ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದ ವಾರ್ಷಿಕ ರಥೋತ್ಸವ ನಿಮಿತ್ತ ತೂಟೆದಾರ (ಅಗ್ನಿಕೇಳಿ) ಬುಧವಾರ ಮುಂಜಾನೆ ದೇವಳದ ರಥಬೀದಿಯಲ್ಲಿ ನಡೆಯಿತು.

ಮಂಗಳವಾರ ತಡರಾತ್ರಿ ರಥೋತ್ಸವ ನಡೆದು, ಮುಂಜಾನೆ ದೇವರು ಜಳಕಕ್ಕೆ ಹೋಗಿ ರಥಬೀದಿಯ ಕಟ್ಟೆಗೆ ಬಂದ ಬಳಿಕ ತೂಟೆದಾರ ಜರಗುತ್ತದೆ. ಇದರಲ್ಲಿ ವೃತಸ್ಥರಾದ ಅತ್ತೂರು ಮತ್ತು ಕೊಡೆತ್ತೂರು ಗ್ರಾಮಗಳ ಸುಮಾರು 300 ಮಂದಿ ಭಾಗವಹಿಸುವರು. ಸುಮಾರು 30ರಿಂದ 45 ನಿಮಿಷಗಳ ಈ ತೂಟೆದಾರ ನಡೆಯುತ್ತದೆ. ಜಾತ್ರೆಯ ವಿಧಿಗಳಲ್ಲಿ ಇದೂ ಒಂದಾಗಿದೆ.
