂದಿಸಿ, ಶೈಲಜಾ ರಾಜೇಶ್ ಕಾರ್ಯಕ್ರಮ ನಿರೂಪಿಸಿದರು. ಕೊನೆಗೆ “ ಭೀಷ್ಮ ವಿಜಯ” ಎಂಬ ಪೌರಾಣಿಕ ಪ್ರಸಂಗದ ತಾಳಮದ್ದಳೆ ಯನ್ನು ಸಂಘದ ಸದಸ್ಯರು ಮಹೋನ್ನತವಾಗಿ ನಡೆಸಿಕೊಟ್ಟರು .
