ಬಂಟ್ವಾಳ: ಭೌಗೋಳಿಕ ವ್ಯತ್ಯಾಸ ನೆಪದಲ್ಲಿ ರಾಜ್ಯ ಮರಳು ನೀತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಕೈಬಿಡಬೇಕು ಎಂಬ ಮರಳು ಉದ್ಯಮಿಗಳ ಕೂಗು ಒಂದೆಡೆಯಾದರೆ, ಅಕ್ರಮ ಮರಳುಗಾರಿಕೆ ದಂಧೆ ತಡೆಯಲು ಜಿಲ್ಲಾಡಳಿತ ಕೈಗೊಂಡ ಎಲ್ಲಾ ಪ್ರಯತ್ನಗಳೂ ವಿಫಲವಾಗುತ್ತಿದೆ ಎನ್ನುತ್ತಾರೆ ನಾಗರಿಕರು.
ಈ ಹಿಂದೆ ನೇತ್ರಾವತಿ ನದಿಯ ಕೆಲವೊಂದು ಪ್ರದೇಶಗಳಲ್ಲಿ ಮಾತ್ರ ಮುಕ್ತ ಮರಳುಗಾರಿಕೆ ನಡೆಯುತ್ತಿದ್ದರೆ, ಇದೀಗ ನದಿ ತೀರದ ಬಹುತೇಕ ಕಡೆಗಳಲ್ಲಿ ಕೃತಕ ರಸ್ತೆ ನಿಮರ್ಿಸಿ ರಾತ್ರಿ -ಹಗಲು ನಿಯಮ ಮೀರಿ ವಿವಿಧ ಯಂತ್ರೋಪಕರಣ ಬಳಸಿಕೊಂಡು ಮರಳು ದಂಧೆ ನಡೆಯುತ್ತಿದೆ ಎಂಬ ಆರೋಪ ನಾಗರಿಕರಿಂದ ವ್ಯಾಪಕವಾಗಿ ಕೇಳಿ ಬಂದಿದೆ.

ತಾಲ್ಲೂಕಿನ ನಂದಾವರ ಪ್ರದೇಶದಲ್ಲಿ ಮೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ನೀಡುವ ಮೂಲಕ ರಾತ್ರ್ರಿ-ಹಗಲೆನ್ನದೆ ಎಗ್ಗಿಲ್ಲದೆ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ದಂಧೆಗೆ ಮಂಗಳೂರು ಉಪವಿಭಾಗಾಧಿಕಾರಿ ಡಾ.ಅಶೋಕ್ ಮತ್ತು ಇಲ್ಲಿನ ತಹಶೀಲ್ದಾರ್ ಪುರಂದರ ಹೆಗ್ಡೆ ನೇತೃತ್ವದಲ್ಲಿ ನಡೆದ ಪ್ರತ್ಯೇಕ ಕಾಯರ್ಾಚರಣೆಯಲ್ಲಿ ತಾತ್ಕಾಲಿಕ ಸ್ಥಗಿತಗೊಂಡಿದೆ. ಇನ್ನೊಂದೆಡೆ ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಗದಿತ ಮಿತಿಗಿಂದ ಅಧಿಕ ಭಾರ ಹೊತ್ತು ಮರಳು ಸಾಗಿಸುವ ಹಲವಾರು ಲಾರಿಗಳನ್ನು ಬಂಟ್ವಾಳ ಇನ್ಸ್ಪೆಕ್ಟರ್ ಕೆ.ಯು.ಬೆಳ್ಳಿಯಪ್ಪ, ಉಪವಿಭಾಗಾಧಿಕಾರಿ ಡಾ.ಅಶೋಕ್ ಸಹಿತ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡು ದಂಡ ವಿಧಿಸಿದ್ದರೂ ಪ್ರತಿದಿನ ಟಪರ್ಾಲು ಮುಚ್ಚಿಕೊಂಡು ಮರಳು ಲಾರಿಗಳು ಓಡಾಟ ನಡೆಸುತ್ತಲೇ ಇದೆ.
ಇದಕ್ಕೆ ಬದಲಾಗಿ ಪಾಣೆಮಂಗಳೂರು ಹಳೆಸೇತುವೆ ಸಮೀಪದಲ್ಲಿ ಪರವಾನಿಗೆ ನಿಯಮಾವಳಿ ಉಲ್ಲಂಘಿಸಿ ಮರಳುಗಾರಿಕೆ ನಡೆಸಲು ಜೆಸಿಬಿ ಮೂಲಕ ರಸ್ತೆ ನಿಮರ್ಿಸುವ ಪ್ರಕ್ರಿಯೆ ಭರದಿಂದ ನಡೆಯುತ್ತಿದೆ. ಈ ದಂಧೆಯಲ್ಲಿ ಕೆಲವೊಂದು ಕ್ರಿಮಿನಲ್ ಹಿನ್ನೆಲೆ ಹೊಂದಿರುವ ವ್ಯಕ್ತಿಗಳು ಕೂಡಾ ಶಾಮೀಲಾಗಿದ್ದು, ಜಿಲ್ಲೆಯಲ್ಲಿ ಮರಳು ಉದ್ಯಮಿಗಳ ಪ್ರತ್ಯೇಕ -ಪ್ರತ್ಯೇಕ ಸಂಘಟನೆಗಳೂ ತಲೆಯೆತ್ತಿದೆ.
ಈಚೆಗೆ ನಂದಾವರದಲ್ಲಿ ನಡೆಯುತ್ತಿದ್ದ ಮರಳುಗಾರಿಕೆ ತಡೆಯಲು ಹೋಗಿದ್ದ ಗ್ರಾಮಕರಣಿಕ ತೌಫೀಕ್ ಎಂಬವರಿಗೆ ಹಲ್ಲೆ ನಡೆಸಿದ ಪ್ರಕರಣವೂ ನಡೆದಿದೆ. ಇಲ್ಲಿನ ಅಕ್ರಮ ಮರಳುಗಾರಿಕೆಯಿಂದ ಬಹುತೇಕ ರಸ್ತೆಗಳು ಕೂಡಾ ಹದಗೆಟ್ಟು ಹೋಗಿದೆ ಎಂದು ಆರೋಪಿಸಿ ಸ್ಥಳೀಯ ಸಜಿಪಮುನ್ನೂರು ಗ್ರಾಮ ಪಂಚಾಯಿತಿ ಎದುರು ಸ್ಥಳೀಯರು ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದರು.
ಇದೀಗ ಸರಪಾಡಿ, ಕಡೇಶ್ವಾಲ್ಯ, ಬರಿಮಾರು, ಬ್ರಹ್ಮರಕೂಟ್ಲು, ತುಂಬೆ, ಪಾಣೆಮಂಗಳೂರು, ನಂದಾವರ, ಕೈಕುಂಜೆ, ಫರಂಗಿಪೇಟೆ, ಅಕರ್ುಳ, ಅಡ್ಯಾರು ಮತ್ತಿತರ ಕಡೆಗಳಲ್ಲಿ ಜೆಸಿಬಿ ಮತ್ತಿತರ ಬೃಹತ್ ಗಾತ್ರದ ಯಂತ್ರೋಪಕರಣ ಬಳಸಿ ರಾತ್ರಿಯೂ ಎಗ್ಗಿಲ್ಲದೆ ಮರಳು ದಂಧೆ ನಡೆಯುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕೃತಕ ಅಭಾವ ಸೃಷ್ಟಿ ಆರೋಪ:
ನೇತ್ರಾವತಿ ನದಿಯಿಂದ ಮರಳು ಮೇಲೆತ್ತಿದರೆ ನದಿಯಲ್ಲಿ ಕುಡಿಯುವ ನೀರಿನ ಸಂಗ್ರಹದಲ್ಲಿ ಹೆಚ್ಚಳವಾಗುತ್ತದೆ. ಮಾತ್ರವಲ್ಲದೆ ಮಳೆಗಾಲದಲ್ಲಿ ನೆರೆ ನಿಯಂತ್ರಣವೂ ಸಾಧ್ಯವಾಗುತ್ತದೆ. ಇದಕ್ಕಾಗಿ ಪಾಣೆಮಂಗಳೂರು ಸೇತುವೆ ಬಳಿ ಅಂತರ ಕಾಯ್ದುಕೊಂಡು ಉಳಿದ ನಿಗದಿಪಡಿಸಿದ ಸ್ಥಳಗಳಲ್ಲಿ ಮರಳುಗಾರಿಕೆಗೆ ಮುಕ್ತ ಅವಕಾಶ ಒದಗಿಸಬೇಕು. ಇದರಿಂದಾಗಿ ಜನಸಾಮಾನ್ಯರು ಮನೆ ಕಟ್ಟುವುದು ಸೇರಿದಂತೆ ವಿವಿಧ ರೀತಿಯಲ್ಲಿ ಬಳಕೆಗೆ ಅನುಕೂಲವಾಗುತ್ತದೆ.
ಇದೀಗ ಹೊರ ಜಿಲ್ಲೆಯಲ್ಲಿ ದುಪ್ಪಟ್ಟು ದರ ಪಡೆಯುವುದಕ್ಕಾಗಿ ಎಗ್ಗಿಲ್ಲದೆ ಅಕ್ರಮ ಮರಳುಗಾರಿಕೆ ದಂಧೆ ನಡೆಸುವ ಮೂಲಕ ಕೃತಕ ಅಭಾವ ಸೃಷ್ಟಿಸಲಾಗುತ್ತಿದೆ. ಇದಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಹಾಗೂ ರಾಜಕಾರಣಿಗಳ ಬಾಹ್ಯ ಬೆಂಬಲವೂ ಇದೆ ಎಂಬ ಆರೋಪವೂ ನಾಗರಿಕರಿಂದ ಕೇಳಿ ಬರುತ್ತಿದೆ.
-ಮೋಹನ್ ಕೆ.ಶ್ರೀಯಾನ್
