ಸುದ್ದಿ9 ಕೈಕಂಬ: ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಧಾರ್ಮಿಕ – ಸಾಂಪ್ರಾದಾಯ ವಿಧಾನಗಳೊಂದಿಗೆ ಧ್ವಜಾರೋಹಣಗೊಂಡಿತು.
ಶ್ರೀ ದೇವಿಗೆ 49 ಕಲಶಾಭಿಷೇಕ, ಗಣಪತಿ ಹೋಮ, ಮಧ್ಯಾಹ್ನ ಅನ್ನ ಸಂತರ್ಪಣೆ ರಾತ್ರಿ ಬಲಿ ಉತ್ಸವ, ಕಲ್ಲುಡ ನೇಮ ಜರಗಿತು.
ದೇವಳದ ಧರ್ಮದರ್ಶಿ ಶ್ರೀ ನಿರಂಜನ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ವೇದಮೂರ್ತಿ ಕುಡುಪು ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ವಿಧಾನಗಳು ಜರಗಿದವು. ಆಡಳಿತ ಸಮಿತಿಯ ನಾರಾಯಣ ಅಮೀನ್ ಮತ್ತಿತರರು ಉಪಸ್ಥಿತರಿದ್ದರು.








