ಗಯಾ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಬಿಹಾರದ ಗಯಾದಲ್ಲಿ ಸಭೆ ನಡೆಸಲು ಆಗಮಿಸುವ ಒಂದು ಗಂಟೆ ಮೊದಲು ಮಾವೋವಾದಿಗಳು ಎರಡು ಮೊಬೈಲ್ ಟವರ್ ಗಳನ್ನು ಸ್ಫೋಟಿಸಿ ತಮ್ಮ ಇರುವಿಕೆಯ ಸಾಕ್ಷಿ ನೀಡಿದ್ದಾರೆ. ಗಯಾದ ದುಮರಿಯಾ ಬಜಾರ್ ಮತ್ತು ಮಜೌಲಿ ಜಿಲ್ಲೆಯಲ್ಲಿ ಖಾಸಗಿ ಸಂಸ್ಥೆಗೆ ಸೇರಿದ ಎರಡು ಮೊಬೈಲ್ ಟವರ್ ಬಳಿ ಜಮಾಯಿಸಿದ ನೂರಕ್ಕೂ ಅಧಿಕ ಮಾವೋವಾದಿಗಳು ಅವುಗಳನ್ನು ಸ್ಫೋಟಿಸಿದ್ದಾರೆ. ಮಾವೋ ಪೀಡಿತ ಪ್ರದೇಶಗಳಾದ ಸಾಸಾರಾಮ್ ಮತ್ತು ಗಯಾದಲ್ಲಿ ಮೋದಿ ಇಂದು ಸಭೆ ನಡೆಸಲಿದ್ದಾರೆ. ಈ ಪ್ರದೇಶಗಳಲ್ಲಿ ಚುನಾವಣೆಯ ಸಮಯದಲ್ಲಿ ಮಾವೋವಾದಿಗಳು ಅಟ್ಟಹಹಾಸ ಮೆರೆಯಬಹುದೆಂದು ಮೊದಲೇ ನಿರೀಕ್ಷಿಸಲಾಗಿತ್ತು. ಹಾಗಾಗಿ ಸಭೆಗೆ ವ್ಯಾಪಕ ಭದ್ರತೆ ಒದಗಿಸಲಾಗಿದೆ.

mobile-tower-370x264

By suddi9

Leave a Reply

Your email address will not be published. Required fields are marked *