ಕಿನ್ನಿಗೋಳಿ: ನಿನ್ನೆ ರಾತ್ರಿ ಸಿಡಿಲು ಸಹಿತ ಸುರಿದ ಭಾರಿ ಮಳೆಗೆ ಹಲವು ಕಡೆ ಹಾನಿಯುಂಟಾಗಿದೆ ಹಳೆಯಂಗಡಿ ರೈಲ್ವೆ ಗೇಟ್ ಬಳಿ ಮರದ ಕೊಂಬೆ ಮುರಿದು ವಿದ್ಯುತ್ ತಂತಿ ಮೇಲೆ ಮುರಿದು ಬಿದ್ದು ಹಲವು ವಿದ್ಯುತ್ ಕಂಬಗಳು ಧರೆಗುಳಿದಿದೆ, ಮಾತ್ರವಲ್ಲದೆ ಮನೆಯೊಂದಕ್ಕೆ ಸಿಡಿಲು ಬಡಿದು ಸಾವಿರಾರು ರೂಪಯಿ ಹಾನಿಯುಂಟಾಗಿದೆ, ಕಿನ್ನಿಗೋಳಿ ಸಮೀಪ ಉಲ್ಲಂಜೆ ಯಲ್ಲಿ ಮುತ್ತಯ್ಯ ರಾಮಣ್ನ ಶೆಟ್ಟಿ ಎಂಬುವವರ ಮನೆಗೆ ನಿನ್ನೆ ರಾತ್ರಿ ಸುಮಾರು ೧೦ ಗಂಟೆಯ ಹೊತ್ತಿಗೆಸಿಡಿಲು ಬಡಿದು ಮನೆಯ ವಯರಿಂಗ್ ಸಂಪೂರ್ಣವಾಗಿ ಸುಟ್ಟು ಹೋಗಿದೆ ಮಾತ್ರವಲ್ಲದೆ ಮನೆಯ ಗೋಡೆ ಬಿರುಕು ಬಿಟ್ಟಿದೆ, ಮನೆಯ ಹಿಂಬಾಗದ ತೆಂಗಿನ ಮರ ಸುಟ್ಟು ಹೋಗಿದ್ದು ಸುಮಾರು ೪೦ ಸಾವಿರ ರೂಪಾಯಿ ನಷ್ಟ ಉಂಟಾಗಿದೆ.




