ಬಂಟ್ವಾಳ: ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಇಲ್ಲಿಗೆ ಕೆ.ಎಸ.ಆರ್.ಟಿ.ಸಿ ಬಸ್ಸ್ ತಂಗುದಾಣ ನಿರ್ಮಿಸಲು ಸರಕಾರ ಹಣ ಬಿಡುಗಡೆ ಮಾಡಿದೆ ಶಿಲಾನ್ಯಾಸ ಕೂಡಾ ನಡೆದಿದೆ. ಆದರೆ ಬಿಸಿ.ರೋಡಿನಲ್ಲಿ ಹಲವಾರು ವರ್ಷಗಳಿಂದ ಜನರಿಗೆ ನಿಲ್ಲಲು ತಂಗುದಾಣವಿಲ್ಲದೆ ರಸ್ತೆಯಲ್ಲಿ ಮತ್ತು ಅಂಗಡಿ ಬಾಗಿಲಲ್ಲಿ ನಿಂತುಕೊಳ್ಳವ ಈ ವ್ಯವಸ್ಥೆ ಗೆ ಕಾಯಕಲ್ಪ ಯಾವಾಗ ಎಂದು ಜನರ ಪ್ರಶ್ನೆ ?
ಬಿ.ಸಿ.ರೋಡಿನಲ್ಲಿ ಸುಮಾರು ಹತ್ತು ವರ್ಷಗಳ ಹಿಂದೆ ಇದ್ದ ಹಳೆಯ ಪ್ರಯಾಣಿಕರ ತಂಗುದಾಣ ಮತ್ತು ಬಸ್ಸ್ ನಿಲ್ದಾಣವನ್ನು ಕೆಡವಿ ಪುರಸಭೆ ಮತ್ತು ಆಗಿನ ಬಿ.ಜೆ.ಪಿ ಆಡಳಿತ ಪಕ್ಷ ನೂತನ ಬಸ್ಸ್ ನಿಲ್ದಾಣವನ್ನು ನಿರ್ಮಿಸಿದೆ. ಪುರಸಭೆ ಹಳೆಯ ಪ್ರಯಾಣಿಕರ ತಂಗುದಾಣವನ್ನು ಕೆಡವಿದಾಗ ಜನರಿಗೆ ನೂರಾರು ಕನಸುಗಳಿತ್ತು ಅದು ಈಡೇರಬಹುದು ಎನ್ನುವ ಬಯಕೆ ಕೂಡಾ ಇತ್ತು ಆದರೆ ಪುರಸಭೆ ಮಾತ್ರ ಜನರ ಕನಸನ್ನು ನೂಚ್ಚು ನೂರು ಮಾಡಿತ್ತು. ಜನರ ಭಾವನೆಗಳಗೆ ಬೆಲೆ ನೀಡದೆ ಸಾರ್ವಜನಿಕರಿಗೆ ತೊಂದರೆ ಆಗುವಂತಹ ಸ್ಥಿತಿಯಲ್ಲಿ ಪುರಸಭೆಯ ಬೊಕ್ಕಸಕ್ಕೆ ಆದಾಯದ ಹಿನ್ನಲೆಯಲ್ಲಿ ಕೇವಲ ಬಸ್ಸ್ ನಿಲ್ದಾಣವನ್ನು ಮಾತ್ರ ನಿರ್ಮಾಣ ಮಾಡಿತ್ತು.


ಈಗಿರುವ ಬಸ್ಸು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ನಿಲ್ಲಲು ತಂಗುದಾಣ ಇಲ್ಲದೆ ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಇಲ್ಲಿನ ಪುರಸಭೆ ಬಸ್ಸು ನಿಲ್ದಾಣ ನಿರ್ಮಿಸಿ ಕೇವಲ ವಾಣಿಜ್ಯ ಹಿತದೃಷ್ಠಿಗೆ ಹೆಚ್ಚಿನ ಆದ್ಯತೆ ನೀಡಿರುವುದರಿಂದ ಪ್ರಯಾಣಿಕರಿಗೆ ನೀಡುವ ಅನುಕೂಲತೆಯನ್ನು ಕಡೆಗಣಿಸಿದೆ. ಬಿ.ಸಿ.ರೋಡಿನಿಂದ ಧರ್ಮಸ್ಥಳ, ಪುತ್ತೂರು, ಉಪ್ಪಿನಂಗಡಿ, ವಿಟ್ಲ ಸೇರಿದಂತೆ ಹೊರಜಿಲ್ಲೆಗಳಾದ ಬೆಂಗಳೂರು, ಮೈಸೂರು, ಚಿಕ್ಕಮಗಳೂರು ಮೊದಲಾದ ಯಾವುದೇ ಪ್ರದೇಶಕ್ಕೆ ಹೋಗಬೇಕಾದ ಪ್ರಯಾಣಿಕನಿಗೆ ಈ ಕರ್ಮ ತಪ್ಪಿದ್ದಲ್ಲ. ಕೈಯಲ್ಲಿ ಲಗ್ಗೇಜು, ಮಕ್ಕಳು ಇದ್ದರಂತೂ ಅವರ ಸ್ಥಿತಿ ದೇವರಿಗೆ ಪ್ರೀತಿ. ಇಷೆಲ್ಲಾ ಸಮಸ್ಯೆಯನ್ನು ನಿತ್ಯ ನಿರಂತರ ಪ್ರಯಾಣಿಕರು ಅನುಭವಿಸುತ್ತಿದ್ದರೂ ಇಲ್ಲಿನ ಪುರಸಭಾ ಆಡಳಿತಕ್ಕೆ ಇದ್ಯಾವುದು ಗಮನಕ್ಕೆ ಬಂದಿಲ್ಲ. ಸ್ಥಳಿಯ ಕೆಲ ಅಂಗಡಿದಾರರನ್ನು ಒಲೈಸಿಕೊಳ್ಳುವ ದೃಷ್ಟಿಯಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಕನಿಷ್ಟ ಶೆಲ್ಟರ್ ನಿರ್ಮಿಸಲೂ ಮನಸ್ಸು ಮಾಡಿಲ್ಲ.
ಪ್ರಯಾಣಿಕರು ನಿಲ್ಲದ ಸ್ಥಳದಲ್ಲಿ ಪ್ರಯಾಣಿಕರ ತಂಗುದಾಣ ನಿರ್ಮಿಸಿ ಭಿಕ್ಷುಕರಿಗೆ, ಅಲೆಮಾರಿಗಳಿಗೆ, ಕುಡುಕರಿಗೆ ಮಲಗಲು ಅವಕಾಶ ಮಾಡಿಕೊಡಲಾಯಿತು. ಅದರ ಪಕ್ಕವೇ ಕಸದ ರಾಶಿ ಹಾಕಿ ಪ್ರಯಾಣಿಕರು ಇತ್ತ ಮುಖ ಮಾಡದ ಸ್ಥಿತಿ ನಿರ್ಮಿಸಲಾಯಿತು. ವಾಣಿಜ್ಯ ಸಂಕೀರ್ಣದ ಮಧ್ಯದ ಒಂದು ಕೊಠಡಿಯನ್ನು ಪ್ರಯಾಣಿಕರಿಗಾಗಿ ಮೀಸಲಿಟ್ಟರೂ ಅದರೊಳಗೆ ಪಾನ್ ಮಸಾಲಗಳನ್ನು ಜಗಿದು ಉಗಿದ ಕಲೆಗಳೇ ಎಲ್ಲ ಕಡೆ ರಾರಾಜಿಸುತ್ತಿರುವುದರಿಂದ ಅದರೊಳಗೆ ಪ್ರವೇಶಿಸಲು ಪ್ರಯಾಣಿಕರು ಹಿಂದೇಟು ಹಾಕುವಂತಾಯಿತು. ಜನರು ಬಸ್ಸ್ ಗೆ ಕಾಯುವಲ್ಲಿ ನಿಲ್ಲಲು ಸಹಾಯವಾಗುವಂತಹ ಅವಕಾಶವನ್ನು ಕಲ್ಪಿಸಬೇಕಿತ್ತು. ಎಲ್ಲೋ ಒಂದು ಕಡೆ ವಾಣಿಜ್ಯ ಸಂರ್ಕೀಣದ ಒಂದು ಕೊಠಡಿಯನ್ನು ಪ್ರಯಾಣಿಕರಿಗೆ ಎಂದು ತೋರಿಸಿದೆ. ಅದು ಬಸ್ಸ್ ನಿಲ್ದಾಣದ ಒಳಗಿರುವುದರಿಂದ ಗ್ರಾಮೀಣ ಪ್ರದೇಶದ ಬಸ್ಸ್ಗಾಗಿ ಕಾಯುವರಿಗೆ ಸ್ವಲ್ಪ ಮಟ್ಟಿನ ಪ್ರಯೋಜನವಾದೀತು. ಆದರೆ ದೂರದ ಊರಿಗೆ ಹೋಗುವವರಿಗೆ ಮತ್ತು ಸರಕಾರಿ ಬಸ್ಸ್ ಗಳನ್ನು ಕಾಯುವವರು ಮಳೆ ಬಿಸಿಲಿಗೆ ರಸ್ತೆ ಬದಿಯಲ್ಲಿ ಮತ್ತು ಯಾರದೂ ಅಂಗಡಿಯ ಬಾಗಿಲಿನಲ್ಲಿ ಅವರ ಬೈಗುಲ ತಿಂದು ನಿಲ್ಲಬೇಕಾದ ಅನಿವಾರ್ಯತೆ ಪುಸರಭೆಯಿಂದ ಒದಗಿ ಬಂದಿದೆ.
ಪುರಸಭಾ ಆಡಳಿತದ ನಿರ್ಲಕ್ಷ ಧೋರಣೆ ಹಾಗೂ ನಿರ್ವಹಣೆಯ ಕೊರತೆಯಿಂದಾಗಿ ಪ್ರಯಾಣಿಕರಿಗೆ ಬಸ್ಸುನಿಲ್ದಾಣ ಶಾಪವಾಗಿ ಪರಿಣಮಿಸಿದೆ. ಈಗಿನ ಕಾಂಗ್ರೇಸ್ ಆಡಳಿತÀವರೊಳಗಿನ ಕಚ್ಚಾಟ ಬಿಟ್ಟು ಜನರ ಹಿತಕ್ಕಾಗಿ ಕೆಲಸ ಮಾಡುವ ಮನಸ್ಸು ಮಾಡಿದ್ದೇ ಆದರೆ ಇಲ್ಲಿ ಕೃತಕ ಸೆಲ್ಟರ್ ಹಾಕಿ ಜನರಿಗೆ ಅನುಕೂಲವಾಗುವ ತಂಗುದಾಣವನ್ನು ನಿರ್ಮಿಸಬಹುದು. ಕೆ.ಎಸ್.ಆರ್.ಟಿ.ಸಿ. ಪೊಯಿಂಟ್ ನ್ನು ತೆಗೆದು ಅಲ್ಲಿ ಪಾಳು ಬಿದ್ದಿರುವ ಜಾಗದಲ್ಲಿ ಈ ಜನರಿಗೆ ತಂದುದಾಣವನ್ನು ನಿಮಿಸಲು ಮನಸ್ಸು ಮಾಡ ಬೇಕು ಜನರು ಒತ್ತಾಯಿಸುತ್ತಿದ್ದಾರೆ. ಉದ್ಯಮಿಗಳ ಬೆದರಿಕೆಗೆ ಜಗ್ಗದೆ ಹಿಂದಿನ ಆಡಳಿತದ ಜನವಿರೋದಿ ¨ಸ್ಸ್ ತಂಗುದಾಣದಲ್ಲಿ ಜನರಿಗೆ ಮಳೆ ಬಿಸಿಲಿಗೆ ರಕ್ಷಣೆ ಪಡೆಯಲು ಸೆಲ್ಟರ್ ಹಾಕಿ ವ್ಯವಸ್ಥೆ ಕಲ್ಪಿಸುತ್ತಾರೋ ಅಥವಾ ಹಿಂದಿನ ಆಡಳಿತ ಹಾಕಿದ ಹೆಜ್ಜೆಯಲ್ಲಿ ಇವರು ಮುಂದುವರಿಯುತ್ತಾರೋ ಎಂಬುದನ್ನು ಕಾದುನೋಡಬೇಕಾಗಿದೆ.

