ಕೈಕಂಬ: ಶ್ರೀ ಮಹಮ್ಮಾಯಿ ದೇವಸ್ಥಾನದಲ್ಲಿ  ಅಮ್ಮನವರ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಎ 27 ರಂದು ಸೋಮವಾರ ಸಯಂಕಾಲ ಗಂಟೆ 5-00ರಿಂದ ಸಾಮೂಹಿಕ ಪ್ರಾರ್ಥನೆ, ಆಲಯ ಪರಿಗ್ರಹ,ಪುಣ್ಯಾಹ ವಾಚನ, ರಾಕ್ಷೊಘ್ನ ಹೋಮ, ವಾಸ್ತು ಪೂಜೆ, ವಾಸ್ತು ಬಲಿ, ವಾಸ್ತುಹೋಮ, ದಿಕ್ಷಾಲಕ ಬಲಿ, ದೈವಗಳ ಪೀಠ ಬಿಂಬ ಶುದ್ದಿ, ಅಧಿವಾಸ ಹೋಮ. ಎ 28 ರ ಮಂಗಳವಾರ ಬೆಳಿಗ್ಗೆ ಗಂಟೆ 8-00ರಿಂದ ಪುಣ್ಯಾಹ ವಾಚನ, ಗಣಪತಿ ಹೋಮ, ದೈವಗಳಿಗೆ ಕಲಸಾಧಿವಾಸ, ದೈವ ಪ್ರತಿಷ್ಠೆ ಪರ್ವ ಪೂಜೆ, ನವಗ್ರಹ ಹೋಮ, ಮಧ್ಯಹ್ನ ಅನ್ನ ಸಂತರ್ಪಣೆ ಸಾಯಂಕಲ ದೇವಿ ಗುಡಿಯಲ್ಲಿ ಸಪ್ತ ಶುದ್ದಿ, ಪ್ರಾಸಾದ ಸುದ್ದಿ, ರಾಕ್ಷೊಘ್ನ ಹೋಮ, ವಾಸ್ತುಪೂಜೆ, ವಾಸ್ತುಬಲಿ, ವಾಸ್ತು ಹೋಮ, ದಿಕ್ಪಾಲಕ ಬಲಿ. ಎ. 29 ನೇ ಬುಧವಾರ ಬೆಳಿಗ್ಗೆ ಬಿಂಬ ಶುದ್ದಿ ಬಜನಾ ಸಂಕೀರ್ತನೆ ಇತ್ಯಾದಿ. ಸಾಯಂಕಾಲ ಕಲಶ ಮಂಡಳ ರಚನೆ, ಬಿಂಬಾಧಿವಾಸ ಕಲಶಾಧಿವಾಸ. ಎ.30 ರಂದು ಗುರುವಾರ ಬೆಳಿಗ್ಗೆ ಪುಣ್ಯಾಹ ವಾಚನ, ಗಣಪತಿ ಹೊಮ, 7-10ರ ವೃಷಭ ಲಗ್ನದಲ್ಲಿ ಮಹಮ್ಮಾಯಿ ಅಮ್ಮನವರ ಪ್ರತಿಷ್ಠೆ, ದುರ್ಗಾಯಾಗ, ಬ್ರಹ್ಮಕಲಶಾಭಿಷೇಕ, ನಡಾವಳಿ ನಿರ್ಣಯ, ದೇವಿ ದರ್ಶನ  ಅನ್ನಸಂತರ್ಪಣೆ. ಸಾಯಂಕಾಲ ರಾಶಿ ಪೂಜೆ, ದೈವಗಳಿಗೆ ಕೋಲ ಬಲಿ ಸೇವೆ. ಶ್ರೀ ಮಹಮ್ಮಾಯಿ ಅಮ್ಮಾನವರ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವವು ಎಡಪದವು ವೆಂಕಟೇಶ ತಂತ್ರಿಯವರ ಮಾರ್ಗದರ್ಶನದಲ್ಲಿ ಪಲ್ಕೆ ರತೀಶ್ ಭಟ್ಟರವರ ನೇತೃತ್ವದಲ್ಲಿ ಜರಗಲಿರುವುದು. ಶಾಸ್ತಾವು ಶ್ರೀ ಭೂತನಾಥೇಶ್ವರ     ಜೀರ್ಣೋಧ್ಧಾರ ಸಮಿತಿ  ಗೌರವಾಧ್ಯಕ್ಷ,   ವಿಜಯನಾಥ ವಿಠಲ ಶೆಟ್ಟಿ , ಜೀರ್ಣೋಧ್ಧಾರ ಸಮಿತಿ ಅಧ್ಯಕ್ಷರು,  ಜಯಂತ್ ಶೆಟ್ಟಿಗಾರ್   ,  ಸಂಜೀವ ಪೂಜಾರಿ ಗಾಂಧಿನಗರ   ಕೃಷ್ಣ ಅಮೀನ್ ಬ್ರಹ್ಮಕಲಶೋತ್ಸವ ಸಮಿತಿಅಧ್ಯಕ್ಷ . ಧಾರ್ಮಿಕ ಸಭಾ ಕಾರ್ಯಕ್ರಮ ಎ. 30 ಗುರುವಾರ ಅಪರಾಹ್ನ 2-30ಕ್ಕೆ ಅಧ್ಯಕ್ಷತೆಯನ್ನು  ಉಳಿಪಾಡಿಗುತ್ತು ರಾಜೇಶ್ ನಾಯಕ್  ವಹಿಸಲಿದ್ದಾರೆ. ಶ್ರೀ ವೆಂಕಟೇಶ ತಂತ್ರಿ ಎಡಪದವು ಆಶೀರ್ವಚನ ನೀಡಲಿದ್ದಾರೆ .   ಶ್ರೀ ವಾಸುದೇವ ಆರ್.ಕೊಟ್ಟಾರಿ  ಸಂಚಾಲಕರು, ಸತ್ಸಂಗ ಸಮಿತಿ ಅಳಪೆ ಕರ್ಮಾರ್ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.  ಮುಖ್ಯ ಅಥಿತಿಗಳಾಗಿ   ಸಂಸದ ನಳಿನ್ ಕುಮಾರ್, ಕಟೀಲ್, ಜಿಲ್ಲಾಉಸ್ತುವಾರಿ ಸಚಿವ  ಬಿ. ರಮಾನಾಥ ರೈ, ಮಂಗಳೂರು  ಉತ್ತರ ವಿಧಾನ ಸಭಾ ಕ್ಷೇತ್ರ ಶಾಸಕ  ಮೊಹಿದೀನ್ ಭಾವ ,ಮಾಜಿ ಜಿಲ್ಲಾ ಉಸ್ತುವಾರಿ ಸಚಿವರು   ಕೃಷ್ಣ ಜೆ. ಪಾಲೆಮಾರ್  ಶ್ರೀ ಕ್ಷೇ. ಧ. ಗ್ರಾ. ಯೋ. [ರಿ]ಧರ್ಮಸ್ಥಳ ಪ್ರಗತಿ ನಿಧಿ ನಿರ್ದೇಶಕ ಸಂಪತ್ ಕುಮಾರ್, ಶಾಸ್ತಾವು  ಶ್ರೀ ಭೂತನಾಥೇಶ್ವರ ದೇವಸ್ಥಾನ ಆಡಳಿತ ಮೊಕ್ತೇಸರ  ವಿಜಯನಾಥ ವಿಠಲ ಶೆಟ್ಟಿ , ಜಿ.ಪಂ. ಸದಸ್ಯೆ ಯಶವಂತಿ ಆಳ್ವ,  ಭಜರಂಗದಳ ಸಂಚಾಲಕ , ಭುಜಂಗ ಕುಲಾಲ್ , ಮಾಜಿ ತಾ.ಪಂ. ಉಪಾದ್ಯಕ್ಷೆ  ವಿಜಯಲಕ್ಷೀ ,  ಯತೀರಾಜ್ ಎಂ. ಶೆಟ್ಟಿ ಗಂಜಿಮಠ  ರಾಜ್ ಟೈಲ್ಸ ಮಾಲಕ , ಪೃಥ್ವಿರಾಜ್ ಆರ್.ವಿ. ,ಗಂಜಿಮಠ  ಗ್ರಾ. ಪಂ. ಅಧ್ಯಕ್ಷ   ಪುಂಡಲೀಕ ಕಾಮತ್ , ಮಾಜಿ ಜಿ.ಪಂ. ಸದಸ್ಯ ಕೃಷ್ಣ ಅಮೀನ್ ಭಾಗವಹಿಸಲಿದ್ದಾರೆ.   ಸಾಂಸ್ಕೃತಿಕ ಕಾರ್ಯಕ್ರಮಗಳು ಎ 28ರಂದು  ಮಂಗಳವಾರ ಮಧ್ಯಾಹ್ನ ಗಂಟೆ 2-30ಕ್ಕೆ ಯಾಗಸಂಕಲ್ಪ- ಮಾಗಧ ವಧ ಯಕ್ಷಗಾನ ತಾಳಮದ್ದಳೆ ಶ್ರೀ ರಾಮಾಂಜನೇಯ ವ್ಯಾಯಮ ಶಾಲೆ, ಮಳಲಿ ಇವರಿಂದ  (ವಿಶೇಷ ಅಕರ್ಷಣೆ ವಿಶಿಷ್ಟ ಕಂಠಸಿರಿಯ ಶ್ರೀ ಶಿವ ಪ್ರಸಾದ್, ಕಣ್ಣೋರಿ ಎಡಪದವು ಇವರಿಂದ ಭಾಗವತಿಗೆ) ಎ. 30 ರಂದು ಗುರುವಾರ ಅಪರಾಹ್ನ ಗಂಟೆ 2-00ರಿಂದ ನೃತ್ಯ ವೈವಿಧ್ಯ ಕಲಾಸ್ಪರ್ಶ ಡ್ಯಾನ್ಸ ಅಕಾಡಮಿ, ಗಂಜಿಮಠ ಇವರಿಂದ ಪ್ರಾಯೋಜಕರು ರವಿಪ್ರಕಾಶ್ ಗಂಜಿಮಠ, ವಿನೇಸ್ ಮತ್ತು   ವಿಕೇಶ್ ಇವರಿಂದ ನಡೆಯಲಿದೆ. ಎಂದು ಪ್ರಕಟನೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *