ಬಂಟ್ವಾಳ: ದ.ಕ.ಜಿಲ್ಲೆಯಲ್ಲಿ ಈ ವರ್ಷ ಮರಳು ತೆಗೆಯುವಿಕೆ ಮತ್ತು ಸಾಗಾಣಿಕೆ ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ವಿಭಿನ್ನವಾಗಿ ಹೊರಜಿಲ್ಲೆಗಳಿಗೆ ಸಾಗಾಣಿಕೆ ಆಗುತ್ತಿರುವುದು ಹಾಗೂ ಅಧಿಕಾರಿಗಳು ಸಹ ಕೆಲವೊಮ್ಮೆ ದಂಡನೆ ಹಾಕಿ ಬಿಡುತ್ತಿರುವುದು ವಾಡಿಕೆಯಾಗಿದೆ.
ಬೆಂಗಳೂರು, ಮೈಸೂರು ಸೇರಿದಂತೆ ಹೊರಜಿಲ್ಲೆಗಳಿಗೆ ಯಥಾವತ್ತಾಗಿ ಮರಳು ಸಾಗಾಣಿಕೆ ಆಗುತ್ತಿರುವುದರಿಂದ ಮರಳು ತೆಗೆಯುವವರು ಮತ್ತು ಸಂಗ್ರಹದಾರರು ಸಹ ತಮ್ಮಲ್ಲಿರುವ ಹೊೈಗೆ ದರ 3 ಪಟ್ಟು ಹೆಚ್ಚಿಸಿದರಿಂದ ಜಿಲ್ಲೆಯಲ್ಲಿಯೇ ಗೃಹ ನಿರ್ಮಾಣ ಮಾಡುತ್ತಿರುವ ಹಾಗೂ ವಸತಿ ಸೌಲಭ್ಯ ಪಡೆದ ಫಲಾನುಭವಿಗಳು ತಮ್ಮ ಮನೆ ಕಟ್ಟಿಕೊಳ್ಳಲು ದುಬಾರಿ ಮೊತ್ತಕ್ಕೆ ಮರಳು ಪಡೆಯುತ್ತಿರುವ ಸಂಕಷ್ಟ ಎದುರಾಗಿದೆ.
ಬೆಂಗಳೂರು, ಮೈಸೂರು ಹೋಗುವ ಲಾರಿಗಳ ಜತೆಯಲ್ಲಿ ಗ್ರಾಮೀಣ ಭಾಗದಲ್ಲಿರುವ ಮನೆ ಕಟ್ಟಲು ಹೊೈಗೆ ಸಾಗಿಸುವ ಲಾರಿಗಳನ್ನು ಸಹ ತಡೆದು ನಿಲ್ಲಿಸಿ ಬೇಕಾಬಿಟ್ಟಿ ದಂಡನೆ ವಿಧಿಸುವ ಜಿಲ್ಲಾಢಳಿತದ ಕ್ರಮ ಅಸಂಬದ್ದವಾಗಿದ್ದು ಗ್ರಾಮೀಣ ಜನರು ಜಿಲ್ಲಾಢಳಿತಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಈ ವಿಷಯದಲ್ಲಿ ಜಿಲ್ಲೆಯ ಒಳಗೆ ನಿಯಮಾವಳಿ ಸರಳೀಕರಿಸಿ ಬಡವರಿಗೆ ಮನೆ ಕಟ್ಟಲು ಅವಕಾಶ ಮಾಡಿಕೊಡಬೇಕು. ಹೊರಜಿಲ್ಲೆಗಳ ಸಾಗಾಣಿಕೆಗೆ ಪ್ರತ್ಯೇಕ ನಿಯಮಾವಳಿ ರೂಪಿಸಬೇಕು. ಎಂದು ಈ ಮೂಲಕ ವಿನಂತಿ.

