ಬೆಳ್ಳೂರು ಶ್ರೀ ಕಾವೇಶ್ವರ ಭಕ್ತವೃಂದದ ದಶಮಾನೋತ್ಸ ಧಾಮಕ ಸಭಾಕಾರ್ಯಕ್ರಮವು ಎ26ರಂದು ಭಾನುವಾರ ಬಟ್ಟಾಜೆಯಲ್ಲಿ ನಡೆಯಿತು. ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯನಂದ ಆಶೀರ್ವಚನ ನೀಡಿದರು.
ಅಧ್ಯಕ್ಷತೆಯನ್ನು ಕೃಷ್ಣಪ್ಪ ಪೂಜಾರಿ ಕುಕ್ಕಾಜೆ ವಹಿಸಿದ್ದರು ಧಾರ್ಮಿಕ ಭಾಷಣವನ್ನು ವಿಶ್ವ ಹಿಂದೂ ಪರಿಷತ್ ಮಂಗಳೂರು ವಿಭಾಗದ ಕಾರ್ಯಧ್ಯಕ್ಷ ಜೀತೆಂದ್ರ ಕೊಟ್ಟಾರಿ ಧಾರ್ಮಿಕ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ಭಾರತ್ ಕೋ ಅಪರೇಟಿವ್ ಬ್ಯಾಂಕ್ನ ನೀರ್ದೇಶಕ ಗಂಗಾಧರ ಪೂಜಾರಿ ಕೊಪ್ಪಳ, ಬಂಟ್ಟಾಳ ಬಿ.ಜೆ.ಪಿ ಮಂಡಲ ಪ್ರಧಾನ ಕಾರ್ಯದರ್ಶಿ ರಾಮ್ ದಾಸ್ ಬಂಟ್ಟಾಳ ಬಿ.ಜೆ.ಪಿ ಮಂಡಲ ಪ್ರಧಾನ ಕಾರ್ಯದರ್ಶಿ ದೇವಪ್ಪ ಪೂಜಾರಿ, ಕಾವೇಶ್ವರ ಭಕ್ತವೃಂದದ ಅಧ್ಯಕ್ಷ ಲೋಕೆಶ್ ಕೊಪ್ಪಳ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಮೋಹನ್ ಮುಚ್ಚೂರು ಮತ್ತುಸತೀಶ್ ನರ್ಚಾಲ್ ಇಬ್ಬರು ಕಲಾವಿದರನ್ನು ಸನ್ಮಾನಿಸಲಾಯಿತು.
ಶಶಿಕಿರಣ್ ಕಾರ್ಯಕ್ರಮ ನಿರೂಪಿಸಿದರು ರಮೇಶ್ ಬಟ್ಟಾಜೆ ಸ್ವಾಗತಿಸಿ ಧನ್ಯವಾದ ವಿತ್ತರು.









